ಬಿಜೆಪಿ ಸೇರ್ಪಡೆಯಾದವರ ಮೇಲೆ ಒತ್ತಡ ಸಲ್ಲ: ಸಚಿವ ಎಂಟಿಬಿ ನಾಗರಾಜ್‌

By Govindaraj S  |  First Published Jan 12, 2023, 8:01 PM IST

ಬಿಜೆಪಿ ಪಕ್ಷ ತತ್ವ ಸಿದ್ಧಾಂತವನ್ನು ಮೆಚ್ಚಿ ಬಂದವರು ಯಾರೇ ಆಗಲಿ ನಾವು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಆದರೆ ಸೇರ್ಪಡೆಯಾದವರನ್ನು ಬಲವಂತದಿಂದ ಅವರ ಮೇಲೆ ಒತ್ತಡ ಹೇರಿ ತಮ್ಮ ಪಕ್ಷದತ್ತ ಸೆಳೆಯಲು ಯಾರಾದರೂ ಮುಂದಾಗಬಾರದು ಎಂದು ಸಚಿವ ಎಂ.ಟಿ.ಬಿ.ನಾಗರಾಜ್‌ ಶಾಸಕ ಶರತ್‌ ಬಚ್ಚೇಗೌಡ, ಬೆಂಬಲಿಗರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. 


ಹೊಸಕೋಟೆ (ಜ.12): ಬಿಜೆಪಿ ಪಕ್ಷ ತತ್ವ ಸಿದ್ಧಾಂತವನ್ನು ಮೆಚ್ಚಿ ಬಂದವರು ಯಾರೇ ಆಗಲಿ ನಾವು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಆದರೆ ಸೇರ್ಪಡೆಯಾದವರನ್ನು ಬಲವಂತದಿಂದ ಅವರ ಮೇಲೆ ಒತ್ತಡ ಹೇರಿ ತಮ್ಮ ಪಕ್ಷದತ್ತ ಸೆಳೆಯಲು ಯಾರಾದರೂ ಮುಂದಾಗಬಾರದು ಎಂದು ಸಚಿವ ಎಂ.ಟಿ.ಬಿ.ನಾಗರಾಜ್‌ ಶಾಸಕ ಶರತ್‌ ಬಚ್ಚೇಗೌಡ, ಬೆಂಬಲಿಗರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಹೊಸಕೋಟೆ ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಕಾರ‍್ಯಕರ್ತ ಚನ್ನಕೃಷ್ಣ ಅವರನ್ನು ಬಲವಂತದಿಂದ ಕಾಂಗ್ರೆಸ್‌ ಸೇರ್ಪಡೆಯಾಗುವಂತೆ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ ಅವರು ಮಾತನಾಡಿದರು.

ನೂತನವಾಗಿ ಸೇರ್ಪಡೆಯಾದವರು ಹಾಗೂ ಹಳಬರು ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡಬೇಕು. ಪಕ್ಷ ಮೆಚ್ಚಿ ಬರುವವರನ್ನು ನಾವು ಸೇರ್ಪಡೆ ಮಾಡಿಕೊಳ್ಳುತ್ತೇವೆ. ತಾಲ್ಲೂಕಿನಲ್ಲಿ ಈಗಾಗಲೇ 15-20 ಗ್ರಾಮಗಳಿಂದ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೆಲವೊಂದು ಕಡೆ ಮನೆಗಳಿಗೆ ಭೇಟಿ ನೀಡಿ ಕೆಲವರು ಒತ್ತಡ ಹೇರಿದ್ದಾರೆ. ಹೀಗೆ ಅವರನ್ನು ಬಲವಂತದಿಂದ ತಡೆಹಿಡಿಯುವುದು ರಾಜಕಾರಣವಲ್ಲ ಎಂದು ಕಿಡಿಕಾರಿದರು.

