ಮೈಸೂರು ಮೃಗಾಲಯದಲ್ಲಿ 3 ಹುಲಿ ಮರಿಗಳ ದರ್ಶನಕ್ಕೆ ಚಾಲನೆ

By Gowthami K  |  First Published Dec 25, 2022, 6:10 PM IST

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಏ.26 ರಂದು ಜನ್ಮ ತಾಳಿದ್ದ ಮೂರು ಹುಲಿ ಮರಿಗಳ ವೀಕ್ಷಣೆಗೆ ಶನಿವಾರ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಚಾಲನೆ ನೀಡಿದರು.  


ಮೈಸೂರು (ಡಿ.25): ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಏ.26 ರಂದು ಜನ್ಮ ತಾಳಿದ್ದ ಮೂರು ಹುಲಿ ಮರಿಗಳ ವೀಕ್ಷಣೆಗೆ ಶನಿವಾರ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಚಾಲನೆ ನೀಡಿದರು. ಮೃಗಾಲಯದ ಗಂಡು ಹುಲಿ ರಾಕಿ ಹಾಗೂ ಬಿಳಿ ಹೆಣ್ಣು ಹುಲಿ ತಾರಾಗೆ ಸದರಿ 3 ಮರಿಗಳು ಜನಿಸಿದ್ದವು. ಅಂದಿನಿಂದ ವೀಕ್ಷಣೆಗೆ ಬಿಟ್ಟಿರಲಿಲ್ಲ. ಶನಿವಾರ ಸಾರ್ವಜನಿಕರ ವೀಕ್ಷಣೆಗೆ ಸಚಿವರು ಮುಕ್ತಗೊಳಿಸಿದರು.

ಶಾಸಕ ಎಸ್‌.ಎ. ರಾಮದಾಸ್‌, ಮೇಯರ್‌ ಶಿವಕುಮಾರ್‌, ಉಪ ಮೇಯರ್‌ ಡಾ.ಜಿ. ರೂಪ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್‌, ಎಂಡಿಎ ಅಧ್ಯಕ್ಷ ಯಶಸ್ವಿ ಎಸ್‌. ಸೋಮಶೇಖರ್‌, ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ, ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಗೋಕುಲ್‌ ಗೋವರ್ದನ್‌, ಜ್ಯೋತಿ ರೇಚಣ್ಣ ಮೊದಲಾದವರು ಇದ್ದರು.

Latest Videos

undefined

27 ರಂದು ಮೃಗಾಲಯಕ್ಕೆ ರಜೆ ಇಲ್ಲ
ಮೈಸೂರು: ಕ್ರಿಸ್ಮಸ್‌ ಪ್ರಯುಕ್ತ ಪ್ರವಾಸಿಗರು, ಜನಸಾಮಾನ್ಯರು ಹಾಗೂ ಸ್ಥಳೀಯರಿಗೆ ಮೃಗಾಲಯ ವೀಕ್ಷಿಸಲು ಅನುವಾಗುವಂತೆ ಡಿ. 27ರಂದು ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ತಿಳಿಸಿದ್ದಾರೆ.

26ರಂದು ಪಿಲಿಕುಳ ನಿಸರ್ಗಧಾಮ ವೀಕ್ಷಣೆಗೆ ಲಭ್ಯ
ಮಂಗಳೂರು: ಅಂತಾರಾಷ್ಟ್ರೀಯ ಸ್ಕೌಟ್ಸ್‌-ಗೈಡ್‌್ಸ ಸಾಂಸ್ಕೃತಿಕ ಜಾಂಬೂರಿ ಪ್ರಯುಕ್ತ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಎಲ್ಲ ವಿಭಾಗಗಳು ಡಿ.26ರಂದು ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತವೆ.

ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್‌ ಗಾರ್ಡನ್‌, ಬೊಟಾನಿಕಲ್‌ ಮ್ಯೂಸಿಯಂ ಮತ್ತು ಸಂಸ್ಕೃತಿ ಗ್ರಾಮ ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲ ದಿನಗಳಂತೆ ತೆರೆದಿರುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಪ್ರಕಟಣೆ ತಿಳಿಸಿದೆ.

