ಮಹಿಳೆ ಒಬ್ಬಳೆ ಇದ್ದಾಳೆಂದು ರಾತ್ರಿ ಮನೆಗೆ ನುಗ್ಗಿ ಬಡಿಸ್ಕೊಂಡ

By Suvarna News  |  First Published Jan 25, 2020, 12:42 PM IST

ಮಹಿಳೆ ಒಬ್ಬಳೆ ಇದ್ದಾಳೆ ಎಂದು ಮನೆಗೆ ನುಗ್ಗಿದ. ಆದ್ರೆ ಊರವರಿಂದ ಬಡಿಸ್ಕೊಂಡು ಪೊಲೀಸರ ಅತಿಥಿಯಾದ. 


ಹಾಸನ [ಜ.25]: ಮಹಿಳೆಯೊಬ್ಬರೆ ಇರವುದನ್ನು ಖಚಿತ ಮಾಡಿಕೊಮಡು ಮನೆಗೆ ನುಗ್ಗಿದ ಕಳ್ಳನೊಬ್ಬನನ್ನು ಹಿಡಿದು ಸ್ಥಳೀಯರು ಥಳಿಸಿದ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ ಜಿಲ್ಲೆಯ ಅರಳಪೇಟೆಯಲ್ಲಿ ಶುಕ್ರವಾರ ರಾತ್ರಿ ಮಹಿಳೆ ಒಬ್ಬರೆ ಇದ್ದಾರೆ ಮನೆಗೆ ನುಗ್ಗಿದ ಕಳ್ಳ ಕಳವು ಮಾಡಲು ಯತ್ನಿಸಿದ್ದಾನೆ. ಈ ವೇಳೆ ಶಬ್ದವಾಗುತ್ತಿರುವುದನ್ನು ಅರಿತ ಮಹಿಳೆ ಆತನನ್ನು ನೋಡಿದ್ದಾಳೆ. 

Latest Videos

undefined

ಕಳ್ಳ ತಕ್ಷಣ ಮಹಿಳೆಯನ್ನು ಹಿಡಿದು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ತಕ್ಷಣ ಆಕೆ ಅಲ್ಲಿಂದ ತಪ್ಪಿಸಿಕೊಂಡು ಹೊರಕ್ಕೆ ಬಂದು ಕೂಗಿಕೊಂಡಿದ್ದಾಳೆ. 
ಪ್ರಿಯಕರನ ಜೊತೆಗೆ ಲಾಡ್ಜ್‌ನಲ್ಲಿ ಇರುವಾಗಲೇ ಪತ್ನಿ ಹಿಡಿದ ಪತಿ.

ಈ ವೇಳೆ ಸ್ಥಳಕ್ಕೆ ಬಂದ ಝನರು ಆತನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. 

ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

click me!