ಕಲಬುರಗಿ: ದಸರಾ ಹಬ್ಬದ ಸಂಭ್ರಮದಲ್ಲೇ ಮೂವರ ದಾರುಣ ಸಾವು!

By Kannadaprabha News  |  First Published Oct 11, 2024, 9:50 AM IST

ಬಟ್ಟೆ ತೊಳೆಯಲು ಹೋದ ಇಬ್ಬರು ಬಾಲಕಿಯರು ಭೀಮಾನದಿ ನೀರು ಪಾಲಾಗಿರುವ ದಾರುಣ ಘಟನೆ ಬನ್ನಟ್ಟಿಯಲ್ಲಿ ಸಂಭವಿಸಿದೆ. ಇನ್ನು ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವಿದ್ಯುತ್‌ ತಂತಿ ಸರಿಪಡಿಸಲು ಹೋದ ಡಿ ಗ್ರೂಪ್‌ ಸಿಬ್ಬಂದಿ ಕರಜಗಿ ಆಸ್ಪತ್ರೆಯಲ್ಲಿ ದಾರುಣ ಸಾವನ್ನಪ್ಪಿದ್ದಾನೆ.
 


ಕಲಬುರಗಿ/ಚವಡಾಪುರ(ಅ.11):  ದಸರಾ ಹಬ್ಬದ ಸಂಭ್ರಮದಲ್ಲಿಯೇ ಜಿಲ್ಲೆಯ ಅಫಜಲ್ಪುರ ತಾಲೂಕಿನಲ್ಲಿ ಒಂದೇ ದಿನ ಮೂವರ ದಾರುಣ ಸಾವು ಸಂಭವಿಸಿದೆ. ಹೀಗಾಗಿ ಭೀಮಾ ತೀರದಲ್ಲಿ ಹಬ್ಬದ ಸಂಭ್ರಮ ಮರೆಯಾಗಿದೆ. ಬಟ್ಟೆ ತೊಳೆಯಲು ಹೋದ ಇಬ್ಬರು ಬಾಲಕಿಯರು ಭೀಮಾನದಿ ನೀರು ಪಾಲಾಗಿರುವ ದಾರುಣ ಘಟನೆ ಬನ್ನಟ್ಟಿಯಲ್ಲಿ ಸಂಭವಿಸಿದೆ. ಇನ್ನು ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವಿದ್ಯುತ್‌ ತಂತಿ ಸರಿಪಡಿಸಲು ಹೋದ ಡಿ ಗ್ರೂಪ್‌ ಸಿಬ್ಬಂದಿ ಕರಜಗಿ ಆಸ್ಪತ್ರೆಯಲ್ಲಿ ದಾರುಣ ಸಾವನ್ನಪ್ಪಿದ್ದಾನೆ.

ಬಾಲಕಿಯರಿಬ್ಬರು ನದಿ ನೀರುಪಾಲು:

Tap to resize

Latest Videos

undefined

ಬಟ್ಟೆ ಒಗೆಯಲು ನದಿಗೆ ತೆರಳಿದ್ದ ಬಾಲಕಿಯರಿಬ್ಬರು ನೀರುಪಾಲಾಗಿರುವ ಘಟನೆ ಅಫಜಲಪೂರ ತಾಲೂಕಿನ ಬನ್ನಹಟ್ಟಿ ಗ್ರಾಮದ ಭೀಮಾ ನದಿಯಲ್ಲಿ ನಡೆದಿಗಿದೆ. ಬನ್ನಹಟ್ಟಿ ಗ್ರಾಮದ ಭೂಮಿಕಾ (8) ಮತ್ತು ಶ್ರಾವಣಿ (11) ನೀರುಪಾಲಾಗಿರುವ ಬಾಲಕಿಯರು.

ಪ್ರಶ್ನೆ ಕೇಳಿದರೆ ‘ಓ ಮೈ ಗಾಡ್’ ಎಂದು ಹೆದರುವುದಕ್ಕೆ ನಾನು ಮೋದಿಯಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಬಟ್ಟೆ ಒಗೆಯಲು ತೆರಳಿದ್ದ ಬಾಲಕಿಯರಿಬ್ಬರು ನದಿಯಲ್ಲಿ ಈಜಾಡಲು ಮುಂದಾಗಿದ್ದರು. ಈ ವೇಳೆ ಭೂಮಿಕಾ ಆಕಸ್ಮಿಕವಾಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಅವಳನ್ನು ಶ್ರಾವಣಿ ರಕ್ಷಿಸಲು ಮುಂದಾಗಿದ್ದಾಳೆ ಎನ್ನಲಾಗಿದೆ. ಆದರೆ ನೀರಿನ ಸೆಳೆತಕ್ಕೆ ಸಿಲುಕಿದ ಭೂಮಿಕಾ ಮತ್ತು ಶ್ರಾವಣಿ ಇಬ್ಬರು ನೀರುಪಾಲಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿದ್ದು, ಶ್ರಾವಣಿಯ ಮೃತದೇಹವನ್ನು ನದಿಯಿಂದ ಮೇಲೆತ್ತಿದ್ದಾರೆ. ಭೂಮಿಕಾಳಿಗಾಗಿ ಶೋಧ ಮುಂದುವರಿದಿದೆ. ಈ ಕುರಿತು ಅಫಜಲಪೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತಂಡ, ಅಗ್ನಿಶಾಮಕ ತಂಡ, ಎಸ್.ಡಿ.ಆರ್.ಎಫ್ ತಂಡದವರಿಂದ ಭೂಮಿಕಾಳ ಮೃತದೇಹ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಸಿದ್ದರಾಮಯ್ಯ ತಪ್ಪು ಮಾಡಿದ್ದಕ್ಕೆ ಮುಖ ಎತ್ಕೊಂಡು ಓಡಾಡೋಕ್ಕೆ ಆಗ್ತಿಲ್ಲ: ರವಿಕುಮಾರ್ ವಾಗ್ದಾಳಿ

ಕರಜಗಿಯಲ್ಲಿ ವಿದ್ಯುತ್‌ ತಂತಿ ತಗುಲಿ ನೌಕರ ಸಾವು

ಅಫಜಲ್ಪುರ ತಾಲೂಕಿನ ಕರಜಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಗ್ರೂಪ್ ಡಿ ನೌಕರ ಶಿವಪುತ್ರ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆಗೆ ಅದೇನು ಕಾರಣ? ಯಾಕೆ ಶಿವಪುತ್ರನಿಗೆ ಕರೆಂಟ್‌ ಇರೋ ತಂತಿ ತಗುಲಿತು? ಇವೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗಿಲ್ಲ. ಸ್ಥಳದಲ್ಲೆ ಈತ ಸಾವನ್ನಪ್ಪಿದ್ದಾನೆ.

ಕರ್ತವ್ಯದ ವೇಳೆಯಲ್ಲಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿರೋದರಿಂದಾಗಿ ಕರಜಗಿ ಊರಲ್ಲಿ ಸಾರ್ವಜನಿಕರು ಈ ಘಟನೆ ಖಂಡಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಗ್ರೂಪ್ ಡಿ ನೌಕರ ಶಿವಪುತ್ರ ಕೆಲಸದಲ್ಲಿದ್ದಾಗಲೇ ವಿದ್ಯುತ್‌ ಪ್ರವಹಿಸುತ್ತಿದ್ದ ತಂತಿ ತಗುಲಿ ಸಾವಾಗಿದೆ. ಅಫಜಲ್ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿದೆ.

click me!