ಕೇರಳದಿಂದ ಬಂದವರಿಂದ ಮಂಗಳೂರಿನಲ್ಲಿ ಕೃತ್ಯ

By Kannadaprabha News  |  First Published Dec 20, 2019, 7:23 AM IST

ಕೇರಳದಿಂದ ಬಂದ ಸಾವಿರಾರು ಜನರಿಂದ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿದೆ ಎನ್ನಲಾಗಿದೆ.  ಈಗಾಗಲೇ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಇಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ.


ಮಂಗಳೂರು [ಡಿ.20]:  ಮಂಗಳೂರಿನಲ್ಲಿ ಗುರುವಾರ ನಡೆದ ಅಹಿತಕರ ಘಟನೆಗೆ ಕೇರಳದ ಮತೀಯ ಸಂಘಟನೆಗಳು ಸಾಥ್‌ ನೀಡಿವೆಯೇ? ಇಂಥದ್ದೊಂದು ಮಾಹಿತಿ ಪೊಲೀಸ್‌ ಇಲಾಖೆಗೆ ಬಂದಿದ್ದು, ಈ ಬಗ್ಗೆ ಅಮೂಲಾಗ್ರ ತನಿಖೆಗೆ ಇಲಾಖೆ ಮುಂದಾಗಿದೆ.

ಪೌರತ್ವ ವಿಚಾರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಮಾಹಿತಿ ಮೊದಲೇ ಪೊಲೀಸ್‌ ಇಲಾಖೆಗೆ ತಿಳಿದಿತ್ತು. ಅದರಲ್ಲೂ ಕೇರಳ ಮೂಲದ ಮತೀಯ ಸಂಘಟನೆಗಳು ಪ್ರತಿಭಟನೆಗೆ ಸಾಥ್‌ ನೀಡಲು ಆಗಮಿಸುವ ವಿಚಾರ ಪೊಲೀಸ್‌ ಇಲಾಖೆಗೆ ಮೊದಲೇ ಗೊತ್ತಿತ್ತು. ಇದೇ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಲ್ಲದೆ ಮುಸ್ಲಿಂ ಮುಖಂಡರ ಜೊತೆಗೆ ನಿರಂತರ ಸಂಪರ್ಕ ಇರಿಸಿಕೊಂಡ ಪೊಲೀಸ್‌ ಅಧಿಕಾರಿಗಳು, ಯಾವುದೇ ಪ್ರತಿಭಟನೆ, ಬಂದ್‌ ನಡೆಸದಂತೆ ಮನವರಿಕೆ ಮಾಡಿದ್ದರು.

Tap to resize

Latest Videos

undefined

ಸೆಕ್ಷನ್ 144 ಮತ್ತು ಕರ್ಫ್ಯೂ ನಡುವಿನ ವ್ಯತ್ಯಾಸಗಳೇನು? ಇಂದಿಗೆ ಬಹಳ ಮುಖ್ಯ...

ಇಷ್ಟೆಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಗುರುವಾರ ಮಧ್ಯಾಹ್ನ ವೇಳೆಗೆ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆಗೆ ವಿಫಲ ಯತ್ನ ನಡೆಸಲಾಗಿದೆ. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದ್ದರು. ಆಗ ನಡೆದ ಕಲ್ಲು ತೂರಾಟ, ದೊಂಬಿ ಘಟನೆಗಳ ಹಿಂದೆ ಕೇರಳದ ಮತೀಯ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದಿಂದ ಬಂದು ಹಿಂಸೆ-ಬೊಮ್ಮಾಯಿ

ಮಂಗಳೂರಿನಲ್ಲಿ ಕೇರಳದಿಂದ ಬಂದಿರುವ ಜನರಿಂದ ಈ ಪ್ರತಿಭಟನೆ ನಡೆದಿದ್ದು ಎರಡು ಮೂರು ದಿನಗಳಿಂದ ಮಂಗಳೂರಿನಲ್ಲಿ ಜಮಾವಣೆ ಆಗಿದ್ದರು. ಮಂಗಳೂರು ಉತ್ತರದಲ್ಲಿ ಪ್ರತಿಭಟನಾಕಾರರು ಪೊಲೀಸ್‌ ಠಾಣೆ ಸುಡುವ ಪ್ರಯತ್ನ ನಡೆಸಿದಾಗ ಅವರ ಮೇಲೆ ಬಲ ಪ್ರಯೋಗ ಮಾಡಿದ್ದು ಮಂಗಳೂರಿನ ಐದು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಫä್ರ್ಯ ಹಾಕಲಾಗಿದೆ. ಹಿಂಸಾಚಾರ ತಡೆಯುವುದು ನಮ್ಮ ಮೊದಲ ಪ್ರಾಶಸ್ತ್ಯ. ಆ ಬಳಿಕ ಹಿಂಸೆಯ ಹಿಂದಿರುವ ವ್ಯಕ್ತಿಗಳ ಮೇಲೆ ಕಾರ್ಯಾಚರಣೆ ಮಾಡಲಾಗುವುದು.

click me!