ಕರ್ನಾಟಕದ ಆಗರ್ಭ ಶ್ರೀಮಂತರ ಪಟ್ಟಿ ಇಲ್ಲಿದೆ ನೋಡಿ: ಟಾಪ್​ 1- 2ಕ್ಕೆ ಇದೆ 2 ಲಕ್ಷ ಕೋಟಿ ರೂ ಅಂತರ

Published : Nov 09, 2026, 01:47 PM IST
Richest People in Karnataka

ಸಾರಾಂಶ

ಕರ್ನಾಟಕ ರಾಜ್ಯವು ತಲಾ ಆದಾಯದಲ್ಲಿ ದೇಶದಲ್ಲೇ ಮುಂದಿದ್ದು, ಕೈಗಾರಿಕಾ ಪ್ರಗತಿ ಸಾಧಿಸಿದೆ. ಫೋರ್ಬ್ಸ್ ಪಟ್ಟಿಯಂತೆ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಕರ್ನಾಟಕದ ಅತಿ ಶ್ರೀಮಂತ ವ್ಯಕ್ತಿ. ಇದರ ಜೊತೆಗೆ ನಿತಿನ್ ಕಾಮತ್, ನಾರಾಯಣ ಮೂರ್ತಿ ಮುಂತಾದವರು ಈ ಪಟ್ಟಿಯಲ್ಲಿದ್ದಾರೆ.

ಬೆಂಗಳೂರು: ಕಳೆದ ದಶಕದಲ್ಲಿ ಕರ್ನಾಟಕದ ಏರಿಕೆ ಪ್ರಭಾವಶಾಲಿಯಾಗಿದೆ. 2024–25 ರಲ್ಲಿ, ಇದು ದೇಶದಲ್ಲಿಯೇ ಅತಿ ಹೆಚ್ಚು ತಲಾ ಆದಾಯವನ್ನು ದಾಖಲಿಸಿದೆ, ಹತ್ತು ವರ್ಷಗಳಲ್ಲಿ ಸುಮಾರು 94% ರಷ್ಟು ಏರಿಕೆಯಾಗಿದೆ. ರಾಜ್ಯದ ತಲಾ ಆದಾಯವು ಈಗ 2,04,605 ​​ರೂ.ಗಳಷ್ಟಿದೆ - ರಾಷ್ಟ್ರೀಯ ಸರಾಸರಿ ರೂ. 1,14,710 ಕ್ಕಿಂತ ಹೆಚ್ಚು ಮತ್ತು ತಮಿಳುನಾಡಿನಂತಹ ರಾಜ್ಯಗಳಿಗಿಂತ ಮುಂದಿದೆ. ಈ ಪ್ರಗತಿಯು ಇಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕೈಗಾರಿಕೆಗಳ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ. ಬೆಂಗಳೂರು ಭಾರತದ ಐಟಿ ಮತ್ತು ಸ್ಟಾರ್ಟ್‌ಅಪ್ ರಾಜಧಾನಿಯಾಗಿ ಪ್ರಸಿದ್ಧವಾಗಿದೆ, ಮಂಗಳೂರು ಪ್ರಮುಖ ವ್ಯಾಪಾರ ಕೇಂದ್ರವಾಗಿದೆ ಮತ್ತು ಹುಬ್ಬಳ್ಳಿ-ಧಾರವಾಡದಂತಹ ನಗರಗಳು ತಮ್ಮ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ. ಒಟ್ಟಾಗಿ, ಅವು ಕರ್ನಾಟಕವನ್ನು ವ್ಯಾಪಾರ ಅವಕಾಶಗಳ ಭೂಮಿಯನ್ನಾಗಿ ಮಾಡುತ್ತವೆ.

ಇದರ ನಡುವೆಯೇ, ಕರ್ನಾಟಕದ ಶ್ರೀಮಂತರು ಯಾರು ಎಂದು ಕೇಳಿದಾಗ ಬಹುಶಃ ಹಲವರ ಮನಸ್ಸಿನಲ್ಲಿ ಹಲವು ಹೆಸರುಗಳು ಇರಬಹುದು. ಅದೇ ವಿಶ್ವದ ಅಥವಾ ಭಾರತದ ಶ್ರೀಮಂತರ ಹೆಸರು ಕೇಳಿದರೆ, ಅವರ ಹೆಸರು ಪದೇ ಪದೇ ಪ್ರಸ್ತಾಪ ಆಗುವ ಹಿನ್ನೆಲೆಯಲ್ಲಿ, ಅಂಬಾನಿ, ಅದಾನಿ, ಎಲಾನ್​ ಮಸ್ಕ್​ ಹೀಗೆ ಹಲವರು ಹಲವು ಹೆಸರು ಹೇಳುತ್ತಾರೆ. ಫೋರ್ಬ್ಸ್​ ಪಟ್ಟಿಯ ಪ್ರಕಾರ ಸದ್ಯ ಎಲಾನ್​ ಮಸ್ಕ್​ ವಿಶ್ವದ ನಂಬರ್​ 1 ಶ್ರೀಮಂತ ಆಗಿದ್ದರೆ, ಭಾರತದಲ್ಲಿ ಮುಕೇಶ್​ ಅಂಬಾನಿ ಮತ್ತು ಗೌತಮ್​ ಅದಾನಿ ಆಗಿದ್ದಾರೆ. ಹಾಗಿದ್ದರೆ ಕರ್ನಾಟಕದಲ್ಲಿ ಟಾಪ್​ 5 ಶ್ರೀಮಂತರು ಯಾರು, ಅವರ ಆಸ್ತಿ ಎಷ್ಟು ಎನ್ನೋದು ಗೊತ್ತಾ?

