
ಬ್ಯಾಡಗಿ (ಏ.8): ಹಾವೇರಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವಾಗಿ 6 ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾದ ದಾರುಣ ಘಟನೆ ನಡೆದಿದೆ. ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ದುರಂತ ನಡೆದಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ಬಳಿ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಓರ್ವನಿಗೆ ಗಾಯವಾಗಿದೆ. ಗಾಯಾಳುಗಳನ್ನು ಕಾರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಾರಿನಲ್ಲಿ ಒಟ್ಟು 8 ಜನ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಹಾವೇರಿ ಎಸ್ ಪಿ ಅಂಶುಕುಮಾರ್ ಹೇಳಿಕೆ ನೀಡಿ, ಎನ್ ಹೆಚ್ 4 ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಲಾರಿಗೆ ಹಿಂದುಗಡೆಯಿಂದ ಹೋಗಿ ಕಾರ್ ಗುದ್ದಿದೆ. ಸ್ಥಳದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಆ ಮೇಲೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಹಾವೇರಿ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಶವಗಳನ್ನು ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗುತ್ತೆ. ಮೃತಪಟ್ಟ 6 ಜನ ರಾಣೆಬೆನ್ನೂರು ನಗರದ ಅಶೋಕ್ ನಗರದ ನಿವಾಸಿಗಳು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶವಾಗಾರದ ಮುಂದೆ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ರಜೆಯ ಮಜಾ ಅನುಭವಿಸಲು ಮಕ್ಕಳ ಜೊತೆ ಕುಟುಂಬ ಪಾರ್ಕ್ ಗೆ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆಯಿತು. ಶಾಲೆಗೆ ರಜೆ ಇರುವ ಹಿನ್ನಲೆ ಸಂಬಂಧಿಕರು ರಾಣೇಬೆನ್ನೂರಿನಿಂದ ಅಗಡಿ ತೋಟಕ್ಕೆ ಹೊರಟಿದ್ದರು. ಇಂದು ಅಗಡಿ ತೋಟಕ್ಕೆ ಹೋಗಿ ನಂತರ ಗೋವಾಕ್ಕೆ ಹೋಗುವ ಪ್ಲಾನ್ ಮಾಡಿಕೊಂಡಿದ್ದರು. ವೇಗದಿಂದ ಬಂದ ಕಾರು ಚಲಿಸುತ್ತಿದ್ದ ಎದುರಿಗಿನ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಮೃತರು ರಾಣೆಬೇನ್ನೂರು ನಗರದ ಸಿದ್ದೇಶ್ವರ ನಗರದ ನಿವಾಸಿಗಳು. ನಿನ್ನೆ ರಾಣೆಬೆನ್ನೂರಿನ ಅಫ್ರೋಜ್ ಮನೆಯಲ್ಲಿ ಕಾರ್ಯಕ್ರಮ ಇತ್ತು. ಕಾರ್ಯಕ್ರಮ ಮುಗಿಸಿ ಪಿಕ್ ನಿಕ್ ಗೆ ಪ್ಲಾನ್ ಮಾಡಿದ್ದರು.
1)ಫರಾನ್( 27ವರ್ಷ )ಹರಿಹರ
2)ಉಮ್ಮಿಶಿಪಾ (16 ವರ್ಷ)
ರಾಣೆಬೆನ್ನೂರು
3)ಅಲಿಷಾ(20 ವರ್ಷ)
ಪಣಜಿ, ಗೋವಾ
4)ಫೂಲಖಾನ್ , (17 ವರ್ಷ)ಗೋವಾ
5)ಫಿರೋಜ( 42 ವರ್ಷ)
6)ಇನ್ನೊಬ್ಬರ ಶವ ಯಾರದ್ದು ಎಂಬುದು ತಿಳಿದು ಬಂದಿಲ್ಲ
ಗಾಯಗೊಂಡವರು
ತಷ್ಕಿನ್
ಮೆಹಕ್