ಆಭರಣ ದೋಚಿ ಮನೆಗೆ ಬೆಂಕಿ ಇಟ್ಟ ಕಳ್ಳರು| ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಘಟನೆ| ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ|
ಬೈಲಹೊಂಗಲ(ಮಾ.13): ಕಳ್ಳರು ಮನೆಗೆ ನುಗ್ಗಿ ಬಂಗಾರದ ಆಭರಣ, ಬೆಳ್ಳಿ ದೋಚಿಕೊಂಡು ಮರಳಿ ಹೋಗುವಾಗ ಬೆಂಕಿ ಇಟ್ಟು ಹೋದ ಪರಿಣಾಮ ಮನೆ ಸುಟ್ಟು ಸಂಪೂರ್ಣ ಕರಕಲಾದ ಘಟನೆ ಗುರುವಾರ ಬೆಳಗಿನ ಜಾವ ಪಟ್ಟಣದ ಪತ್ರಿಬಸವ ನಗರದಲ್ಲಿ ನಡೆದಿದೆ.
ಪತ್ರಿಬಸವ ನಗರ 3 ನೇ ಕ್ರಾಸ್ ನಿವಾಸಿ ವಿಜಯಕುಮಾರ ಬಸಪ್ಪ ಹಂಚಿನಮನಿ ಅವರು ತಮ್ಮ ಪಕ್ಕದ ಮನೆಯಲ್ಲಿ ಮಲಗಿದ್ದಾಗ ಕಳ್ಳರು ಮನೆ ಬೀಗ ಮುರಿದು ಟ್ರೇಜರಿಯಲ್ಲಿದ್ದ 55 ಗ್ರಾಂ ಬಂಗಾರ, 100 ಗ್ರಾಂ ಬೆಳ್ಳಿ ದೋಚಿ ಪರಾರಿಯಾಗಿದ್ದಲ್ಲದೇ ಮನೆಗೆ ಬೆಂಕಿ ಇಟ್ಟು ಹೋದಾಗ ಮನೆಯ ಚಾವಣಿ, ಗೃಹೋಪಯೋಗಿ ಸಾಮಾಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಂದಾಜು 6.40 ಲಕ್ಷ ಹಾನಿಯಾಗಿದೆ ಎಂದು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಡಾ.ಡಿ.ಎಚ್.ಹೂಗಾರ, ಸಿಪಿಐ ಮಂಜುನಾಥ ಕುಸುಗಲ್, ಎ.ಎಸ್.ಐ. ಎಸ್.ಬಿ.ಮಾವಿನಕಟ್ಟಿ, ಕಂದಾಯ ನಿರೀಕ್ಷಕ ಎಂ.ಡಿ.ಹಿರೇಮಠ, ಗ್ರಾಮಲೆಕ್ಕಾಧಿಕಾರಿ ಅಭಿಷೇಕ, ಮಲ್ಲಿಕಾರ್ಜುನ ಸನದಿ, ಶ್ವಾನದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಘಟನೆ ಹಿನ್ನೆಲೆ:
ಕಳ್ಳರು ಮನೆಗೆ ಬೆಂಕಿ ಇಟ್ಟು ಉರಿಯುತ್ತಿರುವಾಗ ಬೆಳಗಿನ ಜಾವ ವಾಕಿಂಗ್ ಹೋಗುವರು ಮನೆಯ ಮೇಲೆ ದಟ್ಟವಾದ ಹೊಗೆ ಆವರಿಸಿದ್ದನ್ನು ಕಂಡು ಅಕ್ಕಪಕ್ಕದ ಮನೆಯವರನ್ನು ಕೂಗಿ ಎಬ್ಬಿಸಿದಾಗ ಬೆಂಕಿಯನ್ನು ಕಂಡು ವಿಚಲಿತರಾಗಿದ್ದಾರೆ.
ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಲ್ಲದೇ ಹತ್ತಿರದ ಜಲಕುಂಭದ ನೀರನ್ನು ತೆಗೆದುಕೊಂಡು ಓಣಿಯ ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಷ್ಟರಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮನೆಗೆ ಸಂಪೂರ್ಣ ಆವರಿಸಿದ ಬೆಂಕಿಯನ್ನು ನಂದಿಸಿದರು. ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ.