ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನೆಲಕಚ್ಚಿದ ಬಾಳೆ: ಮೂರಾಬಟ್ಟೆಯಾದ ರೈತನ ಬದುಕು

By Govindaraj S  |  First Published Apr 22, 2022, 7:35 PM IST

ತಡರಾತ್ರಿ ಕೇವಲ ಅರ್ಧ ಗಂಟೆ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಬಾಳೆ ಬೆಳೆದಿದ್ದ ರೈತನ‌ ಪಾಡು ಸಂಕಷ್ಟಕ್ಕೆ ಸಿಲುಕಿದೆ. ಲಕ್ಷಾಂತರ ಲಕ್ಷ ಖರ್ಚು ಮಾಡಿ ಬೆಳೆದಿದ್ದ ಬಾಳೆಯ ಫಲ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಏ.22): ತಡರಾತ್ರಿ ಕೇವಲ ಅರ್ಧ ಗಂಟೆ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ (Heavy Rain) ಬಾಳೆ ಬೆಳೆದಿದ್ದ ರೈತನ‌ (Farmers) ಪಾಡು ಸಂಕಷ್ಟಕ್ಕೆ ಸಿಲುಕಿದೆ. ಲಕ್ಷಾಂತರ ಲಕ್ಷ ಖರ್ಚು ಮಾಡಿ ಬೆಳೆದಿದ್ದ ಬಾಳೆಯ ಫಲ (Banana Crop) ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ. ಮಳೆಯ ಆರ್ಭಟಕ್ಕೆ ನಲುಗಿ ನೆಲಕಚ್ಚಿ ಬಿದ್ದಿರೋ ಬಾಳೆ. ಸುಮಾರು 12 ಎಕರೆಯಲ್ಲಿ‌ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇನ್ನೇನು ಕೆಲವೇ ದಿನಗಳಲ್ಲಿ ಉತ್ತಮ ಫಸಲಿನೊಂದಿಗೆ ಅಲ್ಪ ಸ್ವಲ್ಪ ಲಾಭ ಕಾಣುವ ನಿರೀಕ್ಷೆಯಲ್ಲಿದ್ದ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮದ ಯಶೋಧರ ರೈತ ಇಂದು ಸಂಕಷ್ಟಕ್ಕೆ ಸಿಲುಕಿದ್ದಾನೆ. 

Latest Videos

undefined

ತಡರಾತ್ರಿ ಕೇವಲ ಅರ್ಧ ಗಂಟೆ ಸುರಿದ ಬಿರುಗಳಿ ಸಹಿತ ಧಾರಾಕಾರ ಮಳೆ ರೈತನನ್ನು ಇನ್ನಷ್ಟು ಕಷ್ಟಕ್ಕೆ ದೂಡಿದಂತಿದೆ. ಸುಮಾರು 30 ಲಕ್ಷ ನಷ್ಟದಿಂದ ನಲುಗಿರೋ ರೈತ ತುಂಬಾ ಕಷ್ಟವಾಗಿದೆ ನಮ್ಮ ಪಾಡು, ದಯಮಾಡಿ ಸರ್ಕಾರದ ವತಿಯಿಂದ ಪರಿಹಾರ ನೀಡಿದರೆ ಅಲ್ಪ ಸ್ವಲ್ಪ ಚೇತರಿಕೆ ಕಾಣಬಹುದು ಎಂದು ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ. ಇನ್ನೂ ಈ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದಂತೆ ತೋಟಗಾರಿಕೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು‌. ರೈತ ಬೆಳೆದಿದ್ದ 12 ಎಕರೆ ಬಾಳೆ ತೋಟದಲ್ಲಿ ಸುಮಾರು 4 ಎಕರೆ ಸಂಪೂರ್ಣ ನಾಶವಾಗಿದೆ. 

ಕಂಚೀ ವರದರಾಜಸ್ವಾಮಿಯನ್ನು ನಾಣ್ಯಗಳಲ್ಲೇ ಮುಳುಗಿಸಿದ ಭಕ್ತವೃಂದ

ಇದನ್ನೆಲ್ಲ ಪರಿಗಣಿಸಿ ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅದರನ್ವಯ ರೈತನಿಗೆ ಪರಿಹಾರ ದೊರಕಿಸಿ ಕೊಡುವಲ್ಲಿ ಪ್ರಯತ್ನ ಪಡ್ತೀವಿ ಅಂತಿದ್ದಾರೆ ಅಧಿಕಾರಿ. ಒಟ್ಟಾರೆಯಾಗಿ ಬಿರುಗಾಳಿ ಸಹಿತ ಮಳೆರಾಯನ‌ ಆರ್ಭಟದಿಂದ ಲಾಭದ ನಿರೀಕ್ಷೆಯಲ್ಲಿ ಬಾಳೆ ಬೆಳೆ ಬೆಳೆದಿದ್ದ ರೈತ ಕಂಗಲಾಗಿದ್ದಾನೆ. ಅಧಿಕಾರಿಗಳು ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅತಿ ಬೇಗನೇ ರೈತನಿಗೆ ಸೂಕ್ತ ಪರಿಹಾರ ಒದಗಿಸಲು ಎಂಬುದು ನಮ್ಮ ಬಯಕೆ.

