ದೀಪಾವಳಿ ಪಟಾಕಿ ಶಬ್ದಕ್ಕೆ ಪ್ರಾಣ ಬಿಟ್ಟ ಪಕ್ಷಿಗಳು! ಎದೆಯೊಡೆದು ಮರದ ಮೇಲಿಂದ ಬಿದ್ದ ಮೂಕ ಜೀವಿಗಳು

Published : Nov 09, 2026, 01:30 PM IST
deepavali firecrackers sound birds death

ಸಾರಾಂಶ

ದೇಶಾದ್ಯಂತ ಸಂಭ್ರಮ ಮೂಡಿಸಿರುವ ದೀಪಾವಳಿ ಹಬ್ಬದ ಪಟಾಕಿಯ ಭಾರೀ ಶಬ್ದಕ್ಕೆ ಬೆಚ್ಚಿ ಗಿಳಿಗಳು ಸೇರಿದಂತೆ ಹಲವು ಪಕ್ಷಿಗಳು ಮರದಿಂದ ಬಿದ್ದು ಮೃತಪಟ್ಟಿವೆ. ಶಬ್ದ ಮಾಲಿನ್ಯ ಪಟಾಕಿ ನಿಷೇಧಕ್ಕೆ ಆಗ್ರಹಿಸಲಾಗಿದೆ. ಈ ಘಟನೆ ಎಲ್ಲಿ ನಡೆದಿದೆ? ವಿವರ ಇಲ್ಲಿದೆ.

ವಿಜಯನಗರ (ನ.09): ದೇಶದ ಜನತೆಗೆ ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಪಟಾಕಿಗಳ ಅತಿಯಾದ ಶಬ್ದಕ್ಕೆ ಪ್ರಾಣಿ-ಪಕ್ಷಿಗಳು ಬಲಿಯಾಗುತ್ತಿರುವ ದಯನೀಯ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದಿದೆ.

ಕೂಡ್ಲಿಗಿ ಪಟ್ಟಣದ ರಾಜೀವ್ ಗಾಂಧಿ ನಗರದಲ್ಲಿ ಸಾರ್ವಜನಿಕರು ಸಿಡಿಸಿದ ಭಾರೀ ಶಬ್ದದ ಪಟಾಕಿಗಳ ಸದ್ದಿಗೆ ಬೆಚ್ಚಿಬಿದ್ದ ಗಿಳಿಗಳು ಸೇರಿದಂತೆ ಹಲವು ಪಕ್ಷಿಗಳು ಎದೆಯೊಡೆದು ಮರದ ಮೇಲಿಂದ ಬಿದ್ದು ಪ್ರಾಣ ಬಿಟ್ಟಿವೆ. ಪಟಾಕಿಗಳ ಚಿನ್ನಾಟವು ಮೂಕ ಪ್ರಾಣಿ ಮತ್ತು ಪಕ್ಷಿಗಳಿಗೆ ಪ್ರಾಣಸಂಕಟವಾಗಿ ಪರಿಣಮಿಸಿದೆ.

ಸಾಕುಪ್ರಾಣಿಗಳು, ವೃದ್ಧರು ಹಾಗೂ ರೋಗಿಗಳಿಗೆ ತೀವ್ರ ತೊಂದರೆ

ಪಟಾಕಿಯ ಅತಿಯಾದ ಶಬ್ದ ಮತ್ತು ಹೊಗೆಯಿಂದಾಗಿ ಕೇವಲ ಪಕ್ಷಿಗಳು ಮಾತ್ರವಲ್ಲದೆ ಸಾಕು ಪ್ರಾಣಿಗಳೂ ಬೆಚ್ಚಿಬಿದ್ದಿವೆ. ಜೊತೆಗೆ ನವಜಾತ ಶಿಶುಗಳು, ವೃದ್ಧರು ಹಾಗೂ ಹೃದಯ ಸಂಬಂಧಿ ಮತ್ತು ಕಿವಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ತೀವ್ರ ಸ್ವರೂಪದ ತೊಂದರೆಯಾಗಿದೆ.

ಕಠಿಣ ಕಾನೂನು ಕ್ರಮಕ್ಕೆ ವಿವಿಧ ಸಂಘಟನೆಗಳ ಆಗ್ರಹ

ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟುಮಾಡುವ ಶಬ್ದವೇದಿ ಪಟಾಕಿಗಳ ಮಾರಾಟ ಹಾಗೂ ಬಳಕೆಗೆ ತಕ್ಷಣವೇ ಕಡಿವಾಣ ಹಾಕಬೇಕೆಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಭಾರೀ ಶಬ್ದ ಮಾಡುವ ಪಟಾಕಿಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೆ ತರಬೇಕು ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಸೇರಿದಂತೆ ಹಲವು ಪರಿಸರ ಪ್ರೇಮಿ ಸಂಘಟನೆಗಳು ಆಡಳಿತ ಮಂಡಳಿಯನ್ನು ಒತ್ತಾಯಿಸಿವೆ.

PREV
Read more Articles on
click me!

Recommended Stories

ದೀಪಾವಳಿ ಆರಂಭದಲ್ಲೇ ಬೆಂಗಳೂರಿನಲ್ಲಿ 106% ಏರಿದ ವಾಯು ಮಾಲಿನ್ಯ! ಪಟಾಕಿ ಶಬ್ದಕ್ಕೆ ಸತ್ತು ಬಿದ್ದ ಪಕ್ಷಿಗಳು
ಕರ್ನಾಟಕದ ಆಗರ್ಭ ಶ್ರೀಮಂತರ ಪಟ್ಟಿ ಇಲ್ಲಿದೆ ನೋಡಿ: ಟಾಪ್​ 1- 2ಕ್ಕೆ ಇದೆ 2 ಲಕ್ಷ ಕೋಟಿ ರೂ ಅಂತರ