ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇಂದು ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡಿ ನಿಸರ್ಗದ ಸೊಬಗನ್ನು ನೋಡಿ ಸಖತ್ ಎಂಜಾಯ್ ಮಾಡಿದರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಡಿ24): ಕಳೆದ ಎಂಟು ತಿಂಗಳಿಂದ ತಣ್ಣಗಾಗಿದ್ದ ಹೆಮ್ಮಾರಿ ಕೊರೋನಾ ಮತ್ತೆ ಹೊಸ ರೂಪದೊಂದಿಗೆ ದಾಂಗುಡಿ ಇಟ್ಟಿದ್ದು, ಜನರಿಗೆ ಕಂಟವಾಗೋ ಸುಳಿವು ನೀಡುತ್ತಿದೆ. ನೆರೆ ರಾಷ್ಟ್ರಗಳಲ್ಲಿ ಸೃಷ್ಟಿಯಾಗಿರೋ ತಲ್ಲಣ ಸಹಜವಾಗಿಯೇ ಭಾರತದಲ್ಲಿಯೂ ಕಂಪನ ಸೃಷ್ಟಿಮಾಡಿದೆ. ಆಗಬಹುದಾಗ ಅನಾಹುತ ತಡೆಯೋಕೆ ಏನೆಲ್ಲಾ ಕ್ರಮಗಳನ್ನ ಕೈಗೊಳ್ಳಬೇಕು ಅನ್ನೋದು ಸದ್ಯದಲ್ಲೇ ತೀರ್ಮಾನವಾಗಲಿದೆ. ಇದರ ನಡುವೆ ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇಂದು ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡಿ ನಿಸರ್ಗದ ಸೊಬಗನ್ನು ನೋಡಿ ಸಖತ್ ಎಂಜಾಯ್ ಮಾಡಿದರು.
ಈ ವರ್ಷದ ಕೊನೆ ವೀಕೆಂಡ್ ಹಿನ್ನೆಲೆ ಪ್ರವಾಸಿಗರು ಲಗ್ಗೆ
ಪ್ರವಾಸದ ಮೂಲಕ ಹೊಸ ವರ್ಷದ ಆಚರಣೆಯ ಸಂಭ್ರಮದಲ್ಲಿದ್ದ ಪ್ರವಾಸಿಗರಿಗೆ ಮಹಾಮಾರಿ ರಿಟನ್ಸ್ ಬಿಗ್ ಶಾಕ್ ನೀಡಿದೆ. ಇಡೀ ವರ್ಷ ಸೇರಿದಂತೆ ಇಯರ್ ಎಂಡ್ ಬಂದ್ರೆ ಸಾಕು ಜನ ಜಾತ್ರೆಯಿಂದ ತುಂಬಿ-ತುಳುಕುತ್ತಿದ್ದ ಪ್ರವಾಸಿ ಜಿಲ್ಲೆ ಕಾಫಿನಾಡಲ್ಲಿ ಮೂರು ವರ್ಷಗಳ ಬಳಿಕ ಹೊಸ ವರ್ಷದ ಸಂಭ್ರಮಕ್ಕೆ ಸಾಕ್ಷಿಯಾಗಲು ಹೋಂಸ್ಟೇ, ರೆಸಾರ್ಟ್ ಆಲ್ಮೋಸ್ಟ್ ಕ್ಲೋಸ್ ಆಗಿವೆ. ಮತ್ತೆ ಟಫ್ ರೂಲ್ಸ್ ಬಂದ್ರೆ ಮುಂದೇನು ಅನ್ನೋ ಆತಂಕದ ನಡುವೆಯೂ ಜನ ಮಾಸ್ಕ್, ಸಾಮಾಜಿಕ ಅಂತರ ಮರೆತು ಮುಳ್ಳಯ್ಯನಗಿರಿಯಲ್ಲಿ ಮೈಮರೆಯುತ್ತಾ ಎಂಜಾಯ್ ಮಾಡ್ತಿದ್ದು, ಎಚ್ಚರಿಕೆ ಓಕೆ, ಕಡಿವಾಣ ಬೇಡೆಂದು ಪ್ರವಾಸಿಗರು ಮನವಿ ಮಾಡಿದರು. ಕೊರೋನಾ 4ನೇ ಅಲೆ ಆತಂಕದಿಂದ ಟಫ್ ರೂಲ್ಸ್ ಜಾರಿಯಾದ್ರೆ ಮುಂದೇನು ಅನ್ನೋ ಆತಂಕ. ಹೌದು.... ಜಗತ್ತನ್ನೇ ತಲ್ಲಣಗೊಳಿಸಿರೋ ಮಹಾಮಾರಿ ಕೊರೋನಾ ರಿಟನ್ಸ್ನಿಂದ ಜನ ಮತ್ತೆ ಕಂಗಾಲಾಗಿದ್ದಾರೆ. ಕೊರೋನಾ ತವರುಮನೆ ಚೀನಾ ಸೇರಿ ಹಲವು ದೇಶಗಳಲ್ಲಿ ಹೆಮ್ಮಾರಿ ಮತ್ತೆ ಕೇಕೆ ಹಾಕುತ್ತಿದ್ದು, ಭಾರತದಲ್ಲೂ ಮುಂಜಾಗೃತಾ ಕ್ರಮಗಳನ್ನ ಘೋಷಿಸಲಾಗಿದೆ. ಹೊಸ ವರ್ಷಾಚರಣೆಗೆ ಇನ್ನು ಕೆಲ ದಿನಗಳು ಬಾಕಿ ಉಳಿದಿದೆ. ಸೆಲೆಬ್ರೇಷನ್ಗೆ ಕೌಂಟ್ಡೌನ್ ಶುರುವಾಗೋ ವೇಳೆಯಲ್ಲಿ ಪತ್ತೆ ಟಫ್ ರೂಲ್ಸ್ ಜಾರಿಯಾಗೋ ಆತಂಕ ಸೃಷ್ಟಿಯಾಗಿದೆ. ಈ ಮಧ್ಯೆಯೂ ಇಯರ್ನ ಕೊನೆ ವೀಕೆಂಡ್ ಹಿನ್ನೆಲೆ ಇಂದು ರಾಜ್ಯದ ಎತ್ತರದ ಪರ್ವತಶ್ರೇಣಿ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗ ದಂಡೇ ನೆರೆದಿತ್ತು. ಮುಂಜಾನೆಯಿಂದಲೇ ಭಾರಿ ಸಂಖ್ಯೆಯಲ್ಲಿ ಬಂದಿದ್ದ ಟೂರಿಸ್ಟ್ ನಿಸರ್ಗದ ಸಿರಿಯಲ್ಲಿ ಸಂಭ್ರಮಿಸಿದ್ರು. ಸದ್ಯಕ್ಕೆ ಕೋವಿಡ್ ಕಠಿಣ ನಿಯಮಗಳೇನು ಇಲ್ಲದಿದ್ದರೂ ಸಣ್ಣ ಮುಂಜಾಗೃತೆಯೂ ಇಲ್ಲದಂತೆ ಎಲ್ಲಾ ಮರೆತು ಖುಷಿಯಾಗಿ ಎಂಜಾಯ್ ಮಾಡಿದ್ರು.
CHIKKAMAGALURU: ಶಾಸಕ ಸಿ.ಟಿ. ರವಿ ಟೀಕೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ಕೋವಿಡ್ ಆತಂಕವಿಲ್ಲ, ಜನರು ಭಯಪಡುವ ಅಗತ್ಯವಿಲ್ಲ
ಕೊರೋನಾ 2ನೇ ಅಲೆ ಅಪಾರ ಸಾವು-ನೋವಿಗೆ ಕಾರಣವಾದ ಹಿನ್ನೆಲೆ 3ನೇ ಅಲೆ ಭೀತಿ ಸೃಷ್ಟಿಯಾದಾಗ ಜನ ಆತಂಕಗೊಂಡಿದ್ದರು. ಆದ್ರೆ, ವ್ಯಾಕ್ಸಿನ್ ಹಾಗೂ ಕಟ್ಟುನಿಟ್ಟಿನ ಕ್ರಮದಿಂದ ಜನ ನಿರಾಳರಾಗಿದ್ದರು. ಕೊನೆಗೆ ಎಂಟು ತಿಂಗಳಿನಿಂದ ಜನ ಯಾವುದೇ ಕೊರೋನಾ ಆತಂಕವಿಲ್ಲದೆ ನೆಮ್ಮದಿಯಿಂದಿದ್ದರು. ಕೋವಿಡ್ ಕಾಲದಲ್ಲಿ ಕಳೆ ಕಳೆದುಕೊಂಡಿದ್ದ ಟೂರಿಸ್ಟ್ ಸ್ಪಾಟ್ಗಳಿಗೆ ಈಗ ಮತ್ತೆ ಜೀವ ಕಳೆ ಬಂದಿದೆ. ಪ್ರವಾಸಿ ತಾಣಗಳು ಜಾತ್ರೆಗಳಂತೆ ಗೋಚರಿಸುತ್ತಿವೆ. ಅದರಲ್ಲೂ ಕ್ರಿಸ್ಮಸ್ ಜೊತೆಗೆ ನ್ಯೂ ಇಯರ್ ಸೆಲೆಬ್ರೇಷನ್ ಭರ್ಜರಿಯಾಗಿ ಮಾಡೋಣ ಎಂದು ತಯಾರಿಯಲ್ಲಿದ್ದ ಜನರಿಗೆ ಕೊರೋನಾ ರಿಟನ್ಸ್ ಬರಸಿಡಲು ಬಡಿದಂತಾಗಿದೆ. ಮತ್ತೆ ಮಾರ್ಗಸೂಚಿಗಳು ಎದುರಾಗೋ ಆತಂಕ ಶುರುವಾಗಿದೆ, ಈಗಾಗಲೆ ತಯಾರಿ ಮಾಡಿಕೊಂಡಿರೋ ಜನ ನಾವೆಲ್ಲಾ ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇವೆ. ಬೂಸ್ಟರ್ ಡೋಸ್ ಕೂಡ ಆಗಿದೆ. ಯಾರು ವ್ಯಾಕ್ಸಿನ್ ಪಡೆದಿಲ್ಲವೋ ಅವರಿಗೆ ಜಾಗೃತಿ ಮೂಡಿಸಲಿ. ಎಚ್ಚರಿಕೆ ಬಗ್ಗೆ ಅರಿವು ಮೂಡಿಸಲಿ. ಮತ್ತೆ ಟಫ್ ರೂಲ್ಸ್-ನಿರ್ಬಂಧ ಮಾತ್ರ ಬೇಡ. ನ್ಯೂ ಇಯರ್ ಸಂಭ್ರಮಕ್ಕೆ ಕಲ್ಲು ಹಾಕೋದು ಬೇಡ ಎಂದು ಪ್ರವಾಸಿಗರಾದ ರಾಧಾ ಮನವಿ ಮಾಡಿದ್ದಾರೆ.
ಗಿರಿ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್
ರಾಜ್ಯದಲ್ಲಿ ಅತಿ ಎತ್ತರದ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರ ಭೇಟಿ ನೀಡಿದ ಹಿನ್ನಲೆಯಲ್ಲಿ ರಸ್ತೆ ಉದ್ದಕ್ಕೂ ಟ್ರಾಫಿಕಜ್ ಜಾಮ್ ಉಂಟಾಗಿತ್ತು.ಸಹಸ್ರ ಸಂಖ್ಯೆಯಲ್ಲಿ ಗಿರಿ ಪ್ರದೇಶಕ್ಕೆ ಪ್ರವಾಸಿಗರು ಭೇಟಿ ನೀಡಿದ ಪರಿಣಾಮ ವಾಹನಗಳ ಸಂಖ್ಯೆಯೂ ಹೆಚ್ಚಾಗಿತ್ತು.. ಇದರಿಂದ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಒಂದುವರೆ ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ಪ್ರವಾಸಿಗರು ಹೈರಾಣಾದರು.