ಬಿಜೆಪಿ ಕಾಲದ ಕೋವಿಡ್‌ ಹಗರಣ: ನಮ್ಮ ಸರ್ಕಾರ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ಸಚಿವ ಮಂಕಾಳ ವೈದ್ಯ

Published : Nov 19, 2024, 04:34 PM IST
ಬಿಜೆಪಿ ಕಾಲದ ಕೋವಿಡ್‌ ಹಗರಣ: ನಮ್ಮ ಸರ್ಕಾರ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ಸಚಿವ ಮಂಕಾಳ ವೈದ್ಯ

ಸಾರಾಂಶ

ನಮ್ಮ‌ ಸರ್ಕಾರ ಯಾರ ಕಾರ್ಡ್ ರದ್ದು ಮಾಡಿಲ್ಲ. ಅನರ್ಹರಿಗೆ ಬಿಪಿಎಲ್ ಕಾರ್ಡ್ ಇದ್ದರೆ ಅದು ರದ್ದಾಗಬೇಕು. ಅರ್ಹರಿಗೆ ಈಗಲೂ ಬಿಪಿಎಲ್ ಕಾರ್ಡ್ ಕೊಡುತ್ತಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದರು.  ಬಡವರು ಹಸಿದುಕೊಂಡು ಇರಬಾರದು ಎಂದು ನಾವು ಕೊಡುತ್ತಿದ್ದೇವೆ. ಬಡವರಿಗೆ ಈಗಲೂ ಬಿಪಿಎಲ್ ಕಾರ್ಡ್ ಕೊಡುತ್ತೇವೆ: ಸಚಿವ ಮಂಕಾಳ ವೈದ್ಯ 

ಕಾರವಾರ(ನ.19):  ದೇಶದಲ್ಲಿ ಕೋವಿಡ್ ಕಿಟ್ ಲಭ್ಯವಿದ್ರೂ, ಚೀನಾದಿಂದ ತರಿಸಿದ್ರು. ಒಂದು ದರವನ್ನು ತೋರಿಸಿ ಹೆಚ್ಚಿನ ದರವನ್ನು ಬಿಲ್ ಮಾಡಿಕೊಂಡಿದ್ದಾರೆ ಬಿಜೆಪಿಯವರು ಮತ್ತೆ ದೊಡ್ಡದಾಗಿ ಸ್ವದೇಶಿ ಅಂತ ಬಿಂಬಿಸಿಕೊಳ್ತಾರೆ. ಆದರೆ, ಇದಕ್ಕಿಂತ ಪ್ರೂಫ್ ಏನು ಬೇಕು?. ಈ ಹಗರಣದಲ್ಲಿ ನೇರ ಕೈವಾಡ ಅಂದಿನ ಬಿಜೆಪಿ ಸರ್ಕಾರದ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಚಿವರಾಗಿದ್ದ ಶ್ರೀರಾಮುಲು ಅವರದ್ದು, ಅವರ ಹಗರಣ ಮುಚ್ಚಿಹಾಕಲು ಡಾ. ಸುಧಾಕರ್ಅ ವರನ್ನು ಸಚಿವರನ್ನಾಗಿ ಮಾಡಿದ್ದರು ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವ ಮಂಕಾಳ ವೈದ್ಯ ಟೀಕಾ ಪ್ರಹಾರ ನಡೆಸಿದ್ದಾರೆ. 

ಇಂದು(ಮಂಗಳವಾರ) ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಂಕಾಳು ವೈದ್ಯ ಅವರು, ನಮ್ಮ ಸರ್ಕಾರ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ನಾವು ತನಿಖಾ ಸಮಿತಿ ಮಾಡಿದ್ದು, ಪ್ಯಾಚ್ ಅಪ್ ಮಾಡಲು ಬಂದವರು ಕೂಡಾ ಅದರಲ್ಲಿ ಸೇರ್ಕೊತ್ತಾರೆ. ಬಿಜೆಪಿಯವರಂತೆ ಸುಳ್ಳು ಹೇಳಲು ನಾವು ತಯಾರಿಲ್ಲ ಎಂದು ಕಿಡಿ ಕಾರಿದ್ದಾರೆ. 

