ದೀಪಾವಳಿಗೂ ಮುನ್ನ ಘೋರ ದುರಂತ, ಬೀದರ್‍‌ನಲ್ಲಿ ಪ್ರಾಣಬಿಟ್ಟ ನಾಲ್ವರು ಯುವಕರು

Published : Nov 07, 2026, 04:38 PM IST
Yadgir Accident

ಸಾರಾಂಶ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಿರ್ಮಾಣ ಹಂತದ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದೆ. ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯಾದಗಿರಿ (ನವೆಂಬರ್ 7): ನಿರ್ಮಾಣ ಹಂತದ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಚೆನ್ನೈ-ಸೂರತ್ ಎಕ್ಸ್‌ಪ್ರೆಸ್‌ ಹೈವೇ ಮೇಲೆ ಈ ಡೆಡ್ಲಿ ಆಕ್ಸಿಡೆಂಟ್ ನಡೆದಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾ. ಇಬ್ರಾಹಿಂಪುರ ಡಿಬಿಎಲ್ ಕ್ಯಾಂಪ್ ಬಳಿ ಅಪಘಾತ ಸಂಭವಿಸಿದೆ. ನಿನ್ನೆ ರಾತ್ರಿ ಭೀಕರ ಅಪಘಾತ ನಡೆದಿದೆ. ಕಾರಿನಲ್ಲಿ ಜೇವರ್ಗಿಯಿಂದ ಯಾದಗಿರಿ ಕಡೆಗೆ ನಾಲ್ವರು ಯುವಕರು ಬರುತ್ತಿದ್ದರು. ವೇಗವಾಗಿ ಬರುತ್ತಿದ್ದ ವೇಳೆ ರಸ್ತೆ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಇನ್ನು ವಾಹನ ನುಜ್ಜುಗುಜ್ಜಾಗಿದೆ.

ಗುರುರಾಜ್ ಚವ್ಹಾಣ್ (35), ಗೋವಿಂದ ಚವ್ಹಾಣ್ (28), ಕುಮಾರ್ ರಾಠೋಡ್ (26) ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಮೃತ ನಾಲ್ವರಲ್ಲಿ ಮೂವರು ಮಲ್ಹಾರ್ ತಾಂಡಾದ ನಿವಾಸಿಗಳು, ಓರ್ವ ಲಿಂಗೇರಿ ತಾಂಡಾದ ಯುವಕ ಎಂದು ತಿಳಿದುಬಂದಿದೆ. ಅಪಘಾತ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕೆಲಸ ಕಾಲ ಸಂಚಾರಕ್ಕೆ ಅಡಚಣೆ ಆಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದರು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಬಳಿಕ ಮೃತದೇಹಗಳನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಮರಣೋತ್ತರ ಪರೀಕ್ಷೆ ಮುಗಿದು ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.

ನಿರ್ಮಾಣ ಹಂತದಲ್ಲಿರುವ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಅಪಘಾತ ಸಂಭವಿಸಿದೆ. ರಸ್ತೆ ದುರ್ಘಮ ಆಗಿರೋದ್ರಿಂದಲೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ವಿಚಾರ ತಿಳಿಯುತ್ತಿದ್ದಂತೆಯೇ ಎಸ್‌ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಕುಟುಂಬಸ್ಥರಿಂದ ಮುಗಿಲು ಮುಟ್ಟಿದ ಆಕ್ರಂದನ

ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದೀಪಾವಳಿಗೂ ಮುನ್ನವೇ ಘೋರ ದುರಂತ ಸಂಭವಿಸಿರೋದು ಶೋಕದ ವಾತಾವರಣ ನಿರ್ಮಾಣವಾಗಿದೆ. ಮನೆಗೆ ಆಧಾರವಾಗಿದ್ದ ಕುಟುಂಬಸ್ಥರನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದಾರೆ.

ಬೀದರ್‌ನಲ್ಲಿ ಲಾರಿ ಹರಿದು 30 ಕುರಿಗಳ ಮಾರಣ ಹೋಮ

ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನ ಬಾಳೂರ ಬಳಿ ಲಾರಿ ಹರಿದು 30 ಕುರಿಗಳು ಸಾವನ್ನಪ್ಪಿವೆ. ಕೆಂಪುಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹರಿದು ದುರಂತ ಸಂಭವಿಸಿದೆ. ಬಸವರಾಜ್ ಮುಗತಾ ಎಂಬ ರೈತನಿಗೆ ಕುರಿಗಳು ಸಾವನ್ನಪ್ಪಿವೆ. ದುರ್ಘಟನೆ ಬೆನ್ನಲ್ಲೇ ಭಯದಲ್ಲಿ ಲಾರಿ ಚಾಲಕ ವಾಹನ ಬಿಟ್ಟು ಪರಾರಿ ಆಗಿದ್ದಾನೆ. ಇನ್ನು ಕುರಿಗಳು ಕಳೆದುಕೊಂಡ ರೈತ ಬಸವರಾಜ್ ಕಣ್ಣೀರು ಇಟ್ಟಿದ್ದಾನೆ. ಧನ್ನೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರೈತನಿಗೆ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಲ್ಲದೇ ಅಪಘಾತಕ್ಕೆ ಕಾರಣವಾಗಿರುವ ಡ್ರೈವರ್‍‌ನನ್ನು ಬಂಧಿಸಿ ತನಿಖೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ.

PREV
Read more Articles on
click me!

Recommended Stories

ಕ್ರಿ.ಪೂ 2000ಕ್ಕೂ ಹಳೆಯದಾದ ಸಂಗೀತ ಕಲ್ಗುಳಿ, ವೀರಗಲ್ಲಿನ ಮೇಲೆ 9 ಕಲ್ಗುಳಿಗಳು ಪತ್ತೆ
ಕಾಂಗ್ರೆಸ್ ಮುಖಂಡರ ಆತಂಕ ಹೆಚ್ಚಿಸಿದ ರಾಹುಲ್ ಗಾಂಧಿ ರ‍್ಯಾಲಿ, ಸಚಿವ ಲಮಾಣಿ ಪುತ್ರ ಸೇರಿ ನಾಲ್ವರು ಸಸ್ಪೆಂಡ್