ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ದೋಸ್ತಿ ನಾಯಕನಿಂದಲೇ ವಿರೋಧ

By Web DeskFirst Published Jun 10, 2019, 6:11 PM IST
Highlights

ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವನ್ನು ಮಾಜಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ ಬೆನ್ನಲ್ಲೆ ಇದೀಗ ಮಯ್ತೋರ್ವ ಕಾಂಗ್ರೆಸ್ ಮಾಜಿ ಶಾಸಕರೊಬ್ಬರು ಕುಟುಕಿದ್ದಾರೆ.

ಮಂಡ್ಯ, [ಜೂನ್,10]: ಸಿಎಂ ಕುಮಾರಸ್ವಾಮಿ ಶೋಕಿಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್, ಮುಖ್ಯಮಂತ್ರಿ ಅವರರ ಗ್ರಾಮ ವಾಸ್ತವ್ಯದಿಂದ ಯಾವುದೇ ಪ್ರಯೋಜನವಿಲ್ಲ. ಅದರಿಂದ ಯಾವುದೇ ಲಾಭವೂ ಇಲ್ಲ. ಇದೊಂದು ತರ  ರಾಜಕಾರಣಿಗಳಿಗೆ ಶೋಕಿ ಇದ್ದಂತೆ  ಕುಟುಕಿದರು. 

ಗ್ರಾಮ ವಾಸ್ತವ್ಯದ ಬಗ್ಗೆ ಕುಟುಕಿದ ಸಿಎಂ ಮಾಜಿ ಆಪ್ತ

ಇಂತಹ ಕೆಲಸಕ್ಕೆ ಬಾರದ ಗ್ರಾಮ ವಾಸ್ತವ್ಯ ಬಿಟ್ಟು ಅಭಿವೃದ್ದಿ ಕೆಲಸಗಳು ಮಾಡಬೇಕೆಂದು ಕುಮಾರಸ್ವಾಮಿ ಅವರಿಗೆ ಚಂದ್ರಶೇಖರ್ ಆಗ್ರಹಿಸಿದರು.

ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಸಹ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಬಗ್ಗೆ ವ್ಯಂಗ್ಯವಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದೇ ಜೂನ್ 21ರಿಂದ ಕುಮಾರಸ್ವಾಮಿ ಅವರು ಯಾದಗಿರಿ ಜಿಲ್ಲೆಯಿಂದ ಗ್ರಾಮ ವಾಸ್ತವ್ಯ ಆರಂಭಿಸಲಿದ್ದಾರೆ. ಕಳೆದ ಬಾರಿ ಕುಮಾರಸ್ವಾಮಿ ಅವರು  ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ.

click me!