
ಹಗರಿಬೊಮ್ಮನಹಳ್ಳಿ(ಆ.09): ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ ಆಟವಾಡಿಕೊಂಡಿದ್ದ 3 ವರ್ಷದ ಬಾಲಕ ಪ್ರತಾಪ್ ಕಲ್ಯಾಣಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ನಡೆದಿದೆ.
ಮಗುವಿನ ಸಾವಿನಿಂದ ವಿಚಲಿತರಾದ ತಂದೆ ಮಂಜುನಾಥ, ತಾಯಿ ನೇತ್ರಾವತಿ ಆಕ್ರಂದನ ಹೃದಯ ಕಲಕುವಂತಿತ್ತು.
ಸೆಲ್ಫಿ ಗೀಳು: ಮೂವರು ಸಹೋದರಿಯರ ದಾರುಣ ಸಾವು
ಹೊಂಡದಿಂದ ಮಗುವನ್ನು ಎತ್ತಿಕೊಂಡು ಸರ್ಕಾರಿ ಆಸ್ಪತ್ರೆಗೆ ಕರೆತಂದರಾದರೂ ಅಷ್ಟೊತ್ತಿಗಾಗಲೇ ಮಗು ಮರಣ ಹೊಂದಿತ್ತು. ಇತ್ತೀಚಿಗೆ ಮಳೆ ಬಂದ ಹಿನ್ನೆಲೆಯಲ್ಲಿ ನೀರಿನಿಂದ ಕಲ್ಯಾಣಿ ತುಂಬಿತ್ತು. ನೀರನ್ನು ಹೊರ ಹಾಕುವ ಮೋಟರ್ ಕೆಟ್ಟಿದ್ದು, ನೀರು ಖಾಲಿ ಮಾಡಿರಲಿಲ್ಲ. ಆವಾರದಲ್ಲಿ ಚಿಕ್ಕ ಪುಟ್ಟ ಮಕ್ಕಳು ಆಟವಾಡಿಕೊಂಡಿರುವಾಗ ಈ ಘಟನೆ ನಡೆದಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಮಾರುತಿ ದೂರು ದಾಖಲಿಸಿಕೊಂಡಿದ್ದಾರೆ.