Mysur : ಸಾಧನೆ ಮಾಡಲು ಗುರಿ ಇರಬೇಕು

By Kannadaprabha News  |  First Published Nov 7, 2022, 4:53 AM IST

 ಕಡಿಮೆ ಸಮಯದಲ್ಲಿ ದೊಡ್ಡ ಸಾಧನೆ ಮಾಡಲು ಗುರಿ ಹಾಕಿಕೊಳ್ಳಬೇಕು. ಸಾಧನೆ ಮಾಡಿದವರನ್ನು ಸಮಾಜವು ಗುರುತಿಸುತ್ತದೆ ಎಂದು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಆಡಳಿತ ಮಂಡಳಿಯ ನಿರ್ದೇಶಕ ಹಾಗೂ ಕ್ಲಾಸಿಕ್‌ ಎಜುಕೇಷನ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಲಕ್ಷ್ಮಣ್‌ ಎಸ್‌. ಉಪ್ಪಾರ್‌ ತಿಳಿಸಿದರು.


 ಮೈಸೂರು (ನ. 07) : ಕಡಿಮೆ ಸಮಯದಲ್ಲಿ ದೊಡ್ಡ ಸಾಧನೆ ಮಾಡಲು ಗುರಿ ಹಾಕಿಕೊಳ್ಳಬೇಕು. ಸಾಧನೆ ಮಾಡಿದವರನ್ನು ಸಮಾಜವು ಗುರುತಿಸುತ್ತದೆ ಎಂದು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಆಡಳಿತ ಮಂಡಳಿಯ ನಿರ್ದೇಶಕ ಹಾಗೂ ಕ್ಲಾಸಿಕ್‌ ಎಜುಕೇಷನ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಲಕ್ಷ್ಮಣ್‌ ಎಸ್‌. ಉಪ್ಪಾರ್‌ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘ ಹಾಗೂ 27ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ನಿವೃತ್ತ, ಬಡ್ತಿ ಹೊಂದಿದ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Latest Videos

undefined

ಸಾಧನೆ ಮಾಡಿದವರನ್ನು ಸಮಾಜವು ಗುರುತಿಸುತ್ತದೆ. (Children)   ಪಾಲಕರೇ ಮಾದರಿ. ನಿಮ್ಮ ನಡವಳಿಕೆಯನ್ನು ಮಕ್ಕಳು ಅನುಸರಿಸುತ್ತಾರೆ. ನಮ್ಮ ಬಗ್ಗೆ ಕೀಲರಿಮೆ ಹೊಂದಬೇಡಿ.(God )  ಒಳ್ಳೆಯ ಬದುಕು ಕೊಟ್ಟಿದ್ದಾನೆ. ಕಡಿಮೆ ಸಮಯದಲ್ಲಿ ದೊಡ್ಡ ಸಾಧನೆ ಮಾಡಲು ಗುರಿ ಹಾಕಿಕೊಳ್ಳಬೇಕು. ಬಡತನ, ಅವಮಾನಕ್ಕೆ ಒಳಗಾದವರೇ ದೊಡ್ಡ ಸಾಧನೆ ಮಾಡಿದ್ದಾರೆ. ಬೇರೆಯವರನ್ನು ನೋಡಿ, ನಿಮ್ಮ ಸಂತೋಷ ಕಳೆದುಕೊಳ್ಳಬೇಡಿ ಎಂದು ಅವರು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ದೊಡ್ಡ ಕನಸು ಹೊಂದಬೇಕು. ಕನಸು ನನಸಾಗಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಯೋಚನೆಗಳು ಚೆನ್ನಾಗಿದ್ದರೆ, ಕನಸು ನನಸಾಗಿಸಲು ಸಾಧ್ಯ ಎಂದರು.

ಐಆರ್‌ಎಸ್‌ ಅಧಿಕಾರಿ ಲಕ್ಕಪ್ಪ ಹನುಮಣ್ಣವರ್‌ ಮಾತನಾಡಿ, ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು, ಯುಪಿಎಸ್ಸಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆದು ಉನ್ನತ ಹುದ್ದೆಗೆ ಆಯ್ಕೆಯಾಗಿದ್ದೇನೆ. ನಿರಂತರ ಪ್ರಯತ್ನದಿಂದ ಈ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.

