
ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ತಂತ್ರಜ್ಞಾನ ಹೆಚ್ಚಾದಂತೆ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಲೇ ಇರುತ್ತದೆ. ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಕೂಡ ಭಾರತ ಪ್ರತಿಭೆಗಳು ತಮ್ಮ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರೆ. ಅದರಲ್ಲೂ ಭಾರತದಲ್ಲಿ ಅಗತ್ಯ ಬೆಂಬಲ ಹಾಗೂ ಅವಕಾಶಗಳು ಇಲ್ಲದೇ ಹಲವರು ವಿದೇಶಗಳಿಗೆ ತೆರಳುತ್ತಾರೆ. ಈಗ ನಾವು ಇಂತಹದ್ದೆ ಕಥೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಈಕೆ 24 ವರ್ಷದ ಅನುಘ ರಾಜೇಶ್, ಭಾರತದಲ್ಲಿಯೇ ಜನಿಸಿ, ಇಲ್ಲಿಯೇ ಶಿಕ್ಷಣ ಪಡೆದುಕೊಂಡು ಒಂದು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರು. ಆದರೆ ಈಗ ಈ ತಂತ್ರಜ್ಞಾನವನ್ನು ಅಮೆರಿಕಗೆ ಶಿಫ್ಟ್ ಮಾಡಿದ್ದಾರೆ.
ಇದು ಕೇವಲ ಈಕೆಯ ಕಥೆ ಮಾತ್ರವಲ್ಲ, ಭಾರತದಿಂದ ಹೇಗೆ ಪ್ರತಿಭೆಗಳು ವಿದೇಶಗಳಿಗೆ ಹೇಗೆ ಹೋಗುತ್ತಿವೆ ಅನ್ನೋದಕ್ಕೆ ಒಂದು ಸ್ಪಷ್ಟ ಉದಾಹಣೆಯಾಗಿದೆ. ಅನಘ ರಾಜೇಶ್ ಅವರು ಬಿಐಟಿಎಸ್ ಪಿಲಾನಿಯಿಂದ ಪದವಿ ಪಡೆದುಕೊಂಡಿದ್ದರು. 2024ರಲ್ಲಿ ಬೆಂಗಳೂರಿನಲ್ಲಿ ಬಯೋಕಂಪ್ಯೂಟರ್ ಎಂಬ ಸ್ಟಾರ್ಟ್ ಅಪ್ ಸ್ಥಾಪಿಸಿದ್ದರು. ಅವರ ಕನಸು ಬಹಳ ದೊಡ್ಡದಾಗಿತ್ತು. ವಿಶ್ವದಲ್ಲಿರುವ ಡೇಟಾವನ್ನು ಸಾಮಾನ್ಯವಾಗಿ ಡಿಸ್ಕ್, ಟೇಪ್‌ಗಳಲ್ಲಿ ಸೇವ್ ಮಾಡುವಂತೆ, ಈ ಡೇಟಾವನ್ನು ಡಿಎನ್‌ಎ ರೂಪದಲ್ಲಿ ಶೇಖರಣೆ ಮಾಡುವ ಸ್ಟಾರ್ಟ್ ಅಪ್ ಆಗಿದೆ. ಇದಕ್ಕಾಗಿ ಬಹುದೊಡ್ಡ ಪ್ರಯೋಗಾಲವನ್ನು ರಚಿಸಿದ್ದರು.