ಅಕಾಲಿಕ ಮಳೆಗೆ ನೆಲಕಚ್ಚಿದ ಮೆಕ್ಕೆಜೋಳ: ಕೋಟೆನಾಡು ಚಿತ್ರದುರ್ಗ ಅಂದ್ರೆ ಸಾಕು ಬರದನಾಡು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ರಾತ್ರಿ ಸುರಿದ ಅಕಾಲಿಕ ಮಳೆ ಕೋಟೆನಾಡಿನ ರೈತರ ಬದುಕನ್ನೇ ಅತಂತ್ರಗೊಳಿಸಿದೆ. ಈ ಕುರಿತು ಒಂದು ವರದಿ ಇಲ್ಲಿದೆ. ನೆಲಕ್ಕೆ ಬಿದ್ದಿರೋ ಮೆಕ್ಕೆಜೋಳ. ಕೈಗೆ ಬಂದ ಬೆಳೆಯನ್ನು ಕಳೆದುಕೊಂಡು ಕಂಗಾಲಾದ ರೈತ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದ ಮಹಂತೇಶ್ ಎಂಬ ರೈತನ ಜಮೀನು. ಹೌದು! ಹಲವು ವರ್ಷಗಳಿಂದ ಮಳೆಯಿಲ್ಲದೇ, ಬರಗಾಲದಿಂದ ತತ್ತರಿಸಿದ ಅನ್ನದಾತರಿಗೆ ನಿನ್ನೆ ಏಕಾಏಕಿ ಸುರಿದ ಮಳೆ ಮಾರಕವಾಗಿ ಪರಿಣಮಿಸಿದೆ. 

ಅದರಲ್ಲೂ ಈ ಮಹಂತೇಶ್ ಎಂಬ ರೈತ ತಮ್ಮ ಐದು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದೂ, ಇನ್ನೂ ಕೆಲವೇ ದಿನಗಳಲ್ಲಿ  ಕಟಾವಿಗೆ ಬರುವ ಸಾಧ್ಯತೆ ಇತ್ತು.  ಆದರೆ  ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಜಮೀನಲ್ಲಿದ್ದ ಸಂಪೂರ್ಣ ಬೆಳೆ ನೆಲಕಚ್ಚಿದೆ. ಹೀಗಾಗಿ  ರೈತನ  ಕೈಗೆ ಸಿಕ್ಕ ತುತ್ತು ಬಾಯಿಗೆ ಸಿಗದಂತಾಗಿ ಸಾಲ ಸೂಲ ಮಾಡಿ ಮೆಕ್ಕೆಜೋಳ ಬೆಳೆದಿದ್ದ ರೈತ ಬಾರಿ ಆತಂಕಕ್ಕೆ ಸಿಲುಕಿದ್ದಾರೆ. ಸಾಲಗಾರರ ಕಾಟ ತಾಳಲಾರದೆ ಕಂಗಾಲಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಹಾಗು ಚಿತ್ರದುರ್ಗ ತಾಲ್ಲೂಕಿನಾದ್ಯಂತ ಸುರಿದಿರೋ  ಮಳೆಯಿಂದಾಗಿ ಹಲವರು ರೈತರು ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ನಾಶವಾಗಿದೆ. 

ಬಂಜರು ಭೂಮಿಯಲ್ಲಿ ಹಿಮಾಚಲ ಸೇಬು ಬೆಳೆದು ಅಚ್ಚರಿ ಮೂಡಿಸಿದ ಚಿತ್ರದುರ್ಗದ ರೈತ

ಹೀಗಾಗಿ ಸಾಲದ ಹಣ ತೀರಿಸಲು ರೈತರು ಯೋಚಿಸುವಂತಾಗಿ ದಿಕ್ಕು ತೋಚದಂತಾಗಿದ್ದಾರೆ‌. ಹೀಗಾಗಿ ಸರ್ಕಾರದಿಂದ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ. ಒಟ್ಟಾರೆ ಅಕಾಲಿಕ ಮಳೆಗೆ ಕೋಟೆನಾಡಲ್ಲಿ  ಬೆಳೆದಿದ್ದ ಮೆಕ್ಕೆಜೋಳ ಹಾನಿಯಾಗಿದೆ‌. ಹೀಗಾಗಿ ಮೆಕ್ಕೆಜೋಳದಿಂದ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದ ರೈತ ಸಂಕಷ್ಟಕ್ಕೆ ಸಿಲುಕುವಂತಾಗಿದ್ದೂ, ರೈತರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಆದ್ದರಿಂದ ನೊಂದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಮೂಲಕ ನೊಂದ ರೈತರ  ಆತಂಕ ಶಮನಗೊಳಿಸಬೇಕಿದೆ.

click me!