Chikkamagaluru: ಮುತ್ತಾವರದ ತಾವರೆಕೆರೆಯಲ್ಲಿ ಅರಳಿದ ಸಾವಿರಾರು ತಾವರೆ ಹೂಗಳು: ಸೆಲ್ಪಿಗೆ ಮುಗಿಬಿದ್ದ ಯುವಜನತೆ

By Govindaraj S  |  First Published Jul 4, 2024, 3:49 PM IST

ಚಿಕ್ಕಮಗಳೂರಿನ ಮುತ್ತಾವರ ಕೆರೆಯಲ್ಲಿ ಈಗ ಕೆರೆಯ ಪ್ರಮುಖ ಆಕರ್ಷಣೆ ಇಲ್ಲಿ ಅರಳಿರುವ ತಾವರೆ ಹೂಗಳು. ಕೆರೆಯ ಒಂದು ಮೂಲೆಯಲ್ಲಿ ಅದೂ ರಸ್ತೆಗೆ ಹೊಂದಿಕೊಂಡಂತೆ ನೂರಾರು ತಾವರೆ ಹೂಗಳು ಅರಳಿ ನಿಂತಿವೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.04): ಮಲೆನಾಡಿನಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಈಗಾಗಲೇ ಕೆರೆಕಟ್ಟೆಗಳು ಭರ್ತಿ ಆಗುವ ಹಂತಕ್ಕೆ ಬಂದಿದೆ.ಮಳೆಯಿಂದ ಭರ್ತಿ ಆಗುವ ಹಂತಕ್ಕೆ ಬಂದಿರುವ ಚಿಕ್ಕಮಗಳೂರು ನಗರದ  ಅಂಬರ್ ವ್ಯಾಲಿಯ ತಾವರೆ ಕೆರೆಯಲ್ಲಿ ಇದೀಗ ತಾವರೆ ಹೂಗಳು ಅರಳಿ ನಿಂತಿದ್ದು ತನ್ನ ಅಂದ ಮತ್ತು ಸೊಬಗು ಸೌಂದರ್ಯದಿಂದಾ ಪ್ರತಿನಿತ್ಯ ನೂರಾರು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. 

Tap to resize

Latest Videos

undefined

ಸೆಲ್ಪಿಗೆ ಮುಗಿಬಿದ್ದಿರುವ ಯುವಜನತೆ: ಚಿಕ್ಕಮಗಳೂರಿನ ಮುತ್ತಾವರ ಕೆರೆಯಲ್ಲಿ ಈಗ ಕೆರೆಯ ಪ್ರಮುಖ ಆಕರ್ಷಣೆ ಇಲ್ಲಿ ಅರಳಿರುವ ತಾವರೆ ಹೂಗಳು. ಕೆರೆಯ ಒಂದು ಮೂಲೆಯಲ್ಲಿ ಅದೂ ರಸ್ತೆಗೆ ಹೊಂದಿಕೊಂಡಂತೆ ನೂರಾರು ತಾವರೆ ಹೂಗಳು ಅರಳಿ ನಿಂತಿವೆ. ಹೂವಲ್ಲದೆ ಮೊಗ್ಗುಗಳೂ ಗಮನ ಸೆಳೆಯುತ್ತವೆ. ಬಣ್ಣದ ಹೂ, ಮೊಗ್ಗು, ಎಲೆಗಳು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಒತ್ತೊತ್ತಾಗಿ ನಿಂತ ಗಿಡ - ಹೂಗಳು ಈ ಮಾರ್ಗದಲ್ಲಿ ಹೋಗುವ ಜನ -ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.ರಾಷ್ಟ್ರೀಯ ಹೂ ಎನ್ನುವ ಮನ್ನಣೆ ಪಡೆದಿರುವ ತಾವರೆಯ ಗಿಡ, ಗೆಡ್ಡೆ, ಎಲೆ, ಹೂ ಹಲವು ರೋಗಗಳಿಗೆ ಔಷಧೀ. ನೆಲುಂಬೊ ನ್ಯೂಸಿಫೆರಾ ಪ್ರಕಾರದ, ಸಿಂಘಿಂಷಿ ಕುಟುಂಬಕ್ಕೆ ಸೇರಿದ ಜಲಸಸ್ಯ ಇದು. ಸಂಜೆ ಆಗುತ್ತಿದ್ದಂತೆ ಮದುಡಿ ಬೆಳಿಗ್ಗೆ ಮತ್ತೆ ಅರಳುತ್ತದೆ.ಅರಳಿ ನಿಂತಿರುವ ಕಮಲ ಹೂಗಳ ಬಳಿ ಸೆಲ್ಪಿ ಕ್ರೇಜ್ ಹೆಚ್ಚಾಗಿದ್ದು ಪೋಟೋ ತೆಗೆದುಕೊಳ್ಳಲು ಯುವಜನತೆ ಮುಗಿಬಿದ್ದಿದ್ದಾರೆ.