ಸಾಮಾನ್ಯವಾಗಿ ಕಂಪ್ಯೂಟರ್ ಡೇಟಾವನ್ನು ಹರ್ಡ್ ಡಿಸ್ಕ್, ಮೆಮೊರಿ ಚಿಪ್ ಅಥವಾ ಕ್ಲೌಡ್ ಡೇಟಾ ಸೆಂಟರ್‌ನಲ್ಲಿ ಶೇಖರಣೆ ಮಾಡುತ್ತಾರೆ. ಆದರೆ ಇವರು 2024ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿದ ಬಯೋ ಕಂಪ್ಯೂಟರ್ ಸಂಸ್ಥೆ ಡಿಎನ್‌ಎ ಸಹಾಯದೊಂದಿಗೆ ಡೇಟಾವನ್ನು ಶೇಖರಣೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತ್ತು. ಒಂದು ಗ್ರಾಂ ಡಿಎನ್‌ಎನಲ್ಲಿ 215 ಪೆಟಾಬೈಟ್ ಡೇಟಾವನ್ನು ಸಂಗ್ರಹಿಸಬಹುದಂತೆ. ವಿಶ್ವದ ಅತಿದೊಡ್ಡ ಡೇಟಾ ಕೇಂದ್ರಗಳನ್ನು ಸಣ್ಣ ಅಣುವಿನ ಗ್ರಾತಕ್ಕೆ ಕುಗ್ಗಿಸಲು ಇದು ನೆರವು ನೀಡುತ್ತದೆ.
ಇನ್ನು, ಸಂಗ್ರಹಿಸಿದ ಡೇಟಾ ಕೆಲವೇ ದಿನಗಳಲ್ಲಿ ಸ್ಕಾರ್ಪ್ ಆಗಬಹುದು ಅಥವಾ ಹಾರ್ಡ್ ಡಿಸ್ಕ್ ಗಳು ನಾಶವಾಗಬಹುದು. ಆದರೆ ಡಿಎನ್‌ಎ ಡೇಟಾವನ್ನು ಸಾವಿರಾರು ವರ್ಷ ಉಳಿದುಕೊಳ್ಳುತ್ತದೆ. ಇಂತಹ ಅದ್ಭುತ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ, ದೊಡ್ಡ ಸಂಸ್ಥೆಯಾಗಿ ಕಟ್ಟುವ ಪ್ರಯತ್ನ ಮಾಡಿದ್ದರು. ಆದರೆ ಈಗ ಬೆಂಗಳೂರಿನ ಪ್ರಯೋಗಾಲಯವನ್ನು ಮಾರಾಟ ಮಾಡಿ ಸ್ಯಾನ್ ಫ್ರಾನ್ಸಿಸ್ಕೋಗೆ ಶಿಫ್ಟ್ ಮಾಡಿದ್ದಾರೆ.
Meet Anagha Rajesh
24-year-old entrepreneur who invested ₹5 crore to build a Bengaluru-based lab called BioCompute.
She developed technology that can store data in DNA.
When she approached Indian investors they refused to fund her company because they wanted quick returns, which BioCompute couldn’t promise.
She also received no meaningful support from the Indian government.
Anagha eventually sold her lab for pennies and moved to the United States. As soon as she arrived investors lined up.
Bitter truth: India talks about becoming a global superpower but fails to value the skilled people who want to build India.
— Dr. Rajeshwari Iyer (@RajeshwariRW) October 20, 2026
2024ರಲ್ಲಿ ಅನಘ ಬಯೋಕಂಪ್ಯೂಟರ್ ಎಂಬ ಸ್ಟಾರ್ಟ್ ಅಪ್ ಅನ್ನು ಪ್ರಾರಂಭಿಸಿದ್ದರು. ಇಲ್ಲಿ ಹೊಸ ಡಿಎನ್‌ಎ ಅನ್ನು ಟೆಂಪ್ಲೇಟ್‌ಗಳಲ್ಲಿ ಕಿಣ್ವಗಳೊಂದಿಗೆ ಬರೆಯಲಾಗುತ್ತದೆ. ಇದಕ್ಕೆ ಕಡಿಮೆ ಖರ್ಚಾಗುತ್ತದೆ. ಒಂದು ಮೆಗಾಬೈಟ್ ಡಿಎನ್‌ಎ ಡೇಟಾ ಸಂಗ್ರಹಕ್ಕೆ ಕೇವಲ ಒಂದು ಡಾಲರ್ ಮಾತ್ರ ಖರ್ಚಾಗುತ್ತದೆ. ಇಂದಿನ ತಂತ್ರಜ್ಞಾನಗಳಿಗೆ ಹೋಲಿಕೆ ಮಾಡಿದರೆ ಇದು ಬಹಳ ಕಡಿಮೆ ವೆಚ್ಚದ ತಂತ್ರಜ್ಞಾನ ಎಂದು ಖ್ಯಾತಿ ಪಡೆದುಕೊಂಡಿತ್ತು.