ರಿತೇಶ್ ಕುಮಾರ್ ಸಿಂಗ್ ಉತ್ತರಕನ್ನಡ ಜಿಲ್ಲೆಯ ಸೆಟ್ಲ್‌ಮೆಂಟ್ ಕಾರ್ಯದರ್ಶಿ: ಸಚಿವ ಮಂಕಾಳು ವೈದ್ಯ ಆರೋಪ

ರಾಜ್ಯದಲ್ಲಿ ವಕ್ಫ್‌ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಮಂಕಾಳ ವೈದ್ಯ,  ಈ ಹಿಂದೆ ಸಿಎಂ‌ ಆಗಿದ್ದ ಬೊಮ್ಮಾಯಿ ವಕ್ಫ್‌ ಆಸ್ತಿ ಯಾರಾದ್ರೂ ದುರುಪಯೋಗ ಮಾಡಿದ್ರೆ ದೇವರಿಗೆ ಅನ್ಯಾಯ ಮಾಡಿದಂತೆ ಎಂದಿದ್ರು. ಈಗ ವಕ್ಫ್‌ ಆಸ್ತಿ ಲೂಟಿ ಮಾಡಿದ್ರು ಅಂತಾರೆ ಬೊಮ್ಮಾಯಿ. ನಮ್ಮ ಜಿಲ್ಲೆಯಲ್ಲಿ ಯಾವುದೇ ದುರುಪಯೋಗ ಆಗಿದ್ದರೆ ಸರಿಪಡಿಸುತ್ತೇನೆ. ಎಲ್ಲೂ ದುರುಪಯೋಗ ಆಗದಿದ್ದರೆ ಇವರು ಹೇಳುವುದು ಸುಳ್ಳು ಅಂತ ಆಗಲಿದೆ.  ಸರಕಾರ ರೈತರ ಪರವಾಗಿದ್ದು, ರೈತರಿಗೋಸ್ಕರ ಏನು ತ್ಯಾಗ ಮಾಡಲೂ ತಯಾರಿದ್ದೇವೆ. ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುವ ಕೆಲಸ ನಮ್ಮದು ಎಂದು ಭರವಸೆ ನೀಡಿದ್ದಾರೆ. 

ಬಿಪಿಎಲ್ ಕಾರ್ಡ್ ವಿವಾದದ ಬಗ್ಗೆ ಮಾತನಾಡಿದ ಸಚಿವರು, ನಮ್ಮ‌ ಸರ್ಕಾರ ಯಾರ ಕಾರ್ಡ್ ರದ್ದು ಮಾಡಿಲ್ಲ. ಅನರ್ಹರಿಗೆ ಬಿಪಿಎಲ್ ಕಾರ್ಡ್ ಇದ್ದರೆ ಅದು ರದ್ದಾಗಬೇಕು. ಅರ್ಹರಿಗೆ ಈಗಲೂ ಬಿಪಿಎಲ್ ಕಾರ್ಡ್ ಕೊಡುತ್ತಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದರು.  ಬಡವರು ಹಸಿದುಕೊಂಡು ಇರಬಾರದು ಎಂದು ನಾವು ಕೊಡುತ್ತಿದ್ದೇವೆ. ಬಡವರಿಗೆ ಈಗಲೂ ಬಿಪಿಎಲ್ ಕಾರ್ಡ್ ಕೊಡುತ್ತೇವೆ. ಸೆಂಟ್ರಲ್ ಗರ್ವಮೆಂಟ್ ಮಾಡಿದ ನಿಯಮದಂತೆ ಮಾಡುತ್ತಿದ್ದೇವೆ. ಅವರು ಬೇಕಾದರೆ ಬದಲಿಸಲಿ. ಪ್ರತಿ ಲೋನ್ ಗೆ ಆದಾಯ ತೆರಿಗೆ ಪಾವತಿ ರದ್ದು ಮಾಡಲಿ ಎಂದು ಹೇಳಿದ್ದಾರೆ. 

ಉಪ ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಮಂಕಾಳ ವೈದ್ಯ ಅವರು,  ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಕೆಲವರು ಒಂದು ಬರುತ್ತದೆ, ಎರಡು ಬರುತ್ತದೆ ಅನ್ನುತ್ತಾರೆ. ಆದರೆ, ನಮಗೆ ಮೂರು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 

PREV
Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