ಹೆಲ್ಮೆಟ್‌ ಧರಿಸದೆ ಸಂಚರಿಸಿದ ಮಹಿಳಾ ಗಾರ್ಡ್‌ಗೆ ದಂಡ

Published : Aug 02, 2019, 07:50 AM IST
ಹೆಲ್ಮೆಟ್‌ ಧರಿಸದೆ ಸಂಚರಿಸಿದ ಮಹಿಳಾ ಗಾರ್ಡ್‌ಗೆ ದಂಡ

ಸಾರಾಂಶ

ಹೆಲ್ಮೆಟ್ ಧರಿಸಿಸದೇ ಬೈಕ್ ನಲ್ಲಿ ಸಹ ಸವಾರೆಯಾಗಿದ್ದ ಮಹಿಳಾ ಫಾರೆಸ್ಟ್ ಗಾರ್ಡ್ ಒಬ್ಬರಿಗೆ ದಂಡ ವಿಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. 

ಮಂಗಳೂರು [ಆ.2]: ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಹ ಸವಾರೆಯಾಗಿ ಸಂಚರಿಸಿದ ಮಹಿಳಾ ಫಾರೆಸ್ಟ್‌ ಗಾರ್ಡ್‌ವೊಬ್ಬರ ಫೋಟೋ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದು, ಬಳಿಕ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಫಾರೆಸ್ಟ್‌ ಗಾರ್ಡ್‌ವೊಬ್ಬರು ನಗರದ ಬಲ್ಮಠ ರಸ್ತೆಯಲ್ಲಿ ಹೆಲ್ಮೆಟ್‌ ಹಾಕದೆ ಪತಿಯ ಜೊತೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. 

ಇದನ್ನು ನೋಡಿದ ಹಿಂಬದಿ ಕಾರಿನಲ್ಲಿದ್ದವರು ಮೊಬೈಲ್‌ನಲ್ಲಿ ಫೋಟೋ ತೆಗೆದು, ಖಾಕಿ ಸಮವಸ್ತ್ರ ಧರಿಸಿದ ಈ ಮಹಿಳೆ ಹೆಲ್ಮೆಟ್‌ ಹಾಕದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿ, ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ತಾಣದಲ್ಲಿ ಫೋಟೋ ಹರಿಯಬಿಟ್ಟಿದ್ದರು.

ಫೋಟೋ ಹರಿದಾಡುತ್ತಿದ್ದಂತೆ ಜಾಗೃತರಾದ ಪೊಲೀಸರು, ವಾಹನದ ನಂಬರ್‌ ಆಧಾರದ ಮೇಲೆ ಶೋಧ ನಡೆಸಿದಾಗ ವಾಹನ ಬಳ್ಳಾರಿ ಮೂಲದ್ದೆಂದು ತಿಳಿದು ಬಂದಿದೆ. ಬಳಿಕ ಮಹಿಳಾ ಗಾರ್ಡ್‌ನ್ನು ಸಂಚಾರ ಠಾಣೆಗೆ ಕರೆಯಿಸಿ ದಂಡ ವಿಧಿಸಿದ್ದಾರೆ.

(ಸಾಂದರ್ಬಿಕ ಚಿತ್ರ)

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?