ಹೆತ್ತವರು ಸಾಲ ಮಾಡಿ ಕೃಷಿ ಭೂಮಿ ಕಳೆದುಕೊಂಡಿದ್ದರಿಂದ ಬಾಲ್ಯದಲ್ಲಿ 5ನೇ ತರಗತಿಗೆ ಶಾಲೆ ಬಿಟ್ಟಿದ್ದೆನು. ನಂತರ, ಹೊಲದಲ್ಲಿ ಕೆಲಸ ಮಾಡಿ, ಸರ್ಕಾರದ ವಸತಿ ಶಾಲೆಯಲ್ಲಿದ್ದು ಶಿಕ್ಷಣ ಪಡೆದು, ಈ ಸಾಧನೆ ಮಾಡಿದ್ದೇನೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೊಡಗು, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜಸೇವಕರಿಗೆ ಭಗೀರಥ ಸಮಾಜ ಸೇವಾರತ್ನ, ಭಗೀರಥ ಪ್ರತಿಭಾರತ್ನ, ಭಗೀರಥ ವಿದ್ಯಾಶ್ರೀ, ಭಗೀರಥ ಸ್ಪರ್ಧಾ ವಿಜೇತ ರತ್ನ, ಭಗೀರಥ ಯೋಗಶ್ರೀ, ಭಗೀರಥ ಕಲಾರತ್ನ ಭಗೀರಥ ಕ್ರೀಡಾರತ್ನ, ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸ್ವಾಮೀಜಿ ಸನ್ಮಾನಿಸಿದರು.

ಹೊಸದುರ್ಗ ತಾಲೂಕಿನ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಳವಳ್ಳಿ ಅಯ್ಯನ ಸರಗೂರು ಮಠದ ಶ್ರೀ ಮಹದೇವ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜವರಶೆಟ್ಟರು, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್‌ ಉಪ್ಪಾರ್‌, ಉಪ ಮೇಯರ್‌ ಡಾ.ಜಿ. ರೂಪಾ, ಐಪಿಎಸ್‌ ಅಧಿಕಾರಿ ಅಶೋಕ ವೆಂಕಚ್‌, ಎಂಡಿಎ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್‌, ಉಪ್ಪಾರ ಸಂಘದ ಗೌರವಾಧ್ಯಕ್ಷ ತುರ್ಚಘಟ್ಟಎಸ್‌. ಬಸವರಾಜಪ್ಪ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಉಪ್ಪಾರರ ಸಂಘದ ಗೌರವಾಧ್ಯಕ್ಷ ಕುಡ್ಲೂರು ಹನು ಮಂತ ಶೆಟ್ಟಿ, ಕಾರ್ಯಾಧ್ಯಕ್ಷ ವಿ.ಎಸ್‌. ಶ್ರೀ ಕಂಠಯ್ಯ, ಮುಖಂಡರಾದ ಗಂಗಯ್ಯ, ಎಚ್‌. ತಿಪ್ಪಣ್ಣ, ಮುಖಂಡರಾದ ಶ್ರೀರಾಲ ರಾಮುಲು ಸಾಗರ, ಪೊ›.ಎನ್‌.ಕೆ. ಇಪ್ಪರ್‌ ಕರ್‌, ಹರೀಶ್‌ ಚೌಹಾಣ್‌ ಮಹತೋ, ಜಯಂತ್‌ ಸಾಗರ್‌ ಇದ್ದರು.

ಮೈಸೂರು ಹಾಗೂ ಚಾಮರಾಜನಗರಕ್ಕೆ ಬರಬೇಕು

ಸಾಧನೆ ಮಾಡಲು ಗುರಿ ಇರಬೇಕು- ಲಕ್ಷ್ಮಣ್‌ ಎಸ್‌. ಉಪ್ಪಾರ್‌

- ಉಪ್ಪಾರ ಜನಾಂಗದ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರಿಗೆ ಸನ್ಮಾನ

ಸಾಧನೆ ಮಾಡಿದವರನ್ನು ಸಮಾಜವು ಗುರುತಿಸುತ್ತದೆ. ಮಕ್ಕಳಿಗೆ ಪಾಲಕರೇ ಮಾದರಿ. ನಿಮ್ಮ ನಡವಳಿಕೆಯನ್ನು ಮಕ್ಕಳು ಅನುಸರಿಸುತ್ತಾರೆ.

 

click me!