ಚಿತ್ರದುರ್ಗ: ಬೈಕ್​ಗೆ ಲಾರಿ ಡಿಕ್ಕಿ, 9 ತಿಂಗ್ಳು ಗರ್ಭಿಣಿ ಸೇರಿ ಮೂವರು ಸಾವು

Published : Jun 10, 2019, 06:37 PM ISTUpdated : Jun 10, 2019, 07:09 PM IST
ಚಿತ್ರದುರ್ಗ: ಬೈಕ್​ಗೆ ಲಾರಿ ಡಿಕ್ಕಿ, 9 ತಿಂಗ್ಳು ಗರ್ಭಿಣಿ ಸೇರಿ ಮೂವರು ಸಾವು

ಸಾರಾಂಶ

ಒಂಬತ್ತು ತಿಂಗಳ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ಹೋಗಿ ಪುನಃ ಮನೆಗೆ ತೆರಳುತ್ತಿದ್ದಾಗ ಮೈನ್ಸ್ ಲಾರಿಯೊಂದು ಯಮನಂತೆ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಗರ್ಭಿಣಿ ಸೇರಿದಂತೆ ಮೂವರು ಸಾವು ಸಾವನ್ನಪ್ಪಿದ್ದಾರೆ.

ಚಿತ್ರದುರ್ಗ, [ಜೂನ್.10]: ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ಬಳಿ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಹಾಂತೇಶ (32), ಪತ್ನಿ ದೀಪಾ (30), ದೀಪಾ ಸಹೋದರನ ಪುತ್ರ ಚೇತನ್ (8) ಮೃತ ದುರ್ದೈವಿಗಳು. ಇವರೆಲ್ಲರೂ ಭೀಮಸಮುದ್ರ ಗ್ರಾಮದ ನಿವಾಸಿಗಳಾಗಿದ್ದಾರೆ. 

ಬಸ್- ಟ್ರಕ್ ಡಿಕ್ಕಿ: ಸ್ಥಳದಲ್ಲೇ ಎಂಟು ಸಾವು

ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ದೀಪಾ ಅವರ ಮಾಸಿಕ ತಪಾಣೆಗಾಗಿ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಮೂವರು ಬಂದಿದ್ದರು. ತಪಾಸಣೆ ಬಳಿಕ ಗ್ರಾಮಕ್ಕೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನೆಯಿಂದಾಗಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ

ಮೈನ್ಸ್ ಕಂಪನಿ ವಿರುದ್ಧ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದು ಡಿಆರ್ ತುಕ್ಕಡಿ ಸಮೇತ ಸ್ಥಳಕ್ಕೆ ಪೋಲಿಸರು ದೌಡಾಯಿಸಿದ್ದಾರೆ.

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