ಕ್ರಿಸ್ಮಸ್‌ ಮುನ್ನಾ ದಿನವೇ ಕರಾವಳಿ ಬೀಚ್‌ಗೆ ಪ್ರವಾಸಿಗರ ದಂಡು: ಕ್ರಿಸ್ಮಸ್‌ ಹಬ್ಬದ ಮುನ್ನಾ ದಿನ ಕರಾವಳಿಯ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸಿಗರ ದಂಡು ಬರತೊಡಗಿದೆ. ಮಂಗಳೂರಿನ ಬೀಚ್‌ಗಳಲ್ಲಿ ಶನಿವಾರ ಬೆಳಗ್ಗಿನಿಂದಲೇ ಪ್ರವಾಸಿಗರ ಗುಂಪು ಕಾಣಿಸತೊಡಗಿದೆ. ಸಂಜೆ ವೇಳೆಗೆ ಈ ಪ್ರಮಾಣ ಹೆಚ್ಚಾಗಿದೆ.

Karnataka Tourism: ಹಂಪಿಗೆ ಪ್ರವಾಸಿಗರ ದಂಡು

ತಣ್ಣೀರುಬಾವಿ ಬೀಚ್‌ನಲ್ಲಿ ಕೂಡ ಪ್ರವಾಸಿಗರ ದಟ್ಟಣೆ ಇದೆ. ಇದಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಪಣಂಬೂರು ಬೀಚ್‌ನಲ್ಲಿ ಜನಸಾಗರವೇ ಇದೆ. ಇಲ್ಲಿ ಪ್ರವಾಸಿಗರಿಗೆ ಉಪಯುಕ್ತ ಜಲಸಾಹಸಗಳಿಗೆ ಅವಕಾಶ ಇದೆ. ಹೀಗಾಗಿ ಪ್ರವಾಹೋಪಾದಿಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಒಂದೇ ದಿನದಲ್ಲಿ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಜಮಾಯಿಸಿದ್ದು, ಬೀಚ್‌ನಲ್ಲಿ ಸಂಜೆ ವೇಳೆಗೆ ಸಂಚಾರ ದಟ್ಟಣೆ ಉಂಟಾಗಿದೆ. ಬೆಂಗಳೂರು ಮುಂತಾದ ಊರುಗಳಿಂದ ಆಗಮಿಸಿದ ಪ್ರವಾಸಿಗರು ವಾಟರ್‌ ಸ್ಫೋಟ್ಸ್‌ರ್‍ಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಸಮುದ್ರದ ಅಲೆ ಕಠಿಣವಾಗಿರುವ ಕಾರಣ ನೀರಿನಲ್ಲಿ ಸಾಹಸಕ್ಕೆ ಭದ್ರತಾ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ. ಕ್ರಿಸ್ಮಸ್‌ ದಿನ ಭಾನುವಾರ ಪ್ರವಾಸಿಗರು ಸಾಗರೋಪಾದಿಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಪ್ರವಾಸಿಗರಿಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಇಲ್ಲಿ ಮಾಡಲಾಗಿದೆ.

New Year 2023: ಕರ್ನಾಟಕದ ಪ್ರವಾಸಿತಾಣದ ಲಾಡ್ಜ್‌ಗಳು ಈಗಲೇ ಭರ್ತಿ..!

ಪಿಲಿಕುಳ ನಿಸರ್ಗಧಾಮಕ್ಕೂ ಪ್ರವಾಸಿಗರ ನಿರಂತರ ಭೇಟಿ ಶನಿವಾರದಿಂದ ಶುರುವಾಗಿದೆ. ಈಗಾಗಲೇ ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಜಾಗತಿಕ ಜಾಂಬೂರಿ ಕಾರ್ಯಕ್ರಮದ ಭಾಗವಾಗಿ ಸ್ಕೌಟ್ಸ್‌-ಗೈಡ್‌್ಸ ವಿದ್ಯಾರ್ಥಿಗಳು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ. ಇದರ ನಡುವೆ ಬೇರೆ ಬೇರೆ ಊರುಗಳ ಪ್ರವಾಸಿಗರು ಕೂಡ ಬರುತ್ತಿದ್ದಾರೆ. ಕ್ರಿಸ್ಮಸ್‌ ರಜೆ ಕಾರಣ ಪಿಲಿಕುಳ ನಿಸರ್ಗಧಾಮ ಡಿ.26ರಂದು ಸಾರ್ವಜನಿಕರ ಭೇಟಿಗೆ ತೆರೆದಿರಲಿದೆ.

click me!