ಚಾರ್ಮಾಡಿ ಘಾಟಿಯ 2000 ಅಡಿ ಪ್ರಪಾತಕ್ಕೆ ಬಿದ್ದು ಟಿಪ್ಪರ್ ಲಾರಿ ಅಪ್ಪಚ್ಚಿ, ಪವಾಡ ಸದೃಶವಾಗಿ ಬದುಕಿದ ಚಾಲಕ

By Suvarna News  |  First Published Jan 13, 2024, 8:47 PM IST

ಲಾರಿಚಾಲಕ ತನ್ನ  ನಿಯಂತ್ರಣ ತಪ್ಪಿ ಒಂದಲ್ಲ ಎರಡಲ್ಲ ಬರೋಬ್ಬರಿ ಎರಡು ಸಾವಿರ ಅಡಿ ಪ್ರಪಾತಕ್ಕೆ ಲಾರಿ ಸಮೇತ ಬಿದ್ದು ಪವಾಡ ಸದಸ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜ.13): ಅದು ಪ್ರಕೃತಿ ಮಡಿಲಲ್ಲಿರೋ ಹಾವು ಬಳುಕಿನ ಇಕ್ಕಟ್ಟಿನ ರಸ್ತೆ. ಸ್ವಲ್ಪ ಯಾಮಾರಿದ್ರು ಸಂಚರಿಸುವ ವಾಹನ ಸವಾರರ ಮೃತದೇಹ ಸಿಗೋದು ಬಲು ಕಷ್ಟ. ಕೂದಲೆಳೆ ಎಚ್ಚರ ತಪ್ಪಿದ್ರು ಪ್ರಾಣ ಹೋಗೋದು ಗ್ಯಾರೆಂಟಿ.  ಆದ್ರೆ ಇಲ್ಲೊಬ್ಬ ಲಾರಿ ಚಾಲಕ ಬರೋಬ್ಬರಿ 2000 ಅಡಿ ಪ್ರಪಾತಕ್ಕೆ ಬಿದ್ರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. 

Tap to resize

Latest Videos

undefined

ಚಾರ್ಮಾಡಿ ಘಾಟ್ ನಲ್ಲಿ ಬಿದ್ದ ಲಾರಿ : 
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆಯ ಮೂಲಕ ಹಾದುಹೋಗಿರುವ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ. ಕೊಟ್ಟಿಗೆಹಾರದಿಂದ ಆರಂಭವಾಗುವ ಘಾಟಿ ತಿರುಗಿನ ರಸ್ತೆ ವಾಹನ ಸವಾರದ ಪಾಲಿಗೆ ಯಮ ಸ್ವರೂಪಿ ಆಗ್ತಿದೆ. ಸ್ವಚ್ಛಂದ ರಸ್ತೆ. ಸುತ್ತಲು ಹಚ್ಚ ಹಸಿರಿನ ಪ್ರಕೃತಿ ಮಡಿಲು. ಹಸಿರು ಗುಡ್ಡಗಳ ನಡುವೆ ಹಾವು ಬಳಿಕಿನಂತೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ. ಇದೇ ರಸ್ತೆಯಲ್ಲಿ ಕಳೆದ ರಾತ್ರಿ ಲಾರಿಚಾಲಕ ತನ್ನ  ನಿಯಂತ್ರಣ ತಪ್ಪಿ ಒಂದಲ್ಲ ಎರಡಲ್ಲ ಬರೋಬ್ಬರಿ ಎರಡು ಸಾವಿರ ಅಡಿ ಪ್ರಪಾತಕ್ಕೆ ಲಾರಿ ಸಮೇತ ಬಿದ್ದು ಪವಾಡ ಸದಸ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.  ಘಾಟಿಯ ತಿರುವಿನ ರಸ್ತೆಯಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ರಸ್ತೆ ಕಾಣದೆ ತಡೆ ಗೋಡೆಗೆ ಗುದ್ದಿ 2,000 ಅಡಿ ಪ್ರಪಾತಕ್ಕೆ ಲಾರಿ ಉರುಳಿ ಬಿದ್ದಿದೆ. ಗಂಭೀರ ಗಾಯಗೊಂಡಿರುವ ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮುಖೇಶ್ ಅಂಬಾನಿ ಭಾವೀ ಭಾವ ಕೂಡ ಆಗರ್ಭ ಶ್ರೀಮಂತ, ಅವರ ಪತ್ನಿ ಆಸ್ತಿ ಕೂಡ ಕಮ್ಮಿಯೇನಿಲ್ಲ!