ಫೋರ್ಬ್ಸ್ ಇಂಡಿಯಾ ಇಂಡೆಕ್ಸ್ ಪ್ರಕಾರ, ಐಟಿ ದಿಗ್ಗಜ ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ಕರ್ನಾಟಕದ ಅತ್ಯಂತ ಶ್ರೀಮಂತ ಅರ್ಥಾತ್​ ಟಾಪ್​ 1 ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್ ಪ್ರಕಾರ, ಪ್ರೇಮ್‌ಜಿ ಅವರ ಒಟ್ಟು ಆಸ್ತಿ ಮೌಲ್ಯ $7.87 ಬಿಲಿಯನ್ ಅಂದರೆ ಸುಮಾರು 2.97 ಲಕ್ಷ ಕೋಟಿ ರೂ. ಈ ಮೂಲಕ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 32ನೇ ಸ್ಥಾನ ಪಡೆದಿದ್ದಾರೆ.

2. ನಿತಿನ್ ಮತ್ತು ನಿಖಿಲ್ ಕಾಮತ್ (ಜೆರೋಧಾ)

ಯಾವುದೇ ಹೊರಗಿನ ಹೂಡಿಕೆ ಪಡೆಯದೇ ಸ್ವಂತ ಬಲದಿಂದ ಕಂಪೆನಿಯನ್ನು ಕಟ್ಟಿ ಅತಿ ಕಿರಿಯ ವಯಸ್ಸಿನಲ್ಲೇ ಬಿಲಿಯನೇರ್ ಆದ ಯುವ ಉದ್ಯಮಿಗಳು ಎಂದು ಖ್ಯಾತಿ ಪಡೆದಿರುವ ಬೆಂಗಳೂರು ಮೂಲದ ನಿತಿನ್ ಮತ್ತು ನಿಖಿಲ್ ಕಾಮತ್ ಸಹೋದರರ ಒಟ್ಟು ಮೌಲ್ಯ $7.86 ಬಿಲಿಯನ್ ಅಂದರೆ ಸುಮಾರು 74,000 ಕೋಟಿ ರೂ. ಈ ಮೂಲಕ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 33ನೇ ಸ್ಥಾನ ಪಡೆದಿದ್ದಾರೆ. ಆದರೆ ಕುತೂಹಲದ ವಿಷ್ಯ ಎಂದರೆ, ಟಾಪ್​-1 ಮತ್ತು ಟಾಪ್​-2 ಶ್ರೀಮಂತರ ಪಟ್ಟಿಯ ಆಸ್ತಿ ಅಂತರ ನೋಡಿ. ಅವರು 2.97 ಲಕ್ಷ ಕೋಟಿ ಇವರದ್ದು 74 ಸಾವಿರ ಕೋಟಿ!

3. ಇರ್ಫಾನ್ ರಜಾಕ್ (ಪ್ರೆಸ್ಟೀಜ್ ಗ್ರೂಪ್)

ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ನೀವು ಕಾಣುವ ಭವ್ಯವಾದ ಮಾಲ್‌ಗಳು, ಟೆಕ್ ಪಾರ್ಕ್‌ಗಳು ಮತ್ತು ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದ ಪ್ರೆಸ್ಟೀಜ್ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಇರ್ಫಾನ್ ರಜಾಕ್ ಅವರ ಒಟ್ಟು ಆಸ್ತಿ ಮೌಲ್ಯ $4.28 ಬಿಲಿಯನ್ ಅಂದರೆ 49,000 ಕೋಟಿಗೂ ಅಧಿಕ ಮೊತ್ತ ಎನ್ನಲಾಗಿದೆ. ಈ ಮೂಲಕ, ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 68ನೇ ಸ್ಥಾನ ಪಡೆದಿದ್ದಾರೆ.

4. ಎನ್.ಆರ್. ನಾರಾಯಣ ಮೂರ್ತಿ (ಇನ್ಫೋಸಿಸ್)

ಜಾಗತಿಕ ಮಟ್ಟದ ಸಾಫ್ಟ್‌ವೇರ್ ದೈತ್ಯ ಸಂಸ್ಥೆಯಾದ ಇನ್ಫೋಸಿಸ್​ನ ಸಹ-ಸಂಸ್ಥಾಪಕರಾದ ಎನ್. ಆರ್. ನಾರಾಯಣ ಮೂರ್ತಿ ಅವರ ಒಟ್ಟು ಆಸ್ತಿ ಮೌಲ್ಯ $3.95ಬಿಲಿಯನ್ ಅಂದರೆ ಸುಮಾರು 45,000 ಕೋಟಿ ರೂ ಎನ್ನಲಾಗಿದೆ. ಈ ಮೂಲಕ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 78ನೇ ಸ್ಥಾನ ಪಡೆದಿದ್ದಾರೆ.

