ಮಲ್ಪೆ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ, 8 ಮೀನುಗಾರರ ರಕ್ಷಣೆ

By Kannadaprabha News  |  First Published Dec 22, 2023, 5:59 PM IST

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಸಮುದ್ರದ ಮಧ್ಯದಲ್ಲಿ ಮೀನುಗಾರಿಕಾ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ ಎಂಟು ಮೀನುಗಾರರನ್ನು ಮತ್ತೊಂದು ದೋಣಿಯಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.


ಮಂಗಳೂರು (ಡಿ.22): ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಸಮುದ್ರದ ಮಧ್ಯದಲ್ಲಿ ಮೀನುಗಾರಿಕಾ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ ಎಂಟು ಮೀನುಗಾರರನ್ನು ಮತ್ತೊಂದು ದೋಣಿಯಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಡಿಸೆಂಬರ್ 12 ರಂದು ರಾತ್ರಿ ಮಲ್ಪೆ ಬಂದರಿನಿಂದ ಸಮುದ್ರಕ್ಕೆ ಇಳಿದಿದ್ದ ಬೋಟ್, ಡಿಸೆಂಬರ್ 19 ರ ನಸುಕಿನ ಜಾವ ದೋಣಿಯೊಳಗೆ ನೀರು ನುಗ್ಗಲು ಪ್ರಾರಂಭಿಸಿದ್ದು, ಹಂತಹಂತವಾಗಿ ಮುಳುಗಡೆಯಾಗಲು ಆರಂಭಿಸಿದೆ. ಇದನ್ನು ಗಮನಿಸಿದ ಹತ್ತಿರದಲ್ಲೇ ಇದ್ದ ಮೂಕಾಂಬಿಕಾ ಅನುಗ್ರಹ ಹೆಸರಿನ ಮೀನುಗಾರಿಕಾ ಬೋಟ್ ನಲ್ಲಿದ್ದವರು, ಮುಳುಗುತ್ತಿದ್ದ ಬೋಟ್ ನಲ್ಲಿದ್ದವರ ರಕ್ಷಣೆ ಧಾವಿಸಿ ಕಾಪಾಡಿದ್ದಾರೆ. 

Tap to resize

Latest Videos

ನಂತರ ರಕ್ಷಿಸಲಾದ ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಶುಚಿಗೊಳಿಸಿದ ಪ್ರಕರಣ; ಮುಖ್ಯ ಶಿಕ್ಷಕಿ ಅಮಾನತು!

click me!