Latest Videos

undefined

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಿನ್ನಡೆ ಮಾಡಿಲ್ಲ: ಸಚಿವ ಎಂಟಿಬಿ ನಾಗರಾಜ್‌

ಇದೇನೂ ಹೊಸದಲ್ಲ ಇವತ್ತಿನವರೆಗೂ ಬಲವಂತವಾಗಿಯೇ ಕಾರ‍್ಯಕರ್ತರ ಮೇಲೆ ಒತ್ತಡ ಹೇರುವುದು ಅವರಿಗೆ ರೂಢಿ, ಅವರೂ ಅನೇಕ ಪಕ್ಷಗಳನ್ನು ಬದಲಾವಣೆ ಮಾಡಿದ್ದಾರೆ ಎಂದು ಶಾಸಕ ಶರತ್‌ ಬಚ್ಚೇಗೌಡ ಹಾಗೂ ಅವರ ಕಾರ್ಯಕರ್ತರ ವಿರುದ್ಧ ಹರಿಹಾಯ್ದರು. ಬಿಜೆಪಿ ಸೇರ್ಪಡೆಯಾದ ಕಾರ‍್ಯಕರ್ತ ಚನ್ನಕೃಷ್ಣ ಮಾತನಾಡಿ, ತಿಂಡಿ ಮಾಡಲೆಂದು ಕರೆದವರು ‘ಬಿಜೆಪಿ ಸೇರ್ಪಡೆ ಕಾರ‍್ಯಕ್ರಮ ನಡೆಯಬಾರದು’ ಎಂದು ಹೇಳಿ ಶಾಸಕ ಶರತ್‌ ಬಚ್ಚೇಗೌಡರ ಕೆಲವು ಬೆಂಬಲಿಗರು ನನ್ನ ಮೇಲೆ ಒತ್ತಡ ಹೇರಿದರು. 

ನಂತರ ಬಲವಂತದಿಂದ ಶಾಸಕರ ಬಳಿ ಕರೆದುಕೊಂಡು ಹೋಗಿ ಫೋಟೊ ಹಿಡಿದು ಸೇರ್ಪಡೆ ಎಂದು ಅಪ ಪ್ರಚಾರ ಮಾಡಿದ್ದಾರೆ. ನಾಯಕರುಗಳು ಯಾವ ಪಕ್ಷಕ್ಕೆ ಬೇಕಾದರೂ ಸೇರ್ಪಡೆಯಾಗಬಹುದಂತೆ ನಾವು ಮಾತ್ರ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಬಾರದೆಂದು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು. ಜಿ.ಪಂ. ಮಾಜಿ ಸದಸ್ಯ ಚನ್ನಸಂದ್ರ ಸಿ. ನಾಗರಾಜ್‌, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತವಟಹಳ್ಳಿ ಆರ್‌.ರಾಮು, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಗೌರಮ್ಮ ಮುನಿರಾಜು, ಮುಖಂಡರಾದ ರಾಜಣ್ಣ, ಚಿಕ್ಕಪ್ಪಯ್ಯ, ಪ್ರಬೇಶ್‌ ಉಪಸ್ಥಿತರಿದ್ದರು.

ನಮ್ಮ ಕಾರ‍್ಯಕರ್ತರು ಯಾರಾದರೂ ಬೇರೆ ಪಕ್ಷಕ್ಕೆ ಸೇರ್ಪಡೆಯಾದರೆ ನಾವು ಅವರ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ಹಾಗಿರುವಾಗ ನಮ್ಮ ಪಕ್ಷಕ್ಕೆ ಸೇರ್ಪಡೆಯಾದವರ ಮೇಲೆ ಒತ್ತಡ ಹೇರುವುದು ಯಾವ ರೀತಿಯ ರಾಜಕಾರಣ ?
- ಎಂಟಿಬಿ ನಾಗರಾಜ್‌, ಸಚಿವ

ಗಾಣಿಗ ಸಮುದಾಯ ಭವನಕ್ಕೆ 25 ಲಕ್ಷ ದೇಣಿಗೆ: ಸಚಿವ ಎಂಟಿಬಿ ನಾಗರಾಜ್‌

ನಾನು ಹಿಂದಿನಿಂದಲೂ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಸಂಘಟನೆ ಮಾಡಿಕೊಂಡು ಬಂದವನು ಈಗ ಪುನಃ ನನ್ನ ಪಕ್ಷದಲ್ಲಿ ಇದ್ದೇನೆ. ಯಾವುದೇ ರೀತಿಯ ಒತ್ತಡವಿಲ್ಲದೆ ಬಿಜೆಪಿಯ ತತ್ವ ಸಿದ್ಧಾಂತದಡಿಯಲ್ಲಿ ಪಕ್ಷ ಸಂಘಟನೆಗೆ ಮುಂದಾಗುತ್ತೇನೆ.
-ಚನ್ನಕೃಷ್ಣ, ಬಿಜೆಪಿ ಸೇರ್ಪಡೆಯಾದ ಕಾರ‍್ಯಕರ್ತ

click me!