5) ನಂದನ್​ ನೀಲೇಕಣಿ (ಇನ್​ಫೋಸಿಸ್​- ಆಧಾರ್​) :

1981ರಲ್ಲಿ ಇತರರೊಂದಿಗೆ ಸೇರಿ ಜಾಗತಿಕ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್ ಕಂಪನಿಯನ್ನು ಸಹ-ಸ್ಥಾಪಿಸಿದರು. ಈ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಇನ್ಫೋಸಿಸ್‌ನ ಪುನರ್ರಚನೆಯ ನಂತರ ಅದರ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿದ್ದಾರೆ. 009 ರಿಂದ 2014ರವರೆಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಸ್ಥಾಪಕ ಅಧ್ಯಕ್ಷರಾಗಿ ಕ್ಯಾಬಿನೆಟ್ ಮಂತ್ರಿ ಸ್ಥಾನಮಾನದೊಂದಿಗೆ ಕಾರ್ಯನಿರ್ವಹಿಸಿದರು. ಭಾರತದ ಮಹತ್ವಾಕಾಂಕ್ಷೆಯ ಆಧಾರ್ ಯೋಜನೆ ರೂಪಿಸುವಲ್ಲಿ ಇವರ ಪಾತ್ರ ಹಿರಿದಾದುದು. ಇವರ ನಿವ್ವಳ ಆದಾಯ 38,000 crore ($3.63 ಬಿಲಿಯನ್​)

6) ಕಿರಣ್​ ಮುಜುಂದಾರ್​ (ಬಯೋಕಾನ್​)

ಬಯೋಟೆಕ್ ಉದ್ಯಮಿ ಮತ್ತು ಬಯೋಕಾನ್ ಸಂಸ್ಥೆಯ ಸಂಸ್ಥಾಪಕಿಯಾಗಿರುವ ಇವರ ನಿವ್ವಳ ಆದಾಯ32 ಸಾವಿರ ಕೋಟಿ ($3.6 ಬಿಲಿಯನ್​). ಭಾರತದಲ್ಲಿ ಕಿಣ್ವಗಳನ್ನು (Enzymes) ತಯಾರಿಸಿ ರಫ್ತು ಮಾಡಿದ ಮೊದಲ ಕಂಪನಿ ಬಯೋಕಾನ್. 1978ರಲ್ಲಿ ಬೆಂಗಳೂರಿನಲ್ಲಿ ಕೇವಲ ₹10,000 ಬಂಡವಾಳ ಮತ್ತು ಮನೆಯ ಶೆಡ್‌ನಿಂದ (ಗ್ಯಾರೇಜ್) ಬಯೋಕಾನ್ ಕಂಪನಿಯನ್ನು ಪ್ರಾರಂಭಿಸಿದರು.

7) ಕ್ರಿಸ್​ ಗೋಪಾಲಕೃಷ್ಣನ್​ (ಇನ್​ಫೋಸಿಸ್​)

ಸೇನಾಪತಿ "ಕ್ರಿಸ್" ಗೋಪಾಲಕೃಷ್ಣನ್ ಒಬ್ಬ ಭಾರತೀಯ ಉದ್ಯಮಿ ಮತ್ತು ಸ್ಟಾರ್ಟ್ಅಪ್ ಆಕ್ಸಿಲರ್ ವೆಂಚರ್ಸ್‌ನ ಅಧ್ಯಕ್ಷರು. ಅವರು ಇನ್ಫೋಸಿಸ್‌ನ ಸಹ-ಸಂಸ್ಥಾಪಕರಲ್ಲಿ ಒಬ್ಬರಾಗಿದ್ದು, 2007 ರಿಂದ 2011 ರವರೆಗೆ ಅದರ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು 2011 ರಿಂದ 2014 ರವರೆಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಆದಾಯ 31 ಸಾವಿರ ಕೋಟಿ (($4.35 ಬಿಲಿಯನ್​)

PREV
Read more Articles on
click me!

Recommended Stories

ದೀಪಾವಳಿ ಆರಂಭದಲ್ಲೇ ಬೆಂಗಳೂರಿನಲ್ಲಿ 106% ಏರಿದ ವಾಯು ಮಾಲಿನ್ಯ! ಪಟಾಕಿ ಶಬ್ದಕ್ಕೆ ಸತ್ತು ಬಿದ್ದ ಪಕ್ಷಿಗಳು
ದೀಪಾವಳಿ ಪಟಾಕಿ ಶಬ್ದಕ್ಕೆ ಪ್ರಾಣ ಬಿಟ್ಟ ಪಕ್ಷಿಗಳು! ಎದೆಯೊಡೆದು ಮರದ ಮೇಲಿಂದ ಬಿದ್ದ ಮೂಕ ಜೀವಿಗಳು