ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಮೂವರು ಸಿಐಡಿ ಕಸ್ಟಡಿಗೆ

By Kannadaprabha NewsFirst Published Dec 22, 2023, 8:07 PM IST
Highlights

ಬೆಳಗಾವಿ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯದ ಆರೋಪಿಗಳನ್ನು ಮೂರುದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ. ಆರೋಪಿಗಳಾದ ಬಸಪ್ಪ ರುದ್ರಪ್ಪ ನಾಯಕ, ರಾಜು ರುದ್ರಪ್ಪ ನಾಯಕ ಮತ್ತು ಶಿವಪ್ಪ ರಾಯಪ್ಪ ವಣ್ಣೂರ ಅವರನ್ನು ಕಸ್ಟಡಿಗೆ ತೆಗೆದುಕೊಂಡಿರುವ ಸಿಐಡಿ ಅಧಿಕಾರಿಗಳು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 

ಬೆಳಗಾವಿ(ಡಿ.22): ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ ಪ್ರಕರಣದ ಕುರಿತು ಸಿಐಡಿ ತನಿಖೆ ಚುರುಕುಗೊಂಡಿದ್ದು, ಗುರುವಾರ ಪ್ರಕರಣದ ಮೂವರು ಆರೋಪಿಗಳನ್ನು ಸಿಐಡಿ ತನ್ನ ವಶಕ್ಕೆ ತೆಗೆದುಕೊಂಡಿದೆ.

ಬೆಳಗಾವಿ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯದ ಆರೋಪಿಗಳನ್ನು ಮೂರುದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ. ಆರೋಪಿಗಳಾದ ಬಸಪ್ಪ ರುದ್ರಪ್ಪ ನಾಯಕ, ರಾಜು ರುದ್ರಪ್ಪ ನಾಯಕ ಮತ್ತು ಶಿವಪ್ಪ ರಾಯಪ್ಪ ವಣ್ಣೂರ ಅವರನ್ನು ಕಸ್ಟಡಿಗೆ ತೆಗೆದುಕೊಂಡಿರುವ ಸಿಐಡಿ ಅಧಿಕಾರಿಗಳು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 

ಬೆಳಗಾವಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಲಿಖಿತ ಅನುಮತಿ ಇಲ್ಲದೆ ಸಂತ್ರಸ್ತೆ ಭೇಟಿಗೆ ಅವಕಾಶವಿಲ್ಲ; ಹೈಕೋರ್ಟ್‌

ಸಿಐಡಿ ಡಿಐಜಿ ಸುಧೀರಕುಮಾರ ರೆಡ್ಡಿ ನೇತೃತ್ವದ ಸಿಐಡಿ ಅಧಿಕಾರಿಗಳ ತಂಡವು ಆರೋಪಿಗಳನ್ನು ಡ್ರಿಲ್‌ ಮಾಡುತ್ತಿದೆ.

click me!