
ಬೆಳಗಾವಿ: ಎಂಇಎಸ್ ಮುಖಂಡ ಶುಭಂ ಸೆಳಕೆಯನ್ನ ಖಡೇಬಜಾರ್ ಪೊಲೀಸರು ಬಂಧಿಸಿದ್ದಾರೆ. ಹಳೆಯ ಅಟ್ರಾಸಿಟಿ ಕೇಸ್ ನಡಿ ಶುಭಂ ಸೆಳಕೆಯನ್ನ ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶುಭಂ ಸೆಳಕೆ ಒಬ್ಬ ನಾಡದ್ರೋಹಿ ಆಗಿದ್ದಾನೆ.
ನವೆಂಬರ್ ತಿಂಗಳ ಸಮೀಪಿಸುತ್ತಿದೆ. ಬೆಳಗಾವಿ ಗಡಿಯಲ್ಲಿರುವ ಎಂಇಎಸ್ ಪುಂಡರ ನಾಡದ್ರೋಹಿ ಚಟುವಟಿಕೆಗಳು ಹೆಚ್ಚುಗಲು ಶುರುವಾಗಿದೆ. ಇದೇ ಉದ್ದೇಶಕ್ಕಾಗಿಯೇ ಆತನನ್ನು ಬಂಧಿಸಲಾಗಿದೆ ಎನ್ನಲಾಗತ್ತಿದೆ. ಈತ ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಣೆಗೆ ಸಿದ್ಧತೆ ನಡೆಸಿದ್ದ. ಇದೀಗ ಪೊಲೀಸರು ಬಂಧಿಸಿ ಕ್ರಮ ಜರುಗಿಸಿದ್ದಾರೆ.
ಈ ವ್ಯಕ್ಯಿ ಕರಾಳ ದಿನಾಚರಣೆಗೆ ಮುಂದಾಗಿದ್ದ. ಇದನ್ನು ತಡೆಯುವ ಉದ್ದೇಶದಿಂದ ಶುಭಂ ಸೆಳಕೆಯನ್ನ ಬಂಧಿಸಲಾಗಿದೆ. ಮಾಹಿತಿಗಳ ಪ್ರಕಾರ.. ಪೊಲೀಸ್ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೇ ದಿಢೀರ್ ಬಂಧಿಸಿದ್ದಾರೆ. ತನ್ನ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಸಳಕೆ.. ನನಗೆ ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಿರುಕುಳ ನೀಡ್ತಿದ್ದಾರೆ. ಮರಾಠಿಗರ ಹೋರಾಟ ನಿಲ್ಲಲ್ಲ ಎಂದ ನಾಡದ್ರೋಹಿ ಶುಭಂ ಸೆಳಕೆ ಹೇಳಿದ್ದಾನೆ. ಸದ್ಯ ಬಂಧಿಸಿರುವ ಪೊಲೀಸರು ಹಳೆ ಅಟ್ರಾಸಿಟಿ ಕೇಸ್ ನಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಮೂಲದ ಮಹಾರಾಷ್ಟ್ರ ಏಕೀಕರಣ ಸಮಿತಿ ಯುವ ಘಟಕದ ನಾಯಕ ಎಂದು ಕರೆದುಕೊಳ್ತಾನೆ. ನಾಡಿಗೆ ದ್ರೋಹ ಬಗೆದು ಮಹಾರಾಷ್ಟ್ರಕ್ಕೆ ಸಹಕಾರ ನೀಡುತ್ತಿದ್ದಾನೆ. ಗಡಿ ಭಾಗದಲ್ಲಿ ಮರಾಠಿ ಭಾಷಿಕರ ಹಕ್ಕುಗಳ ಹೆಸರಲ್ಲಿ ಕನ್ನಡ ಭಾಷಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಆರೋಪ ಈತನ ಮೇಲಿದೆ. MES ಸಂಘಟನೆಯಲ್ಲಿ ಸಕ್ರಿಯ ಆಗಿರುವ ಈತ, 2021ರಲ್ಲಿ ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷೇತರ (ಎಂಇಎಸ್ ಬೆಂಬಲಿತ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ.
ಭಾಷಾ ಸಾಮರಸ್ಯಕ್ಕೆ ಧಕ್ಕೆ ತಂದ ಆರೋಪ ಈತನ ಮೇಲಿದೆ. ಕನ್ನಡ ಭಾಷಿಕರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ವಿಡಿಯೋ ಹರಿಬಿಟ್ಟ ಆರೋಪಗಳು ಈತನ ಮೇಲಿವೆ. ಬೆಳಗಾವಿ ಪೊಲೀಸರು ಈತನನ್ನು ಅನೇಕ ಬಾರಿ ಬಂಧಿಸಿದ್ದಾರೆ. ಬೆಳಗಾವಿಯಲ್ಲಿ ಭಾಷಾ ವಿವಾದ ಮತ್ತು ಗಲಭೆಗಳಿಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಈತನ ಹೆಸರಿನಲ್ಲಿ ರೌಡಿ ಶೀಟರ್ ತೆರೆದಿದ್ದಾರೆ.