ತಡೆಗೋಡೆ ನಿರ್ಮಾಣಕ್ಕೆ ಒತ್ತಾಯ : 
ಇನ್ನು ಸಾವಿರಾರು ಅಡಿ ಆಳಕ್ಕೆ ಲಾರಿ ಉರುಳಿ ಬಿದ್ದರು ಲಾರಿ ಚಾಲಕ ಮೋಹನ್ ಜೀವಂತ ಉಳಿದಿರುವುದು ನಿಜಕ್ಕೂ ಆಶ್ಚರ್ಯ ತರಿಸಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಲಾರಿ ಚಾಲಕನ ಸೊಂಟ ಮುರಿದಿದ್ದು, ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ತಿಂಗಳಲ್ಲಿ ಮೂರ್ನಾಲ್ಕು ವಾಹನಗಳು ಇದೇ ಜಾಗದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಅಪಾಯ ತಿಳಿದಿದ್ದರು, ಉತ್ತಮ ರೀತಿಯ ತಡೆಗೋಡೆ ನಿರ್ಮಿಸಿದಿರುವುದು ಈ ಅನಾಹುತಕ್ಕೆ ಕಾರಣ ಎನ್ನಲಾಗುತ್ತಿದೆ.

ಮಳೆಗಾಲ ಹಾಗೂ ಚಳಿಗಾಲ ಆರಂಭವಾಗುತ್ತಿದ್ದಂತೆ ಚಾರ್ಮಾಡಿ ರಸ್ತೆಯಲ್ಲಿ ದಟ್ಟವಾದ ಮಂಜು ಕವಿಯೋ ಕಾರಣ ರಸ್ತೆಯ ಇಕ್ಕೆಲ ಕಾಣದೆ ಈ ಅನಾಹುತಗಳು ಸಂಭವಿಸುತ್ತಿದೆ. ವರ್ಷಕ್ಕೆ ಏನಿಲ್ಲ ಅಂದ್ರು ಹತ್ತಾರು ಅಪಘಾತಗಳು ಪದೇ ಪದೇ ಸಂಭವಿಸುತ್ತಿದ್ದು ಸರ್ಕಾರ ಚಾರ್ಮಾಡಿ ರಸ್ತೆ ಅಭಿವೃದ್ಧಿಗೆ ತುರ್ತು ವೇಗ ನೀಡಬೇಕಿದೆ.

ರೇಸ್‌ ಕೋರ್ಸ್‌ನಲ್ಲಿ ರೌಡಿಗಳಿಂದ ಬೆಟ್ಟಿಂಗ್‌ ದಂಧೆ, ಸಿಸಿಬಿ ದಾಳಿಗೆ ಪೊಲೀಸ್‌ ಆಯುಕ್ತರ ಪ್ರತಿಕ್ರಿಯೆ

ಒಟ್ಟಾರೆ ಕಾಫಿ ನಾಡಿನ ಈ ಡೆಡ್ಲಿ ಡೇಂಜರ್ ಚಾರ್ಮಾಡಿ ರಸ್ತೆ ವಾಹನ ಸವಾರರ ಪಾಲಿಗೆ ಯಮ ಸ್ವರೂಪಿ ರಸ್ತೆಯಾಗಿ ಮಾರ್ಪಾಟಾಗುತ್ತಿರುವುದು ನಿಜಕ್ಕೂ ದುರಂತ. ಕಡೂರಿನಿಂದ ಮಂಗಳೂರು ಕರಾವಳಿ ಸಂಪರ್ಕಿಸುವ ಮುಖ್ಯ ರಸ್ತೆ ಯಾಗಿದ್ದರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ಅನಾಹುತಗಳ ನಂತರವಾದರೂ ಸರ್ಕಾರ ಇತ್ತ ಗಮನ ಹರಿಸಬೇಕಿದೆ.

click me!