ಬಿಜೆಪಿ ಹಾಗೂ ಜೆಡಿಎಸ್‌ಗೆ ಯಾವುದೇ ಸೈದ್ಧಾಂತಿಕ ನೆಲೆಗಟ್ಟಿಲ್ಲ ಆದ್ದರಿಂದ ಜನಸಾಮಾನ್ಯರ ಕಷ್ಟಗಳು ಅವರಿಗೆ ಅರಿವಾಗುತ್ತಿಲ್ಲ ಎಂದು ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಆರೋಪಿಸಿದರು.
ಬೈಲಕುಪ್ಪೆ : ಬಿಜೆಪಿ ಹಾಗೂ ಜೆಡಿಎಸ್‌ಗೆ ಯಾವುದೇ ಸೈದ್ಧಾಂತಿಕ ನೆಲೆಗಟ್ಟಿಲ್ಲ ಆದ್ದರಿಂದ ಜನಸಾಮಾನ್ಯರ ಕಷ್ಟಗಳು ಅವರಿಗೆ ಅರಿವಾಗುತ್ತಿಲ್ಲ ಎಂದು ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಆರೋಪಿಸಿದರು.
ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನೂರು ಗ್ರಾಮದಲ್ಲಿ ಬೈಲಕುಪ್ಪೆ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
undefined
ಬಿಜೆಪಿ ಮತ್ತು ಜೆಡಿಎಸ್ ಜನಸಾಮಾನ್ಯರ ಬವಣೆಗಳನ್ನು ಅರ್ಥ ಮಾಡಿಕೊಳ್ಳದೆ ಸ್ವಾರ್ಥ ಮತ್ತು ಭ್ರಷ್ಟಾಚಾರ ಆಡಳಿತವನ್ನು ನಡೆಸಲು ಹವಣಿಸುತ್ತಿದೆ, ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ಈ ಎರಡು ಪಕ್ಷಗಳು ಸಂವಿಧಾನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಸಿದ್ಧಾಂತಗಳನ್ನು ಗಾಳಿಗೆ ತೂರಿ ಆಡಳಿತವನ್ನು ನಡೆಸಿ ಜನಸಾಮಾನ್ಯರ ಮೇಲೆ ಇಲ್ಲಸಲ್ಲದ ಕಾಯ್ದೆಗಳನ್ನು ಜಾರಿಗೊಳಿಸಿ ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಸ್ವಂತ ಬಲದಿಂದ ಅಧಿಕಾರಕ್ಕೆ ಬರದೆ ವಾಮ ಮಾರ್ಗಗಳ ಮೂಲಕ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಈ ಹಿಂದೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಜನಸಾಮಾನ್ಯರಿಗೆ, ರೈತರಿಗೆ ಹಾಗೂ ಕಾರ್ಮಿಕರಿಗೆ ಉಪಯುಕ್ತವಾದ ಯೋಜನೆಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಘೋಷಿಸಿ ಅನುಷ್ಠಾನ ಗೊಳಿಸಲಾಗಿತ್ತು. ಈ ಯೋಜನೆಗಳು ಇಂದಿಗೂ ಕೂಡ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪುತ್ತಿದೆ. ಮಾಜಿ ಶಾಸಕ ಕೆ. ವೆಂಕಟೇಶ್ ಕೂಡ ತಾಲೂಕಿನ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಅನುದಾನವನ್ನು ತಂದಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳಿಂದಾಗಿ ಕಳೆದ ಚುನಾವಣೆಯಲ್ಲಿ ಕೆ. ವೆಂಕಟೇಶ್ ಅವರು ಜಯ ಸಾಧಿಸಬೇಕಾಗಿತ್ತು. ಆದರೆ ಕಾರ್ಯಕರ್ತರ ಮೈ ಮರೆವಿನಿಂದಾಗಿ ಸೋಲನ್ನು ಅನುಭವಿಸಿ, ಇಂದು ತಾಲೂಕಿನಲ್ಲಿ ಸಂಕಷ್ಟವನ್ನು ಅನುಭವಿಸಬೇಕಾಗಿದೆ. ಇಂತಹ ಪರಿಸ್ಥಿತಿ ಮುಂದೆ ಬರದಂತೆ ಜಾಗೃತಿವಹಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ಡಾ. ಯತೀಂದ್ರ ಸಿದ್ದರಾಮಯ್ಯ ಮಾಜಿ ಶಾಸಕ ಕೆ. ವೆಂಕಟೇಶ… ಮತ್ತು ಜಿಲ್ಲಾ ಕಾಂಗ್ರೆಸ… ಅಧ್ಯಕ್ಷ ಡಾ.