
ವರದಿ: ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಜೂ.08): ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಬಂಡೀಪುರದ ಪ್ರಾಕೃತಿಕ ಸೌಂಧರ್ಯಕ್ಕೆ ಮನ ಸೋಲದವರೇ ಇಲ್ಲ. ಇಂತ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿಗಳ ಕುರಿತು ರಿಸರ್ಚ್ ನಡೆಸಬೇಕಿದ್ರೆ ಅರಣ್ಯಾಧಿಕಾರಿಗಳು ಪಡಬಾರದ ಪರಿಪಾಟಿಲು ಪಡ್ತಾಯಿದ್ರು ಆದ್ರೆ ಆ ಸಂಕಷ್ಟಕ್ಕೆ ಈಗ ಬ್ರೇಕ್ ಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. ಬಂಡೀಪುರ ಈ ಹೆಸರು ಕೇಳಿದ್ರೆ ಸಾಕು ಪ್ರಾಣಿ ಪ್ರಿಯರು ಹಾಗೂ ಪರಿಸರವಾದಿಗಳ ಮೊಗದಲ್ಲಿ ಮಂದಹಾಸ ಮೂಡುತ್ತೆ. ಯಾಕಂದ್ರೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಈ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ನ ಪ್ರಕೃತಿಯ ಸೌಂಧರ್ಯದ ವರ್ಚಸ್ಸೆ ಅಂತಹದ್ದು.
ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನ ರಾಜ್ಯದಲ್ಲೇ ಅತಿ ಹೆಚ್ಚು ಆನೆ ಮತ್ತು ಚಿರತೆಗಳನ್ನ ಹೊಂದಿರುವ ಏಕೈಕ ಟೈಗರ್ ರಿಸರ್ವ್ ಫಾರೆಸ್ಟ್ ಇದು. ಇಂತ ಖ್ಯಾತಿ ಪಡೆದ ಬಂಡೀಪುರದಲ್ಲಿ ಹುಲಿಯ ಗಣತಿ ಕಾರ್ಯ ಅಥವಾ ಯಾವುದಾದ್ರು ವ್ಯಾಘ್ರದ ಕುರಿತು ರಿಸರ್ಚ್ ಮಾಡ್ಬೇಕಿದ್ರೆ ದೂರದ ಬೆಂಗಳೂರಿನ ಕೇಂದ್ರ ಕಚೇರಿಗೆ ತೆರಳಬೇಕಿತ್ತು. ಇದರಿಂದ ಅರಣ್ಯಾಧಿಕಾರಿಗಳಿಗೆ ಭಾರೀ ಸಂಕಷ್ಟ ಎದುರಾಕ್ತಯಿತ್ತು ಈಗ ಇದಕ್ಕೊಂದು ಪರಿಹಾರ ಸಿಕ್ಕಿದೆ ಇನ್ನು ಕೆಲವೇ ದಿನಗಳಲ್ಲಿ ಬಂಡೀಪುರದ ಮೇಲುಕಾಮನ ಹಳ್ಳಿಯಲ್ಲಿ ಟೈಗರ್ ರಿಸರ್ಚ್ ಸೆಲ್ ಆರಂಭಗೊಳ್ಳಲಿದೆ.
ಇನ್ನು ಬಂಡೀಪುರ ಸೇರಿದಂತೆ ರಾಜ್ಯದಲ್ಲಿ ಬಿಳಿಗಿರಿ ಟೈಗರ್ ರಿಸರ್ವ್, ಭದ್ರ ಟೈಗರ್ ರಿಸರ್ವ್ ನಾಗರಹೊಳೆ ಟೈಗರ್ ರಿಸರ್ವ್ ಫಾರೆಸ್ಟ್ ಗಳಿವೆ. ರಾಜ್ಯ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಟೈಗರ್ ರಿಸರ್ಚ್ ಎಂಡ್ ಮಾನಿಟರಿಂಗ್ ಸೆಲ್ ನ ಅನಿವಾರ್ಯತೆ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ವರದಿ ನೀಡಲಾಗಿತ್ತು. ಈ ವರದಿ ಆದಾರದ ಮೇಲೆ ರಾಜ್ಯದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಟೈಗರ್ ಸೆಲ್ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದ್ದು ಅದರ ಮೊದಲ ಹಂತವಾಗಿ ಬಂಡೀಪುರದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು ಇನ್ನು ಕೆಲ ದಿನಗಳಲ್ಲೇ ನೂತನ ಟೈಗರ್ ರಿಸರ್ಚ್ ಎಂಡ್ ಮಾನಿಟರಿಂಗ್ ಸೆಲ್ ಲೋಕಾರ್ಪಣೆ ಗೊಳ್ಳಲಿದೆ.
ಇದರಿಂದ ಬಂಡೀಪುರದಲ್ಲಿ ಪ್ರತಿಯೊಂದು ಹುಲಿಯ ಮಾನಿಟರಿಂಗ್ ಮಾಡಬಹುದು ವರ್ಷದಿಂದ ವರ್ಷಕ್ಕೆ ಎಷ್ಟು ಹುಲಿಗಳ ಸಂಖ್ಯೆ ಹೆಚ್ಚಾಗಿದೀಯ ಅಥವ ಕಡಿಮೆ ಆಗಿದ್ಯ ಎಂಬುದರ ನಿಖರ ಮಾಹಿತಿ ದೊರೆಯಲಿದೆ ಇದರ ಜೊತೆಗೆ ಕ್ಯಾಪ್ಚರಿಂಗ್ ಕಾರ್ಯ ಹಾಗೂ ಯಾವುದಾದ್ರು ಹುಲಿಯ ಮೇಲೆ ರಿಸರ್ಚ್ ನ್ನ ಸಹ ಇಲ್ಲೇ ಮಾಡಬಹುದಾಗಿದೆ. ಸದ್ಯ ರಾಜ್ಯ ಸರ್ಕಾರದ ಈ ನಡೆಯಿಂದ ಮುಂಬರುವ ಕಾಡುಪ್ರಾಣಿಗಳ ಕುರಿತಾದ ನಿಖರ ಹಾಗೂ ಸ್ಪಷ್ಟ ಮಾಹಿತಿ ಸಿಗಲಿದೆ ಇದರ ಜೊತೆಗೆ ಇನ್ನು ಅಧಿಕವಾಗಿ ವನ್ಯ ಮೃಗಗಳನ್ನ ತೀಕ್ಷಣಾಗಿ ಅದ್ಯಯನ ಮಾಡಬಹುದಾಗಿದೆ.