ಪ್ರಯಾಣ ಸಮಯ ಉಳಿಕೆ, ಮೈಸೂರು- ಬೆಳಗಾವಿ ವಿಮಾನ ಹಾರಾಟ ಆರಂಭ

Kannadaprabha News   | Asianet News
Published : Jan 18, 2020, 03:18 PM IST
ಪ್ರಯಾಣ ಸಮಯ ಉಳಿಕೆ, ಮೈಸೂರು- ಬೆಳಗಾವಿ ವಿಮಾನ ಹಾರಾಟ ಆರಂಭ

ಸಾರಾಂಶ

ಮೈಸೂರು- ಬೆಳಗಾವಿ ನಡುವೆ ವಿಮಾನ ಹಾರಾಟಕ್ಕೆ ಸಂಸದ ಪ್ರತಾಪ್‌ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ, ಬಿಜೆಪಿ ಮುಖಂಡ ಎಚ್‌.ವಿ. ರಾಜೀವ್‌ ಅವರು ಶುಕ್ರವಾರ ಹಸಿರು ನಿಶಾನೆ ತೋರಿದರು.

ಮೈಸೂರು(ಜ.18): ಮೈಸೂರು- ಬೆಳಗಾವಿ ನಡುವೆ ವಿಮಾನ ಹಾರಾಟಕ್ಕೆ ಸಂಸದ ಪ್ರತಾಪ್‌ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ, ಬಿಜೆಪಿ ಮುಖಂಡ ಎಚ್‌.ವಿ. ರಾಜೀವ್‌ ಅವರು ಶುಕ್ರವಾರ ಹಸಿರು ನಿಶಾನೆ ತೋರಿದರು.

ಮೈಸೂರು ವಿಮಾನ ನಿಲ್ದಾಣದಿಂದ ಬೆಳಗಾವಿಗೆ ಪ್ರಯಾಣ ಆರಂಭಿಸಿದ ಟ್ರೂಜೆಟ್‌ ವಿಮಾನಕ್ಕೆ ಶುಕ್ರವಾರ ಬೆಳಗ್ಗೆ 10.30ಕ್ಕೆ ಹಸಿರು ನಿಶಾನೆ ತೋರಲಾಯಿತು. ಈ ವಿಮಾನವು ಬೆಳಗ್ಗೆ 9.35ಕ್ಕೆ ಬೆಳಗಾವಿಯಿಂದ ಹೊರಟು ಬೆಳಗ್ಗೆ 11ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಬರಲಿದೆ. ಅದೇ ವಿಮಾನವು ಬೆಳಗ್ಗೆ 11.20ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12.45ಕ್ಕೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಪ್ರಯಾಣ ದರ 900 ನಿಗದಿಯಾಗಿದೆ.

ಮೈಸೂರು ಮೇಯರ್ ಸ್ಥಾನ JDS, ಕಾಂಗ್ರೆಸ್ ಮೈತ್ರಿ ತೆಕ್ಕೆಗೆ..!

ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಸೇಫ್‌ ವ್ಹೀಲ್‌ ಮುಖ್ಯಸ್ಥ ಬಿ.ಎಸ್‌. ಪ್ರಶಾಂತ್‌, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್‌. ಮಂಜುನಾಥ್‌ ಮೊದಲಾದವರು ಇದ್ದರು.

PREV
click me!

Recommended Stories

ಗಾಲಿ ರೆಡ್ಡಿ ವಿರುದ್ಧ FIR ಆಗುವವರೆಗೂ ಸ್ಥಳ ಬಿಟ್ಟು ಹೋಗಲ್ಲ ಎಂದ ಭರತ್ ರೆಡ್ಡಿ: ಒಂದೇ ಸಮಯಕ್ಕೆ ಇಬ್ಬರು ನಾಯಕರ ಸುದ್ದಿಗೋಷ್ಠಿ
ಬೆಂಗಳೂರು : 9 ಟನ್‌ ಮದ್ಯದ ಬಾಟಲ್‌, ಚಪ್ಪಲಿ ರಾಶಿ ತೆರವು