ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಫೆ.8) : ಸಂಚಾರಿ ನಿಯಮಗಳನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಪೊಲೀಸರು ಹಾಗೂ ಜಿಲ್ಲಾಡಳಿತ ನಿತ್ಯ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಆದರೂ ಕೂಡ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲನೆ ಮಾಡದೇ ನಿಯಮ ಉಲ್ಲಂಘಿಸುವ ಮೂಲಕ ಶಿಕ್ಷೆಗೆ ಗುರಿಯಾಗುತ್ತಾರೆ. ಆದ್ರೆ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಬೈಕ್ ಸವಾರ ಮಾಡಿರೋ ಸಣ್ಣ ಯಡವಟ್ಟಿನಿಂದಾಗಿ ಇಂದು ನ್ಯಾಯಾಂಗ ಬಂಧನದಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
undefined
ಚಿತ್ರದುರ್ಗ(Chitradurga) ನಗರದ ಸಂಪಿಗೆ ಸಿದ್ದೇಶ್ವರ ಶಾಲೆ((Sampige siddeshwar school)ಯ ಹಿಂಭಾಗದಲ್ಲಿರುವ ಬಡಾವಣೆಯ ನಿವಾಸಿ ರವಿಕುಮಾರ್ ಮೆದೇಹಳ್ಳಿ ರಸ್ತೆಯಲ್ಲಿ 02/02/2023 ರಂದು ಸಂಚಾರಿ ನಿಯಮ ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಹೆಲ್ಮೆಟ್ ಧರಿಸದೇ, ಕುಡಿದು ವಾಹನ ಚಾಲನೆ ಮಾಡಿದ್ದಲ್ಲದೇ ಅಪಾಯಕಾರಿ ಚಾಲನೆ ಮಾಡಿರುವ ಪರಿಣಾಮವಾಗಿ ಚಿತ್ರದುರ್ಗ ಸಂಚಾರಿ ಠಾಣೆ ಪೊಲೀಸರು ಆತನಿಗೆ ಸರಿ ಸುಮಾರು 25.500,ರೂ ದಂಡ ವಿಧಿಸಿದೆ. ಈ ಪ್ರಕರಣ ಸಂಬಂಧ 07/02/2023 ರಂದು ಚಿತ್ರದುರ್ಗ ಸಿಜೆಎಂ & ಜೆಎಂಎಫ್ ಸಿ ಕೋರ್ಟ್ ನಲ್ಲಿ ಶೇ. ೫೦% ರಷ್ಟು ರಿಯಾಯಿತಿ ನೀಡಿ 10.250 ರೂಗೆ ಇಳಿಕೆ ಮಾಡಲಾಗಿದೆ.
Chitradurga: ಪೋಟೋ ಸ್ಟುಡಿಯೋ ಮಾಲೀಕ ಬಸವರಾಜ್ ಕೊಲೆಗೆ ಕಾರಣವೇ ಸ್ವಂತ ಅಕ್ಕ!
ಆದ್ರೆ ಬೈಕ್ ಸವಾರ ಮಾತ್ರ ನಾನು ಯಾವುದೇ ದಂಡ ವಿಧಿಸುವುದಿಲ್ಲ. ನನ್ನ ಬಳಿ ಅಷ್ಟೊಂದು ಮೊತ್ತವಿಲ್ಲ ಎಂದು ತಿಳಿಸಿದ್ದಾನೆ. ಆದ್ರೆ ಕೋರ್ಟ್ ಆದೇಶದ ಅನ್ವಯ ಯಾರೂ ದಂಡ ಪಾವತಿಸುವುದಿಲ್ಲವೇ ಅಂತವರಿಗೆ ಸಾಧಾರಣ ಜೈಲು ಶಿಕ್ಷೆ ಖಾಯಂ ಎನ್ನುವ ಪ್ರತೀತಿ ಇದೆ. ಅದರಂತೆ ವಾಹನ ಸವಾರ & ಆರೋಪಿ ರವಿಕುಮಾರ್ ತಾನು ಸಂಚಾರಿ ನಿಯಮ ಉಲ್ಲಂಘಿಸಿ ಮಾಡಿರುವ ತಪ್ಪಿಗೆ ದಂಡ ವಿಧಿಸಲಾಗದೇ ಇಂದು ಜೈಲು ಪಾಲಾಗಿರೋ ವಿಶೇಷ ಪ್ರಕರಣ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ವಾಹನಗಳನ್ನು ಮಕ್ಕಳು ಹಾಗೂ ಕುಡಿದು ಚಾಲನೆ ಮಾಡುವವರ ಕೈಗೆ ಕೊಡುವ ಮಾಲೀಕರೇ ಒಮ್ಮೆ ಈ ಸುದ್ದಿ ನೋಡಿದ್ರೆ ನಿಮಗೆ ಒಳಿತು. ಇತ್ತೀಚಿನ ದಿನಗಳಲ್ಲಿ ಯುವಕರು ಬೈಕ್ ಚಾಲನೆ ಮಾಡುವಾಗ ತಮಗೆ ಮನಸ್ಸಿಗೆ ಬಂದಂತೆ ರಸ್ತೆಯಲ್ಲಿ ಚಾಲನೆ ಮಾಡ್ತಾರೆ. ಅವರಿಗೆ ಯಾರಿಗೂ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು ಎಂಬ ಅರಿವೇ ಇರುವುದಿಲ್ಲ. ಈ ರೀತಿಯ ಪ್ರಕರಣಗಳು ಕಣ್ಮುಂದೆ ಬಂದಾಗಾದ್ರು ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮ ಪಾಲನೆ ಮಾಡುವ ಬುದ್ದಿ ಬರಲಿ. ಈ ಪ್ರಕರಣ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಲಿ ಎಂಬುದು ಪೊಲೀಸರ ಕಿವಿಮಾತಾಗಿದೆ.
ಚಿತ್ರದುರ್ಗ: ಫೋಟೋ ಸ್ಟುಡಿಯೋ ಮಾಲೀಕನ ಹತ್ಯೆಗೈದು ದುಷ್ಕರ್ಮಿಗಳು ಪರಾರಿ..!