ಇಂತಹ ಒಂದು ಪ್ರಯೋಗ ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಲ್ಯಾಬ್ ಆರಂಭಿಸಲಾಗಿತ್ತು. ಕೋರಮಂಗಲದಲ್ಲಿ ನಿರ್ಮಿಸಲಾಗಿದ್ದ ಈ ಲ್ಯಾಬ್ ನಲ್ಲಿ ಸಾವಿರಾರು ಪ್ರಯೋಗಗಳನ್ನು ಮಾಡಲಾಗಿತ್ತು. ಇದಕ್ಕಾಗಿ ಸುಮಾರು ಐದು ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ಆದರೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅನಘ, ಜೂನ್‌ನಲ್ಲಿ ಒಂದು ಬ್ಲಾಗ್ ಪೋಸ್ಟ್ ಮಾಡಿದ್ದರು. ಇದರಲ್ಲಿ ಬೆಂಗಳೂರಿನ ಲ್ಯಾಬ್ ಅನ್ನು ಸ್ಥಗಿತಗೊಳಿಸಲಾಗಿದೆ. ಲ್ಯಾಬ್ ಉಪಕರಣಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಲಾಯಿತು ಎಂದು ಬರೆದುಕೊಂಡು ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೇ ಹೊಸ ಲ್ಯಾಬ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿದೆ, ಮುಂದಿನ ತಂತ್ರಜ್ಞಾನ ಅಭಿವೃದ್ಧಿ ಹೆಚ್ಚು ಅಪಾಯ ಮತ್ತು ಹೂಡಿಕೆ ಹಾಗೂ ಹೆಚ್ಚಿನ ಪ್ರತಿಭೆಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಅನಘ ಅವರ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹೂಡಿಕೆ, ಸಂಶೋಧನೆ ಮತ್ತು ಮೂಲಸೌಕರ್ಯ ಸೇರಿದಂತೆ ಡಿಎನ್‌ಎ ಡೇಟಾದಂತಹ ದೀರ್ಘಕಾಲದ ವೈಜ್ಞಾನಿಕ ತಂತ್ರಜ್ಞಾನಕ್ಕೆ ಅಮೆರಿಕಾದಲ್ಲಿ ಹೆಚ್ಚಿನ ಬೆಂಬಲ ಸಿಗುವ ಅವರು ಅಲ್ಲಿಗೆ ಶಿಫ್ಟ್ ಆಗಿದ್ದಾರೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಹೊಸ ತಂತ್ರಜ್ಞಾನ ರೂಪಿಸಲು ವಿದೇಶಗಳಲ್ಲಿ ಹೆಚ್ಚಿನ ಅವಕಾಶ ನೀಡಿದರೆ, ನಮ್ಮಲ್ಲಿ ಇದರಿಂದ ಲಾಭ ಯಾವಾಗ ಸಿಗುತ್ತೆ ಅಂತ ಹೂಡಿಕೆದಾರರು ಯೋಚನೆ ಮಾಡುತ್ತಾರೆ. ಡಿಎನ್ಎ ಸಂಗ್ರಹಣೆಯ ತಂತ್ರಜ್ಞಾನ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿದರೆ ಜಗತ್ತಿನ ತಂತ್ರಜ್ಞಾನವೇ ಬದಲಾವಣೆ ಆಗಲಿದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.