
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಪೈಸ್ ಜೆಟ್‌ನ ಮೂರು ವಿಮಾನಗಳು ಪ್ರಯಾಣಿಕರಿಗೆ ಕೈಕೊಟ್ಟಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಪೈಸ್ ಜೆಟ್‌ನ ಮೂರು ವಿಮಾನಗಳ ಹಾರಾಟದಲ್ಲಿ ಭಾರೀ ವಿಳಂಭವಾಗಿದೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಗಂಟೆಗಳ ಮುಂಚೆಯೆ ಏರ್‍ಪೋರ್ಟ್‌ಗೆ ಬಂದು ಕುಳಿತಿದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕೆಂಪೇಗೌಡ ಏರ್‍ಪೋರ್ಟ್‌ನಲ್ಲಿ ನೂರಾರು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ ಹಾರಾಟದಲ್ಲಿ ವಿಳಂಬ ಆಗಿದೆ. ಜೊತೆಗೆ ಟೆಕ್ನಿಕಲ್ ಸಮಸ್ಯೆ ಹೇಳಿ ನಮಗೆ ಬೋರ್ಡಿಂಗ್ ಪಾಸ್ ಕೂಡ ನೀಡದೇ ವಿಳಂಬ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೂರು ಸ್ಪೈಸ್ ಜೆಟ್ ವಿಮಾನಗಳು ಬೆಂಗಳೂರಿನಿಂದ ಕೊಲ್ಕತ್ತಾ ಮತ್ತು ಮುಂಬೈಗೆ ತೆರಳಬೇಕಿದ್ದವು. SG 158 ಬೆಂಗಳೂರು ಕೊಲ್ಕತ್ತಾ ಪ್ಲೈಟ್ ನಲ್ಲಿ 135 ಜನರು ಪ್ರಯಾಣ ಮಾಡಬೇಕಿತ್ತು. SG 647 ಬೆಂಗಳೂರು-ಕೊಲ್ಕತ್ತಾ 161 ಜನರು ಪ್ರಯಾಣಿಸಿಬೇಕಿತ್ತು. SG 633 ಬೆಂಗಳೂರು ಮುಂಬೈ ಪ್ಲೈಟ್ ನ 177 ಜನ ಪ್ರಯಾಣಿಕರು ಪ್ರಯಾಣ ಬೆಳಸಬೇಕಿತ್ತು.
ನಿನ್ನೆ ರಾತ್ರಿಯಿಂದ ಕೆಐಎಬಿ ಏರ್ ಪೋರ್ಟ್‌ನಲ್ಲೇ ಪ್ರಯಾಣಿಕರು ಬೀಡು ಬಿಟ್ಟಿದ್ದಾರೆ. ವಿಮಾನಕ್ಕಾಗಿ ಕಾದು, ಕಾದು ಸುಸ್ತಾಗಿರುವ ಪ್ರಯಾಣಿಕರು ಸ್ಪೈಸ್ ಜೆಟ್ ಏರ್‍ಲೈನ್ಸ್ ವಿರುದ್ಧ ವಿರುದ್ದ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸಮರ್ಪಕ ಮಾಹಿತಿ ಸಹ ನೀಡದೇ ಗಂಟೆಗಟ್ಟಲೇ ನಮ್ಮನ್ನು ಕಾಯಿಸುತ್ತಿದ್ದಾರೆ. ಬೇರೆ ಬೇರೆ ಕೆಲಸಗಳ ನಿಮಿತ್ತ ನಾವು ಪ್ರಯಾಣ ಬೆಳೆಸುತ್ತಿದ್ದೇವು. ಆದರೆ ವಿಮಾನ ಇಷ್ಟೊಂದು ತಡವಾದರೆ ನಮ್ಮ ಕತೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ವಿಮಾನ ಹಾರಾಟದಲ್ಲಿ ವಿಳಂಬ ಆಗರೋದಕ್ಕೆ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಅನ್ನೋದು ಪ್ರಯಾಣಿಕರ ಆಕ್ರೋಶ. ಯಾಕೆ ವಿಳಂಬ ಆಗ್ತಿದೆ? ಟೆಕ್ನಿಕಲ್ ಸಮಸ್ಯೆ ಅಂದರೆ ಏನು? ಬದಲಿ ವಿಮಾನಗಳು ಇರಲಿಲ್ಲವೇ? ಪ್ರಯಾಣಿಕರಿಗೆ ಆಗಿರುವ ನಷ್ಟಕ್ಕೆ ಸಂಸ್ಥೆ ಜವಾಬ್ದಾರಿ ಆಗಲಿದೆಯೇ? ಎಂಬ ಪ್ರಶ್ನೆಗಳು ಶುರುವಾಗಿದೆ. ಕೂಡಲೇ ವಿಳಂಬ ಪ್ರಯಾಣಕ್ಕೆ ಏರ್‍ಲೈನ್ಸ್ ಸೂಕ್ತ ತನಿಖೆ ನಡೆಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.