ಆ ನಾಲ್ಕು ಸತ್ಯಗಳು ಮಂಜುನಾಥ್ ಗೆಲುವಿಗೆ ಸಹಕಾರಿ : ಸುರೇಶ್ ಕುಮಾರ್

By Kannadaprabha News  |  First Published Apr 19, 2024, 4:44 PM IST

ಬಿಜೆಪಿ - ಜೆಡಿಎಸ್ ಮತ ಗಳಿಕೆ ಪ್ರಮಾಣ, ಮೋದಿ ಬಗೆಗಿನ ಅಪಾರ ವಿಶ್ವಾಸ, ಮಂಜುನಾಥ್ ಜನಸೇವೆ ಬಗೆಗಿನ ಗೌರವ ಹಾಗೂ ಡಿಕೆ ಸಹೋದರರ ರಾಜಕೀಯ ಅಟ್ಟಹಾಸದ ವಿರುದ್ಧ ಜನರಿಗೆ ಇರುವ ಸಾತ್ವಿಕ ಆಕ್ರೋಶ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.


ರಾಮನಗರ: ಬಿಜೆಪಿ - ಜೆಡಿಎಸ್ ಮತ ಗಳಿಕೆ ಪ್ರಮಾಣ, ಮೋದಿ ಬಗೆಗಿನ ಅಪಾರ ವಿಶ್ವಾಸ, ಮಂಜುನಾಥ್ ಜನಸೇವೆ ಬಗೆಗಿನ ಗೌರವ ಹಾಗೂ ಡಿಕೆ ಸಹೋದರರ ರಾಜಕೀಯ ಅಟ್ಟಹಾಸದ ವಿರುದ್ಧ ಜನರಿಗೆ ಇರುವ ಸಾತ್ವಿಕ ಆಕ್ರೋಶ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ವಕೀಲರ ಸಂಘದಲ್ಲಿ ವಕೀಲರನ್ನು ಭೇಟಿಯಾಗಿ ಮತಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಾಲ್ಕು ಸತ್ಯಗಳ ಜೊತೆಗೆ ಕ್ಕೆ ಹೊಸಬರಾಗಿರುವುದು ಅವರ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಚಿನ್ನದಲ್ಲಿ 24 ಕ್ಯಾರೆಟ್ ಒಳ್ಳೆಯ ಚಿನ್ನ ಅನ್ನುತ್ತಾರೆ. ಅದೇ ರೀತಿ ವ್ಯಕ್ತಿಗಳಲ್ಲಿ 24 ಕ್ಯಾರೆಟ್ ವ್ಯಕ್ತಿತ್ವ ಉಳ್ಳವರು ಮಂಜುನಾಥ್ ಅವರದ್ದಾಗಿದೆ. ಅವರನ್ನು ಜನರು ರಾಜಕಾರಣಿಯಾಗಿ ನೋಡುತ್ತಿಲ್ಲ. ಸಮಾಜ ಸೇವಕ, ಸಮಾಜ ನಿರ್ಮಾಣ ಮಾಡುವ ವ್ಯಕ್ತಿ ಅನ್ನುವ ರೀತಿ ನೋಡುತ್ತಿದ್ದಾರೆ ಎಂದರು.

Latest Videos

undefined

ಬೇರೆಯವರು ತಮ್ಮ ಸಾಧನೆ ಹೇಳಿಕೊಳ್ಳಬೇಕು. ಆದರೆ, ಮಂಜುನಾಥ್ ಸಾಧನೆ, ಕೊಡುಗೆ ಎಲ್ಲರಿಗೂ ಗೊತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಅಳಿಯರಾಗಿದ್ದರು ಅದನ್ನು ಎಲ್ಲಿಯೂ ಹೇಳಿಕೊಳ್ಳದೆ ಜನಸೇವೆ ಮಾಡಿದವರು. ರಾಜಕಾರಣಕ್ಕೆ ಮಂಜುನಾಥ್ ಹೊಸಬರಾಗಿರಬಹುದು, ಆದರೆ, ಮಂಜುನಾಥ್ ಹೆಸರು ರಾಜಕಾರಣಕ್ಕೆ ಹೊಸದಲ್ಲ ಎಂದು ಹೇಳಿದರು.

ರಾಜಕಾರಣದ ಬಗ್ಗೆ ಜನರಲ್ಲಿ ಒಳ್ಳೆಯ ಭಾವನೆ ಬರಬೇಕಾದರೆ ಡಾ.ಸಿ.ಎನ್.ಮಂಜುನಾಥ್ ಅಂತಹವರು ರಾಜಕಾರಣದಲ್ಲಿ ಯಶಸ್ವಿಯಾಗಬೇಕು. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಉತ್ಸಾಹ ನೋಡಿದರೆ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತದಾರರು ದೇಶ ಅಪೇಕ್ಷೆ ಮಾಡುತ್ತಿರುವ ಸಂದೇಶವನ್ನು ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಶ್ರೀವತ್ಸಾ, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ತಿಮ್ಮೇಗೌಡ, ಖಜಾಂಚಿ ಮಂಜೇಶ್ ಗೌಡ,

ಹಿರಿಯ ವಕೀಲರಾದ ಎ.ಪಿ.ರಂಗನಾಥ್, ಸುಬ್ಬಶಾಸ್ತ್ರಿ, ಬಿಜೆಪಿ ನಗರ ಘಟಕ ಅಧ್ಯಕ್ಷ ದರ್ಶನ್ , ಮುಖಂಡರಾದ ಶಿವಾನಂದ, ಮಂಜು ಇತರರುರಿದ್ದರು.

click me!