ದಾವಣಗೆರೆಯ ಚನ್ನಗಿರಿಯಲ್ಲಿ ಪ್ಲಾಸ್ಟಿಕ್ ಮಾರಾಟದ ಹೋಲ್‌ಸೇಲ್ ಅಂಗಡಿಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ನೇತೃತ್ವದಲ್ಲಿ ದಾಳಿ ಮಾಡಿ 1ಕ್ವಿಂಟಲ್‌ನಷ್ಟುಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿದರು. ಅಂಗಡಿಗಳ ಮಾಲೀಕರಿಗೆ ತಿಳಿವಳಿಕೆಯ ಮಾತಿನಲ್ಲಿ ಎಚ್ಚರಿಕೆ ನೀಡಿದರು.
ದಾವಣಗೆರೆ(ಜು.27): ಚನ್ನಗಿರಿ ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಬ್ಯಾಗ್, ಥರ್ಮಲ್ ಪ್ಲೇಟ್, ಪ್ಲಾಸ್ಟಿಕ್ ಲೋಟ ಮುಂತಾದವುಗಳನ್ನು ನಿಷೇಧಿಸಿದ್ದು ಅವುಗಳ ಬಳಕೆ ಮತ್ತು ಮಾರಾಟ ಅಪರಾಧವಾಗಿದ್ದು ಇವುಗಳ ಮಾರಾಟ ಈ ಕೂಡಲೇ ನಿಲ್ಲಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಪಟ್ಟಣದ ಅಂಗಡಿಗಳ ಮಾಲೀಕರಿಗೆ ತಿಳಿವಳಿಕೆ ನೀಡಿದರು.
1 ಕ್ಷಿಂಟಲ್ ಪ್ಲಾಸ್ಟಿಕ್ ವಶ:
undefined
ಶುಕ್ರವಾರ ಪಟ್ಟಣದ ಪ್ರಮುಖ ಪ್ಲಾಸ್ಟಿಕ್ ಮಾರಾಟದ ಹೋಲ್‌ಸೇಲ್ ಅಂಗಡಿಗಳ ಮೇಲೆ ದಾಳಿ ಮಾಡಿ 1ಕ್ವಿಂಟಲ್‌ನಷ್ಟುಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ಅಂಗಡಿಗಳ ಮಾಲೀಕರಿಗೆ ತಿಳಿವಳಿಕೆಯ ಮಾತಿನಲ್ಲಿ ಎಚ್ಚರಿಕೆ ನೀಡಿದರು.
ಹಾಸನ: ಪ್ಲಾಸ್ಟಿಕ್ ಬಳಸಿದ್ದಕ್ಕೆ ಹಣ್ಣಿನ ಅಂಗಡಿ ತೆರವು
ಈ ಅಂಗಡಿಗಳ ಮೇಲೆ ಪ್ರಥಮ ಬಾರಿಗೆ ದಾಳಿ ನಡೆಸಿದ್ದು 2ನೇ ಬಾರಿ ದಾಳಿ ನಡೆಸುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಉತ್ಫನ್ನಗಳು ದೊರೆತರೆ ದುಪ್ಪಟ್ಟು ದಂಡ ವಿಧಿಸುವ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
2 ಸಾವಿರ ದಂಡ ವಸೂಲಿ:
4ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು 2 ಸಾವಿರ ರೂ. ದಂಡ ವಸೂಲಿ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಪರಿಸರ ಅಭಿಯಂತರ ತಿಮ್ಮಪ್ಪ, ಪೌರಕಾರ್ಮಿಕ ನಿಂಗಪ್ಪ, ಲಿಂಗರಾಜ್ ಇತರರು ಇದ್ದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