ಕೆ.ಆರ್‌.ಪೇಟೆ: ಮುಳುಗುತ್ತಿದ್ದವನ ರಕ್ಷಿಸಲು ಹೋಗಿ ಮೂವರು ನೀರುಪಾಲು

Kannadaprabha News   | Asianet News
Published : Aug 26, 2021, 07:23 AM ISTUpdated : Aug 26, 2021, 07:45 AM IST
ಕೆ.ಆರ್‌.ಪೇಟೆ: ಮುಳುಗುತ್ತಿದ್ದವನ ರಕ್ಷಿಸಲು ಹೋಗಿ ಮೂವರು ನೀರುಪಾಲು

ಸಾರಾಂಶ

*  ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಚಂದಗೋನಹಳ್ಳಿ-ನಾಟನಹಳ್ಳಿ ಬಳಿ ನಡೆದ ಘಟನೆ *  ಕಾಲುವೆಯಲ್ಲಿ ಈಜಲು ಇಳಿದಿದ್ದು, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ ಯುವಕ *  ರವಿಯನ್ನು ರಕ್ಷಿಸಲು ಮುಂದಾದ ಇತರ ಮೂವರೂ ನೀರುಪಾಲು   

ಕೆ.ಆರ್‌.ಪೇಟೆ(ಆ.26): ಹೇಮಾವತಿ ನದಿಯ ಮಂದಗೆರೆ ಬಲದಂಡೆ ನಾಲೆಯಲ್ಲಿ ಈಜಲು ಹೋಗಿ ಕೊಚ್ಚಿಕೊಂಡು ಹೋಗುತ್ತಿದ್ದ ಗೆಳೆಯನನ್ನು ರಕ್ಷಿಸಲು ಹೋಗಿ ಮೂವರು ಗೆಳೆಯರು ಸೇರಿದಂತೆ ನಾಲ್ವರು ಯುವಕರು ಮೃತಪಟ್ಟಿರುವ ಘಟನೆ ತಾಲೂಕಿನ ಚಂದಗೋನಹಳ್ಳಿ-ನಾಟನಹಳ್ಳಿ ಬಳಿ ಮಂಗಳವಾರ ಸಂಜೆ ನಡೆದಿದೆ.

ಮೈಸೂರಿನ ಮೊಗರಹಳ್ಳಿ ಆಟೋ ಡ್ರೈವರ್‌ ರವಿ(27), ಕುಂಬಾರಕೊಪ್ಪಲಿನ ರಾಜು(24), ಲೋಕನಾಯಕ ನಗರದ ಮಂಜು(24) ಮತ್ತು ಚಂದ್ರು(24) ನೀರುಪಾಲಾದ ಯುವಕರು.

ಭಟ್ಕಳ: ಮುರ್ಡೇಶ್ವರದಲ್ಲಿ ಈಜಲಿಳಿದ ನಾಲ್ವರಲ್ಲಿ ಇಬ್ಬರು ನೀರುಪಾಲು

ತಾಲೂಕಿನ ಹೇಮಗಿರಿ ಬಳಿಯ ಚಂದಗೋನಹಳ್ಳಿ ಅಮ್ಮನವರ ದೇವಾಲಯಕ್ಕೆ ಪೂಜೆ ಸಲ್ಲಿಸಲು ಮೈಸೂರಿನಿಂದ 8 ಮಂದಿ ಯುವಕರು ಬಂದಿದ್ದರು. ಈ ವೇಳೆ ರವಿ ಕಾಲುವೆಯಲ್ಲಿ ಈಜಲು ಇಳಿದಿದ್ದು, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ರವಿಯನ್ನು ರಕ್ಷಿಸಲು ಮುಂದಾದ ಇತರ ಮೂವರೂ ನೀರುಪಾಲಾಗಿದ್ದಾರೆಎಂದು ಪೊಲೀಸರು ತಿಳಿಸಿದ್ದಾರೆ.

PREV
click me!

Recommended Stories

ಇದು ಬೆಂಗಳೂರಲ್ಲಿ ಮಾತ್ರ, ಸಿಗ್ನಲ್‌ನಲ್ಲಿ ನಿಂತಾಗ ಆಟೋ ಚಾಲಕನಿಂದ ಕ್ರಿಪ್ಟೋ ಟ್ರೇಡಿಂಗ್
ರಾಮನಗರ: ಓಂಕಾರೇಶ್ವರ ದೇಗುಲದ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವಾಗ ಕೆಂಡಯೊಳಗೆ ಬಿದ್ದ ಅರ್ಚಕ!