ಕಾರು ಮಾಲೀಕರೇ ಎಚ್ಚರ: ಟ್ರಾಫಿಕ್ ಪೊಲೀಸರಿಂದ ನಿಮಗೂ ಬರಬಹುದು ಹೆಲ್ಮೆಟ್ ನೋಟಿಸ್!

Published : Sep 13, 2026, 11:33 AM IST
Belagavi Traffic AI cam mistkes

ಸಾರಾಂಶ

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ, ಕಾರು ಚಾಲಕನೊಬ್ಬನಿಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿದ ವಿಚಿತ್ರ ಘಟನೆ ನಡೆದಿದೆ. ಎಐ ಕ್ಯಾಮೆರಾದಿಂದಾದ ಈ ಎಡವಟ್ಟಿನಿಂದಾಗಿ, ಸಂಚಾರ ಪೊಲೀಸರು ಪರಿಶೀಲಿಸದೆ 500 ರೂಪಾಯಿ ದಂಡದ ನೋಟಿಸ್ ಅನ್ನು ವಾಟ್ಸಪ್‌ಗೆ ಕಳುಹಿಸಿದ್ದಾರೆ.

ಚಿಕ್ಕೋಡಿ (ಸೆ.13): ಬೈಕ್ ಓಡಿಸುವಾಗ ಅಷ್ಟೇ ಅಲ್ಲ, ಇನ್ಮುಂದೆ ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸಿ! ಇಲ್ಲದಿದ್ರೆ ನಿಮ್ಮ ವಾಟ್ಸಪ್‌ಗೆ ಬರುತ್ತೆ ಹೆಲ್ಮೆಟ್ ಹಾಕದ್ದಕ್ಕೆ ದಂಡ! ಕಾರಿನಲ್ಲಿ ಹೆಲ್ಮೆಟ್‌ ಹಾಕಿಲ್ಲವೆಂದು ಕಾರು ಮಾಲೀಕರಿಗೆ ದಂಡ ವಿಧಿಸಿದ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.

ಅಥಣಿ ಟ್ರಾಫಿಕ್ ಪೊಲೀಸರ ಎಐ ಎಡವಟ್ಟು!

ಅಥಣಿ ಪಟ್ಟಣದ ಕಾರು ಮಾಲೀಕ ಸುಭಾಷ್ ಬೋಜನೆ ಎಂಬುವವರ ವಾಟ್ಸಪ್ ಸಂಖ್ಯೆಗೆ ಹೆಲ್ಮೆಟ್ ಧರಿಸದೆ ಕಾರು ಓಡಿಸಿದ್ದಕ್ಕೆ ನೋಟಿಸ್ ಬಂದಿದೆ. ನೋಟಿಸ್ ಕಂಡು ಕಾರು ಮಾಲೀಕ ಶಾಕ್ ಆಗಿದ್ದಾರೆ. ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸಬೇಕಾ? ಬೆಳಗಾವಿ ಜಿಲ್ಲಾ ಸಂಚಾರ ಪೊಲೀಸರ ಈ ಹೊಸ ನಿಯಮ ಜಾರಿಗೆ ತಂದಿರೋದು ನಮಗೆ ಗೊತ್ತಿಲ್ಲ ಎಂದು ತಬ್ಬಿಬ್ಬು ಆಗಿದ್ದಾರೆ.

ಆಗಿದ್ದೇನು?

ಕಾರ್ ಮಾಲೀಕರು ಇತ್ತೀಚೆಗೆ ಕಾರಿನಲ್ಲಿ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದಾರೆ. ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ಹೋಗುವಾಗ ಟ್ರಾಫಿಕ್ನಲ್ಲಿ ಕಾರು ಗಮನಿಸಿದ ಎಐ ಕ್ಯಾಮೆರಾ ಕಾರಿನಲ್ಲಿರುವ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು ನೋಟಿಸ್ ಕಳಿಸಿದೆ! ಇದನ್ನ ಪರಿಶೀಲಿಸದ ಸಂಚಾರ ಪೊಲೀಸರು 500 ರೂಪಾಯಿ ದಂಡ ವಿಧಿಸಿದ್ದಾರೆ. ವಾಟ್ಸಪ್ ನೋಟಿಸ್ ಕಂಡು ಕಾರು ಮಾಲೀಕ ಸುಭಾಷ್ ಶಾಕ್ ಆಗಿದ್ದಾರೆ. ಕಾರಿನಲ್ಲಿ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿರೋದು ಇಡೀ ದೇಶದಲ್ಲಿ ಇದೇ ಮೊದಲು ಇರಬೇಕು. ಹೊಸ ನಿಯಮವೇನಾದರೂ ಜಾರಿಗೆ ತಂದ್ರಾ ಬೆಳಗಾವಿ ಸಂಚಾರಿ ಪೊಲೀಸರು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಹೆಲ್ಮೆಟ್ ಹಾಕಿಕೊಂಡು ಕಾರು ಓಡಿಸಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಎಐನಿಂದ ಹೇಗೆಲ್ಲ ಎಡವಟ್ಟುಗಳಾಗುತ್ತೆ ಅಂತಾ ಬಯಲು ಮಾಡಿದ್ದಾರೆ.

ಸದ್ಯ ಈ ಘಟನೆ ಸಂಬಂಧ ಕಾರ್ ಮಾಲೀಕ ಸುಭಾಷ್ ಭೋಜನೆ ವಿಡಿಯೋ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

PREV
Read more Articles on
click me!

Recommended Stories

Kalaburagi: ಮಗನ ಜೊತೆ ಚಿಕ್ಕಮ್ಮನ ಲವ್; ಅಕ್ಕನ ಮಗನ ಜೊತೆ ಅಕ್ರಮ ಸಂಬಂಧಕ್ಕೆ ಇಬ್ಬರು ಬಲಿ!
ಬಸ್ ಓಡಿಸುತ್ತಿದ್ದ ಬಾಳೇಶ್‌ಗೆ ಹೃದಯಾಘಾತ; ತಾನು ಓಡಿಸಿದ ಬಸ್‌ನಲ್ಲೇ ಅಂತಿಮಯಾತ್ರೆ ಮಾಡಿಸಿದ ಸಾರಿಗೆ ಇಲಾಖೆ