* ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆಣೇಗೆರೆಯಲ್ಲಿ ನಡೆದ ಘಟನೆ
* ಕಿರಣ್, ರಾಕೇಶ್ ಮತ್ತು ದರ್ಶನ್ ಮೃತಪಟ್ಟ ದುರ್ದೈವಿಗಳು
* ಆಣೇಗೆರೆ ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು
ಕಡೂರು(ಜೂ.20): ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಕೆರೆಯ ಉಸುಕಿನಲ್ಲಿ ಸಿಲುಕಿ ಮೃತಪಟ್ಟಿರುವ ದುರ್ಘಟನೆ ತಾಲೂಕಿನ ಆಣೇಗೆರೆಯಲ್ಲಿ ನಿನ್ನೆ(ಭಾನುವಾರ) ಮಧ್ಯಾಹ್ನ ನಡೆದಿದೆ.
ಪಂಚನಹಳ್ಳಿ ಹೋಬಳಿಯ ಬಿಟ್ಟೇನಹಳ್ಳಿ ಗ್ರಾಮದ ಬಸವರಾಜಪ್ಪ ಎಂಬವರ ಪುತ್ರರಾದ ಕಿರಣ್ (18), ರಾಕೇಶ್ (17) ಮತ್ತು ಬಸವರಾಜು ಎಂಬವರ ಪುತ್ರ ದರ್ಶನ್ (16) ಮೃತಪಟ್ಟ ದುರ್ದೈವಿಗಳು.
ಅಪ್ಪಂದಿರ ದಿನದಂದೇ ದುರಂತ ಅಂತ್ಯಕಂಡ ತಂದೆ-ಮಗ
ಈ ಮೂವರು ವಿದ್ಯಾರ್ಥಿಗಳೂ ಆಣೇಗೆರೆ ಸುತ್ತಮುತ್ತಲಿನ ಮರಗಳಲ್ಲಿ ನೇರಳೆಹಣ್ಣನ್ನು ಕಿತ್ತು ತಿಂದಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆ ವೇಳೆಗೆ ಆಣೇಗೆರೆ ಕೆರೆಗೆ ಈಜಲು ತೆರಳಿದ್ದಾರೆ. ಸುಮಾರು 20 ಅಡಿ ಆಳದ ಕೆರೆಯ ಉಸುಕಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.