ಬಿ.ಜೆ. ವಿಜಯ…ಕುಮಾರ್, ಕರಿಗೌಡ ಮಾತನಾಡಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಹಿರಿಯ ಕಾರ್ಯದರ್ಶಿ ಸಮಿವಲ್ಲ ಖಾನ್, ಟಿ.ಡಿ. ಗಣೇಶ್, ನಿತಿನ್ ವೆಂಕಟೇಶ್, ಡಿ.ಟಿ. ಸ್ವಾಮಿ, ಅನಿತಾ ತೋಟಪ್ಪಶೆಟ್ಟಿ, ಕೆ. ಹೊಲದಪ್ಪ, ರೆಹಮತ್‌ಜಾನ್ ಬಾಬು, ಸುಮಾ, ಗೀತಾ, ಕಲ್ಯಾಣಪ್ಪ, ಪಿ. ಮಹದೇವ್, ಜವರಪ್ಪ, ಗ್ರಾಪಂ ಅಧ್ಯಕ್ಷ ಸುಮಾ ಪ್ರಭಾಕರ, ಉಪಾಧ್ಯಕ್ಷೆ ಗೀತಾ ರಾಮು, ಗ್ರಾಪಂ ಸದಸ್ಯರಾದ ರಘು, ರಘು ಬಾಲಾಜಿ, ನಿಸಾರ್ ಅಹ್ಮದ್ ಮಂಜುನಾಥ್, ನವೀನ್, ಪಿ.ಪಿ. ಮಹದೇವ್ ಇದ್ದರು.
ಮತ್ತೆ ಬಿಜೆಪಿಗೆ ಅಧಿಕಾರ
ಶಿರಾ (ಜ.16): ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಲಿದೆ. ಆ ನಿಟ್ಟಿನಲ್ಲಿ ಸಂಘಟನೆಯನ್ನು ಇನ್ನೂ ಹೆಚ್ಚು ಬಲಿಷ್ಠಗೊಳಿಸುತ್ತಿದ್ದೇವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ನಗರದ ಜ್ಯೋತಿನಗರದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಬೂತ್ ವಿಜಯ್ ಅಭಿಯಾನದಲ್ಲಿ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಹಾರಿಸಿ ಮಾತನಾಡಿದರು. ಬಿಜೆಪಿ ಪಕ್ಷವನ್ನು ಸಂಘಟನೆ ಮಾಡುವ ಉದ್ದೇಶದಿಂದ ಬೂತ್ ವಿಜಯ್ ಅಭಿಯಾನವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಕಾರ್ಯಕರ್ತರವನ್ನು ಅವರ ಮನೆಯಲ್ಲಿಯೇ ಭೇಟಿ ಮಾಡಲಾಗುತ್ತದೆ. ಇದರಿಂದ ಅವರೊಂದಿಗೆ ನಿಕಟವಾದ ಸಂಬಂಧ ವೃದ್ಧಿಯಾಗುತ್ತದೆ. ಆಗ ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಬೂತ್ ವಿಜಯ್ ಅಭಿಯಾನ ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಶಿರಾ ಕ್ಷೇತ್ರದ 150 ಬೂತ್‌ಗಳಲ್ಲಿ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಬಾವುಟ ಹಾರಿಸಲಾಗಿದೆ. ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕ್ರಮಗಳನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕಾರ್ಯ ಮಾಡುತ್ತೇವೆ. ಇದರಿಂದ ಗ್ರಾಮೀಣ ಮಟ್ಟದಲ್ಲಿ ತಳಮಟ್ಟದ ಸಂಘಟನೆಯನ್ನು ಬಲಿಷ್ಠವಾಗಿಸಲು ಸಾಧ್ಯವಾಗಿದೆ. ಬಹಳ ಹುಮ್ಮಸ್ಸಿನಿಂದ ಕಾರ್ಯಕರ್ತರು ಸ್ವಾಗತ ಮಾಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ಮಾಡಿರುವ ಸಂಘಟನೆಯನ್ನು ತಾಲ್ಲೂಕಿನಲ್ಲಿ ಬೇರೆ ಯಾವ ಪಕ್ಷವೂ ಸಹ ಮಾಡಿಲ್ಲ ಎಂದರು.