ಬೆಂಗಳೂರು(ಡಿ. 19)  ದೇಶದ ಹಲವು ಕಡೆ ಪೌರತ್ವ ಮಸೂದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಮುಂಜಾಗೃತಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಕರ್ಫ್ಯೂ ಜಾರಿ ಮಾಡಲಾಗಿದೆ ಎಂಬ ಸುದ್ದಿ ಕೇಳುತ್ತವೆ. ಹಲವರಿಗೆ ಇವೆರಡರ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಹಾಗಾದರೆ ಸೆಕ್ಷನ್ 144 ಮತ್ತು  ಕರ್ಫ್ಯೂ ನಡುವಿನ ವ್ಯತ್ಯಾಸ ಏನು?

ಸೆಕ್ಷನ್144
ಕೋಮುಗಲಭೆ, ಹಿಂಸಾಚಾರದಂತಹ ಸಂದರ್ಭದಲ್ಲಿ ಸೆಕ್ಷನ್ 144 ಅಸ್ತ್ರ ಬಳಸಿಕೊಳ್ಳಲಾಗುತ್ತದೆ. ಜಿಲ್ಲಾ ಮಾಜಿಸ್ಟ್ರೇಟ್ ಸೆಕ್ಷನ್ 144ರ ಜಾರಿಯನ್ನು ತಿಳಿಸುತ್ತದೆ. 5 ಅಥವಾ ಅದಕ್ಕಿಂತ ಹೆಚ್ಚು ಜನ ಒಂದು ಕಡೆ ಸೇರುವುದನ್ನು ಈ ಸೆಕ್ಷನ್ ನಿಷೇಧಿಸುತ್ತದೆ.

ಅಲ್ಲದೇ ಯಾವುದೇ ರೀತಿಯ ಆಯುಧಗಳನ್ನು ಕೊಂಡೊಯ್ಯುವುದಕ್ಕೂ ನಿರ್ಭಂಧ ಹೇರುತ್ತದೆ. ಈ ನಿಯಮಗಳನ್ನು ಉಲ್ಲಂಘಿಸುವವರನ್ನು ಯಾವುದೇ ಸೂಚನೆ ನೀಡದೇ ಬಂಧಿಸುವ ಅಧಿಕಾರ ತನ್ನಿಂದ ತಾನೇ ಪೊಲೀಸರಿಗೆ ಲಭ್ಯವಾಗಿರುತ್ತದೆ.

ಈ ನಿಯಮದ ಅನ್ವಯ ಬಂಧನಕ್ಕೆ ಒಳಗಾದವರಿಗೆ ಗರಿಷ್ಠ ಮೂರು ವರ್ಷ ಕಾಲ ಜೈಲು ಶಿಕ್ಷೆ ವಿಧಿಸಲು ಸಹ ಅವಕಾಶ ಇರುತ್ತದೆ. ಇಂಟರ್ ನೆಟ್ ಬಂದ್ ಮಾಡುವ ಅಧಿಕಾರವನ್ನು ಇದು ಆಡಳಿತಕ್ಕೆ ನೀಡುತ್ತದೆ,

ಕರ್ಫ್ಯೂ ಎಂದರೇನು?
ಸೆಕ್ಷನ್ 144ಗಿಂತ  ಇದು ಭಿನ್ನ. ಜನರು ನಿರ್ದಿಷ್ಟ ಸಮಯದಲ್ಲಿ ಮನಯಲ್ಲೇ ಇರಬೇಕು. ಪೊಲೀಸರು ಅವಕಾಶ ಕೊಟ್ಟ ಸಮಯದಲ್ಲಿ ಮಾತ್ರ ಹೊರಗೆ ತಿರುಗಾಡಬಹುದು. ಹಿಂಸಾಚಾರ ವಿಕೋಪಕ್ಕೆ ಹೋದಾಗ ಪರಿಸ್ಥಿತಿ ತಹಬದಿಗೆ ತರಲು ಇದು ನೆರವಾಗುತ್ತದೆ.  ಒಂದು ನಿರ್ದಿಷ್ಟ ಪ್ರದೇಶಕ್ಕೆ  ಕರ್ಫ್ಯೂ ಹಾಕಬಹುದು.

ಕರ್ಫ್ಯೂವನ್ನು ಸಹ ಜಿಲ್ಲಾ ಮಾಜಿಸ್ಟ್ರೇಟ್ ಜಾರಿ ಮಾಡುತ್ತದೆ.  ಕರ್ಫ್ಯೂ ಜಾರಿಯಾದರೆ ಟ್ರಾಫಿಕ್ ಮೇಲೂ ಸಂಪೂರ್ಣ ನಿಯಂತ್ರಣ ಹೇರಲಾಗುವುದು. ಅಗತ್ಯ ಬಿದ್ದರೆ ಅಧಿಕಾರಿಗಳು  ಕರ್ಫ್ಯೂ ಅವಧಿ ವಿಸ್ತರಿಸಯುವ ಅಧಿಕಾರ ಹೊಂದಿರುತ್ತಾರೆ.

ಯಾವ ಕಾರಣಕ್ಕೆ ಗುಂಡು ಹಾರಿಸಬೇಕಾಯಿತು? ಹರ್ಷಾ ವಿವರಣೆ

ಕರ್ಫ್ಯೂ ಮೇಜರ್ ಪಾಯಿಂಟ್ಸ್

*  ಕರ್ಫ್ಯೂ ವೇಳೆ ಅನುಮತಿ ಇಲ್ಲದೆ ಯಾವ ವ್ಯಕ್ತಿ ಅಥವಾ ಸಂಘಟನೆ ಉಪವಾಸ ಸತ್ಯಾಗ್ರಹ ಮಾಡುವಂತೆ ಇಲ್ಲ

* ಯಾವುದೇ ವ್ಯಕ್ತಿ ಆಯುಧ ಅಥವಾ ಆ ರೀತಿ ಬಳಕೆ ಮಾಡುವ ವಸ್ತುಗಳೊಂದಿಗೆ ಸಂಚಾರ ಮಾಡುವಂತೆ ಇಲ್ಲ

* ಪರವಾನಗಿ ಇರುವ ಆಯುಧಗಳನ್ನು ಸಹ ಕೊಂಡೊಯ್ಯುವಂತೆ ಇಲ್ಲ.

* ಪಟಾಕಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.

* ಸಮುದಾಯಕ್ಕೆ ಹಾನಿ ತರುವಂತಹ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇಲ್ಲ