ತಾಲೂಕಿನ ಶಾಂತಿಪುರ ಗ್ರಾಮದಲ್ಲಿನ ತಂಬಾಕು ಹರಾಜು ಮಾರುಕಟ್ಟೆಫ್ಲಾಟ್ ಫಾರಂ. 1ರಲ್ಲಿ ಶನಿವಾರ ನಡೆದ ಮಾರುಕಟ್ಟೆಯಲ್ಲಿ 1 ಕೆಜಿ ತಂಬಾಕು, ಗರಿಷ್ಠ ದರ . 266ಗೆ ಮಾರಾಟವಾಗಿದೆ.
ಎಚ್.ಡಿ. ಕೋಟೆ (ನ.14): ತಾಲೂಕಿನ ಶಾಂತಿಪುರ ಗ್ರಾಮದಲ್ಲಿನ ತಂಬಾಕು ಹರಾಜು ಮಾರುಕಟ್ಟೆಫ್ಲಾಟ್ ಫಾರಂ. 1ರಲ್ಲಿ ಶನಿವಾರ ನಡೆದ ಮಾರುಕಟ್ಟೆಯಲ್ಲಿ 1 ಕೆಜಿ ತಂಬಾಕು, ಗರಿಷ್ಠ ದರ . 266ಗೆ ಮಾರಾಟವಾಗಿದೆ.
2022-23ನೇ ಸಾಲಿನಲ್ಲಿಮಾರುಕಟ್ಟೆಯ ಗರಿಷ್ಟದರ ಇದು. ಕನಿಷ್ಠ ದರ . 150 ಇದ್ದು, ಸರಾಸರಿ . 253 ದೊರೆತಿದೆ. ಇಂದು 1068 ಬೇಲುಗಳು ಬಂದಿದ್ದು, 974 ಬೇಲುಗಳು ಮಾರಾಟವಾಗಿದೆ. ಇಂದಿನ ಹರಾಜಿನಲ್ಲಿ ಒಟ್ಟು 14 ಕಂಪೆನಿಗಳು ಭಾಗವಹಿಸಿದ್ದವು.
undefined
ಈ ಸಾಲಿನಲ್ಲಿ ಮಾರುಕಟ್ಟೆಪ್ರಾರಂಭ ಆಗಲಿಕ್ಕೆ ಮುನ್ನ ತಂಬಾಕು ರೈತರು, ಕನಿಷ್ಠ ದರ ಒಂದು ಕೆಜಿಗೆ . 250 ಮೇಲೆ ಮಾರಾಟವಾಗಬೇಕು ಎಂದು ಪ್ರತಿಭಟನೆ ನಡೆಸಿ, ಮಂಡಳಿ ಅಧೀಕ್ಷಕ ವಿಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ ಮಾರುಕಟ್ಟೆಪ್ರಾರಂಭವಾದ ಮೊದಲ ದಿನ ತಂಬಾಕು ಕೆಜಿಗೆ ಕೇವಲ . 200ನಂತೆ ಮಾರಾಟವಾಗಿತ್ತು. ನಂತರ ದರ ಇನ್ನು ಕಡಿಮೆ ಆಗುತ್ತಾ ಬಂತು. ಹಾಗಾಗಿ ಹಾರಜು ನಡೆಸುವ ಸಮಯದಲ್ಲಿ ಕೆಲವು ರೈತರು ಪ್ರತಿಭಟನೆ ನಡೆಸಿ, ಉತ್ತಮ ದರ ಸಿಗುವ ತನಕ ಮಾರುಕಟ್ಟೆನಡೆಯಬಾರದು ಎಂದು ಮಂಡಳಿ ಅಧೀಕ್ಷಕರನ್ನು ಒತ್ತಾಯಿಸಿದ್ದರು. ಅಂದು ರಾಜ್ಯದ ಎಲ್ಲಾ ತಂಬಾಕು ಮಾರುಕಟ್ಟೆಗಳಲ್ಲಿ ತಂಬಾಕಿನ ಬೆಲೆ ಕಡಿಮೆ ಆದ ಹಿನ್ನೆಲೆಯಲ್ಲಿ ಮಾರುಕಟ್ಟೆಸ್ಥಗಿತಗೊಳಿಸಲಾಗಿತ್ತು.
