ಕಾಂಗ್ರೆಸ್‌ನ ನಾ ನಾಯಕಿ ಸಮಾವೇಶದಲ್ಲಿ ಕುಟುಂಬದ ಒಬ್ಬ ಮಹಿಳೆಗೆ ತಲಾ ಪ್ರತಿ ತಿಂಗಳು 2 ಸಾವಿರ ನೀಡುವ ಘೋಷಣೆ ಮಾಡಿರುವುದು ಮಹಿಳೆಯರ ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಟೀಕಿಸಿದರು.
ಮೈಸೂರು : ಕಾಂಗ್ರೆಸ್‌ನ ನಾ ನಾಯಕಿ ಸಮಾವೇಶದಲ್ಲಿ ಕುಟುಂಬದ ಒಬ್ಬ ಮಹಿಳೆಗೆ ತಲಾ ಪ್ರತಿ ತಿಂಗಳು 2 ಸಾವಿರ ನೀಡುವ ಘೋಷಣೆ ಮಾಡಿರುವುದು ಮಹಿಳೆಯರ ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಟೀಕಿಸಿದರು.
ಪ್ರಿಯಾಂಕ ಗಾಂಧಿಗೆ ಸ್ವಂತ ವರ್ಚಸ್ಸಿಲ್ಲ. ನೆಹರು ಮರಿ ಮೊಮ್ಮಗಳು ಎಂಬುದೊಂದೇ ಗುರುತು. ಕುಟುಂಬದ ಹೆಸರು ಹೇಳಿಕೊಂಡು ತಾವೇ ನಾನು ನಾಯಕಿ ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಇವರನ್ನು ನಾಯಕಿ ಎಂದು ಮೆರವಣಿಗೆ ಮಾಡುತ್ತಿರುವುದೇ ಹಾಸ್ಯಾಸ್ಪದ. ಗ್ರಾಪಂ ಸದಸ್ಯೆಯೂ ಅಲ್ಲದ ಪ್ರಿಯಾಂಕ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಕರ್ನಾಟಕದಲ್ಲೂ ಅದು ಪುನರಾರ್ತನೆ ಆಗಲಿದೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮೊದಲಿಸಿದರು.
undefined
ಮಹಿಳೆಯರಿಗೆ ಬಿಜೆಪಿ ಏನೂ ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ ಮಹಿಳಾ ಪರ ಯೋಜನೆ ಜಾರಿಗೊಳಿಸಿದ್ದೇ ಬಿಜೆಪಿ. ಚುನಾವಣಾ ಗಿಮಿಕ್ ಆಗಿ 2 ಸಾವಿರ ನೀಡುವ ಘೋಷಣೆ ಮಾಡಿದ್ದಾರೆ. ಆದರೆ ಎಲ್ಲಿಂದ ನೀಡುತ್ತೇವೆ ಎಂದು ಹೇಳಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪ್ರಿಯಾಂಕಾ ಗಾಂಧಿ ತಮ್ಮ ಹಣ ನೀಡುತ್ತಾರೆಯೇ? ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದವಿರುವ ಕಾಂಗ್ರೆಸ್ ಸುಳ್ಳು ಭರವಸೆಯ ಮೂಲಕ ಮಹಿಳೆಯರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಅವರು ದೂರಿದರು.
ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ಏನೂ ಮಾಡಲಿಲ್ಲ. ತುರ್ತು ಪರಿಸ್ಥಿತಿ ಹೇರಿದ್ದೇ ಅವರ ಸಾಧನೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು, ಮಹಿಳೆಯರ ಪರವಾಗಿ ಅನೇಕಾರು ಯೋಜನೆ ಜಾರಿಗೆ ತಂದಿದ್ದಾರೆ. ಮಹಿಳೆಯರು ಬಹಿರ್ದೆಸೆಗೆ ಹೋಗಬಾರದು ಎಂಬ ಕಾರಣಕ್ಕೆ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ. ತಮ್ಮ ಸಂಪುಟದಲ್ಲಿ 11 ಮಹಿಳೆಯರನ್ನು ಸಚಿವರನ್ನಾಗಿ ಮಾಡಿದ್ದಾರೆ. ದೇಶದಲ್ಲಿ 8 ಮಂದಿ ಮಹಿಳಾ ರಾಜ್ಯಪಾಲರಿದ್ದಾರೆ. ಬುಡಕಟ್ಟು ಮಹಿಳೆಯನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿಜೆಪಿ. ಮುಸ್ಮಿಂ ಮಹಿಳೆಯರ ಶೋಷಣೆ ತಡೆಯಲು ತ್ರಿಬಲ್ ತಲಾಖ್ ರದ್ದು ಮಾಡಿದ್ದು ನಮ್ಮದೇ ಸರ್ಕಾರ. ಭಾಗ್ಯಲಕ್ಷ್ಮೀ ಯೋಜನೆ ಜಾರಿ ಮಾಡಿದ್ದು ಯಡಿಯೂರಪ್ಪ. ಹೀಗೆ ಅನೇಕ ಕಾರ್ಯಕ್ರಮಗಳನ್ನು ಬಿಜೆಪಿ ಜಾರಿಗೊಳಿಸಿದೆ. ದೇಶದಲ್ಲಿ ಮಹಿಳಾ ಪರ ಸರ್ಕಾರ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ ಎಂದರು.
ಸುದ್ದಿಗೋಷ್ಠಿಯಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಉಪ ಮೇಯರ್ ಡಾ.ಜಿ. ರೂಪಾ, ವಕ್ತಾರ ಡಾ.ಕೆ. ವಸಂತಕುಮಾರ್, ನಗರ ಪಾಲಿಕೆ ಸದಸ್ಯೆ ವೇದಾವತಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಇದ್ದರು.
ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಬೇಟಿ ಬಚಾವೋ, ಬೇಡಿ ಪಡಾವೋ, ಪೋಷಣ್ ಅಭಿಯಾನ, ಮಾತೃವಂದನಾ, ಸ್ವಾವಲಂಬನೆಗಾಗಿ ಮುದ್ರಾ ಯೋಜನೆ, ಜಲಜೀವನ ಮಿಷನ್ ಅಡಿ ಕುಡಿಯುವ ನೀರು, ಸೇನೆಯಲ್ಲಿ ಮೀಸಲಾತಿ, ಹೆರಿಗೆ ರಜೆಯನ್ನು 26 ವಾರಗಳಿಗೆ ಏರಿಕೆ ಮಾಡಿದೆ. ಆದರೂ ಬಿಜೆಪಿ ಏನೂ ಮಾಡಿಲ್ಲ ಎಂದು ಆರೋಪಿಸುತ್ತಿರುವುದು ಸರಿಯಲ್ಲ.
-ಡಾ.ಜಿ.ರೂಪಾ, ಉಪ ಮೇಯರ್