ಮುತ್ತಾವರದ ಮೋಹಕ ತಾವರೆಕೆರೆ: ಊರ ಮುಂದಿನ ಕೆರೆಗಳಲ್ಲದೆ ಕೃಷಿ ಚಟುವಟಿಕೆ ಉದ್ದೇಶಗಳಿಗೆ ಭಾರಿ ಕೆರೆಗಳನ್ನು ಕಟ್ಟಿರುವುದೂ ಇದೆ. ಪ್ರತಿಯೊಂದು ಜಿಲ್ಲೆಗಳಲ್ಲಿ ಒಂದಿಲ್ಲೊಂದು ಭಾರಿ ಕೆರೆಗಳು ಇವೆ. ಕೆಲ ಕೆರೆಗಳು ಪ್ರವಾಸಿ ಸ್ಥಳಗಳಾಗಿಯೂ ಆಕರ್ಷಣೆ ಹೊಂದಿವೆ.ಈ ಹಿಂದೆ ಕೆರೆಗಳ ನಿರ್ವಹಣೆಯನ್ನು ಸ್ಥಳೀಯ ಜನರೆ ನೋಡಿಕೊಳ್ಳುತ್ತಿದ್ದರು.ಇಂದು ಜನರ ಮನೋಭಾವದಲ್ಲಿ ಬದಲಾವಣೆ ಆಗಿದೆ. ಎಲ್ಲದನ್ನೂ ಸರ್ಕಾರ ಮಡಲಿ ಎನ್ನುವ ಧೋರಣೆಯಿಂದ ಸಾಕಷ್ಟು ಕೆರೆಗಳು ಶಿಥಿಲವಾಗಿವೆ. ತನ್ನ ಅಸ್ತಿತ್ವ ಕಳೆದುಕೊಂಡಿವೆ.ಒಂದೆಡೆ ಹೂಳು ತುಂಬಿ ನಾಶವಾಗಿದ್ದರೆ, ನಿರಂತರ ಒತ್ತುವರಿಯಿಂದ ಕೆರೆ ಅಂಗಳ ಬರಿದಾಗಿವೆ. ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಸಮೀಪ ಇರುವ ವಸ್ತಾರೆ ಒಂದು ಕಾಲದಲ್ಲಿ ರಾಜರ ಆಳ್ವಿಕೆಗೆ ಒಳಪಟ್ಟ ಪ್ರದೇಶ. 

ದರ್ಶನ್‌ಗೆ ನಾನು ಮದರ್ ಇಂಡಿಯಾ, ಕೊಲೆ ಮಾಡೋ ವ್ಯಕ್ತಿ ಅವನಲ್ಲ: ಮೌನ ಮುರಿದ ಸುಮಲತಾ!

ತಾಲೂಕು ಕೇಂದ್ರವೂ ಆಗಿತ್ತು. ಸುತ್ತಮುತ್ತಲ ಪ್ರದೇಶ ಭತ್ತದ ಕಣಜ ಎಂದೂ ಖ್ಯಾತಿ ಪಡೆದಿತ್ತು. ಚಿಕ್ಕಮಗಳೂರು- ಮೂಡಿಗೆರೆಗೆ ಸಾಗುವ ಮಾರ್ಗದಲ್ಲಿ ಸಿಗುವ ಈ ಕೆರೆ ಇಂದು ಆಕರ್ಷಣೆಯ ಕೇಂದ್ರವಾಗಿದೆ.ಈ ಕೆರೆಯಲ್ಲಿ ವರ್ಷಪೂರ್ತಿ ನೀರು ಇರುತ್ತದೆ. ಮೇಲ್ಭಾಗದಿಂದ ಹರಿದು ಪೋಲಾಗುತ್ತಿದ್ದ ನೀರನ್ನು ತಡೆದು ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ.ಒಟ್ಟಾರೆಯಾಗಿ ಕಾಫೀನಾಡಿನ ಮುತ್ತಾವರ ಕೆರೆಯಲ್ಲಿ ಸಾವಿರಾರೂ ತಾವರೆ ಹೂ ಗಳು ಅರಳಿ ನಿಂತಿದ್ದು ತನ್ನ ಸೌಂದರ್ಯ ಮತ್ತು ಸೊಬಗಿನಿಂದಾ ರಸ್ತೆಯಲ್ಲಿ ಸಾಗುವ ಜನರಿಗೆ ಸಂತೋಷ ನೀಡುತ್ತಿರುವುದಲ್ಲದೇ ಈ ಕೆರೆಯೇ ಈ ಹೂವಿನ ಸೌಂದರ್ಯದಿಂದಾ ತುಂಬಿ ತುಳುಕುತ್ತಿದೆ.

click me!