ಮಾರುಕಟ್ಟೆಯಲ್ಲಿ ತಂಬಾಕಿಗೆ ಉತ್ತಮ ದರ ಕೊಡುವ ಸಂಬಂಧ ತಂಬಾಕು ಖರೀದಿದರಾರರೊಂದಿಗೆ ಮೈಸೂರಿನ ತಂಬಾಕು ಮಂಡಳಿ ಕಚೇರಿಯಲ್ಲಿ ಮಂಡಳಿ ಅಧಿಕಾರಿಗಳು ಮತ್ತು ನಿರ್ದೇಶಕರು ಸಭೆ ನಡೆಸಿ, ಖರೀದಿದಾರರಿಗೆ ಉತ್ತಮ ದರ ಕೊಡುವಂತೆ ಮನವಿ ಮಾಡಿದ್ದರು. ನಂತರದಲ್ಲಿ . 220ರಿಂದ ಪ್ರಾರಂಭವಾದ ಮಾರುಕಟ್ಟೆಇಂದು . 255ಗೆ ಬಂದು ನಿಂತಿದೆ. ರೈತರಿಗೆ ಉತ್ತಮ ದರ ಸಿಗುತ್ತಿದೆ ಎಂದರೂ, ಈ ಬಾರಿ ಅತೀವೃಷ್ಟಿಯಿಂದ ತಂಬಾಕು ಇಳುವರಿ ಕಡಿಮೆ ಆಗಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮಂಡಳಿ ಅಧೀಕ್ಷಕ ಎ.ಎಸ್. ವಿಜಯಕುಮಾರ್, ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿದೆ. ರೈತರು ಕೂಡ ಸಂತಸದಿಂದ ಬೇಲುಗಳನ್ನು ತರುತ್ತಿದ್ದಾರೆ. ಆದರೆ ಮಂಡಳಿ ವ್ಯಾಪ್ತಿಯ ರೈತರು ಒಮ್ಮೆಗೆ ತಂಬಾಕು ತಂದರೆ, ಕಷ್ಟವಾಗುತ್ತದೆ ಎನ್ನುವ ಉದ್ಧೇಶದಿಂದ ನ. 14 ರಂದು ಉಮ್ಮತ್ತೂರು-ಬಿ ಮತ್ತು ಹೆಗ್ಗನೂರು ಭಾಗದ ರೈತರು, ನ. 15 ರಂದು ಮಟಕೆರೆ ಮತ್ತು ಉಮ್ಮತ್ತೂರು-ಎ ಭಾಗದ ರೈತರು, ನ. 16 ರಂದು, ಮಟಕೆರೆ, ಅಣ್ಣೂರು, ನ. 17 ರಂದು ಬಡಗಲಪುರ ಮತ್ತು ಅಣ್ಣೂರು, ನ. 18 ರಂದು ಉಮ್ಮತ್ತೂರು-ಬಿ ಮತ್ತು ಎಚ್.ಡಿ. ಕೋಟೆ ಹಾಗೂ ನ. 19 ರಂದು ಮಟಕೆರೆ ಮತ್ತು ಹೆಗ್ಗಂದೂರು ಭಾಗದ ರೈತರು ಬೇಲುಗಳನ್ನು ತರಬೇಕು ಎಂದರು.
ಸಮಸ್ಯೆ ಪರಿಹರಿಸಲು ಆಗ್ರಹ
ಹುಣಸೂರು : ಈ ಸಾಲಿನ ತಂಬಾಕು ಹರಾಜು ಮಾರುಕಟ್ಟೆಕಾರ್ಯಾರಂಭಕ್ಕೂ ಮುನ್ನ ರೈತರೊಂದಿಗೆ ಪೂರ್ವಭಾವಿ ಸಭೆ ನಡೆಸಿ ರೈತರ ಸಮಸ್ಯೆಗಳ ಕುರಿತು ಪರಿಹಾರೋಪಾಯ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತಸಂಘ ಒತ್ತಾಯಿಸಿದೆ.
ಇತ್ತೀಚೆಗೆ ಮೈಸೂರಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತಮುಖಂಡರ (Farmers Leader) ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಸಮಸ್ಯೆಗಳ ಕುರಿತು ಮಾಹಿತಿ ನೀಡಲಾಗಿದೆ.
ತಂಬಾಕು ಮಾರುಕಟ್ಟೆ (Market) ಆರಂಭಕ್ಕೂ ಮುನ್ನ ರೈತಮುಖಂಡರೊಂದಿಗೆ ತಂಬಾಕು ಮಂಡಳಿ ರಾಜ್ಯನಿರ್ದೇಶಕರು ಮತ್ತು ಖರೀದಿ ಕಂಪನಿಗಳು ಪೂರ್ವಭಾವಿ ಸಭೆ ನಡೆಸುವುದು ವಾಡಿಕೆ. ಆದರೆ ಈ ಬಾರಿ ಸ್ಥಳೀಯ ಮಟ್ಟದ ಹರಾಜು ಅಧೀಕ್ಷಕರೊಂದಿಗೆ ಸಭೆ ಆಯೋಜಿಸಲಾಗಿತ್ತು. ಹುಣಸೂರು (Hunasuru) ಮತ್ತು ಎಚ್.ಡಿ. ಕೋಟೆಯ ಎರಡೂ ಮಾರುPಟ್ಟೆಗಳಲ್ಲಿ ಸಭೆಯನ್ನು ರೈತರು ಬಹಿಷ್ಕರಿಸಿ ಹೊರಬಂದಿದ್ದೇವೆ. ಅತಿವೃಷ್ಟಿಯಿಂದಾಗಿ ಈ ಬಾರಿ ರೈತರು ಪಡಬಾರದ ಪಾಡು ಅನುಭವಿಸಿ ತಂಬಾಕು ಬೆಳೆದಿದ್ದೇವೆ. ಅತಿ ಮಳೆಯಿಂದಾಗಿ 2-3 ಬಾರಿ ಎಸ್‌ಒಪಿ ರಸಗೊಬ್ಬರ ಹಾಕಲಾಗಿದೆ. . 2200 ಗಳಿದ್ದ ಎಸ್‌ಒಪಿ ರಸಗೊಬ್ಬರ ಈ ಬಾರಿ . 5200 ಆಗಿದೆ. ಹದಗೊಳಿಸಲು ಬಳಸುವ ಸೌದೆ ಬೆಲೆಯೂ ಗಗನಕ್ಕೇರಿದೆ. ಇಂತಹ ಸಂದರ್ಭದಲ್ಲಿ ರೈತರೊಂದಿಗೆ ಪೂರ್ವಭಾವಿ ಸಭೆ ನಡೆಸದೆ ಅ. 10ಕ್ಕೆ ಮಾರುಕಟ್ಟೆಆರಂಭಕ್ಕೆ ನಿರ್ಧರಿಸಿರುವುದು ಖಂಡನೀಯ ಎಂದು ಮುಖಂಡರು ಹೇಳಿದರು.