ಸಿರಿಗೆರೆ (ನ.14) : ಇಂಗ್ಲಿಷ್ ಅನ್ನದ ಭಾಷೆಯಾಗಿದೆ ಎಂಬ ವ್ಯಾಮೋಹಕ್ಕೆ ಒಳಗಾಗಿರುವ ಹಲವರಿಂದ ಕನ್ನಡದ ಏಳಿಗೆಗೆ ಅಡ್ಡಿಯಾಗಿದೆ. ಆದರೆ ಮುಂದೆ ಕನ್ನಡವೂ ಅನ್ನದ ಭಾಷೆಯಾಗಿ ರೂಪುಗೊಳ್ಳುವ ಕಾಲ ಬರುತ್ತಿದೆ ಎಂದು ಚಲನಚಿತ್ರ ನಟ ನಿರ್ದೇಶಕ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸಿ ಪುರಸ್ಕೃತ ಡಾ. ಟಿ.ಎಸ್. ನಾಗಾಭರಣ ಹೇಳಿದರು.
ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಆಯೋಜಿಸಲಾಗಿರುವ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಮ್ಮ ನಾಡಿನಲ್ಲಿ ಕನ್ನಡ ಭಾಷೆಗೆ ಹಿನ್ನೆಡೆಯುಂಟಾಗುತ್ತಿದೆ. ಅದರ ಕಡೆಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ. ಕನ್ನಡನಾಡು ಕರ್ಮಭೂಮಿ ಆಗಿರುವಂತೆ ಧರ್ಮಭೂಮಿಯೂ ಆಗಿದೆ. 8ನೆಯ ಶತಮಾನದಲ್ಲಿ ಪಂಪ, 12ನೆಯ ಶತಮಾನದಲ್ಲಿ ಬಸವಣ್ಣ ಸಾರಿದ ಮಾನವಪಥ, ವಿಶ್ವಪಥದ ಮಾತುಗಳು ಕನ್ನಡಿಗರ ಮನದಲ್ಲಿ ಕುಳಿತಿವೆ. ನಮ್ಮ ಹೃದಯದಲ್ಲಿ ಕನ್ನಡದ ಮನಸ್ಸುಗಳನ್ನು ನಮ್ಮ ಹಿರಿಯರು ತುಂಬಿದ್ದಾರೆ. ಆದರೂ 67ನೆಯ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿಯೂ ನಾಡಿನಲ್ಲಿ ಹಲವರಿಗೆ ಕನ್ನಡ ನಾಡು, ನುಡಿ, ಭಾಷೆ ಮತ್ತು ಇಲ್ಲಿಯ ಕವಿಗಳ ಬಗ್ಗೆ ಅರಿವೇ ಇಲ್ಲ ಎಂದರು.
undefined
ಚಿತ್ರದುರ್ಗ: ದೇವೇಗೌಡರ ಆರೋಗ್ಯ ವಿಚಾರಿಸಿದ ಶಿವಮೂರ್ತಿ ಶಿವಾಚಾರ್ಯ ಶ್ರೀ
ಇತಿಹಾಸ ಅರಿಯಬೇಕು:
ನಾಳೆಗಳನ್ನು ಕಟ್ಟುವ ಉತ್ಸಾಹದಲ್ಲಿರುವ ನಾವು ಇತಿಹಾಸ, ಪರಂಪರೆಯನ್ನು ಅರಿಯಬೇಕು. ವಿಶ್ವಮಾನವ ತತ್ವವನ್ನು ಧಮನಿಗಳಲ್ಲಿ ಹರಿಸಿಕೊಂಡು ಬಂದಿರುವ ಹಿರಿಯರ ಬಗ್ಗೆ ಗೌರವ ಹೊಂದಬೇಕು. ಕನ್ನಡದ ಕೆಲಸ ಕೇವಲ ಸರ್ಕಾರದಿಂದ ಆಗುವಂತಹುದಲ್ಲ. ಕನ್ನಡವನ್ನು ಮಗುವಿನ ಮನಸ್ಸಿನೊಳಗೆ ಸರ್ಕಾರ ತುಂಬಲು ಸಾಧ್ಯವಿಲ್ಲ. ನಾಡಿನ ಸಾಂಸ್ಕ್ರತಿಕ ಪರಂಪರೆಯನ್ನು ಅರಿತು ಮಕ್ಕಳಲ್ಲಿ ಕನ್ನಡದ ಅನುಭೂತಿ ಮೂಡುವಂತಹ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು. ಕನ್ನಡ ಕಟ್ಟುವ ಕೆಲಸ ಸಾಹಿತ್ಯವನ್ನು ಅರಿಯುವುದರಿಂದ ಹಾಗೂ ಸಾಂಸ್ಕೃತಿಕ ಮನಸ್ಸುಗಳ ಮಧ್ಯೆ ಕನ್ನಡ ಬೆಳೆಯಬೇಕು ಎಂದು ನಾಗಾಭರಣ ಹೇಳಿದರು.
ಧಾರವಾಡದ ಶಿಕ್ಷಣ ತಜ್ಞರಾದ ಸುರೇಶ್ ಕುಲಕರ್ಣಿ, ದ.ರಾ ಬೇಂದ್ರೆಯವರ ಜೀವನ ಹಾಗೂ ಕೃತಿಗಳ ಬಗ್ಗೆ ತಿಳಿಸಿದರು. ಜಗತ್ತಿನ ಏಳಿಗೆ ಆಗಬೇಕಾದರೆ ಕನ್ನಡಿಗರಿಂದ ಮಾತ್ರ ಸಾಧ್ಯ. ಇಡೀ ಶರೀರವೇ ಕನ್ನಡದಲ್ಲಿ ಆಗಿದೆ ಎಂದು ದ.ರಾ ಬೇರೆಯವರ ಸಾಹಿತ್ಯಕ ಮಾತುಗಳಲ್ಲಿ ತಿಳಿಸಿದರು. ಕನ್ನಡದ ವಾಸ್ತುಶಿಲ್ಪಿಗಳ ರೂವಾರಿ ಕನ್ನಡಿಗರೇ ಆಗಿದ್ದಾರೆ ಎಂದರು.
ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿರುವ ಮಕ್ಕಳಲ್ಲಿ ಅಪ್ರತಿಮ ಪ್ರತಿಭೆ ಇದ್ದು, ಅವರಿಂದ ಕನ್ನಡವು ಉಳಿದು ಬೆಳೆಯುತ್ತದೆ ಎಂಬ ಭ ರವಸೆ ಇದೆ. ತರಳಬಾಳು ಶ್ರೀಗಳು ವಚನ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಶ್ಲಾಘನೀಯ ಎಂದರು
Chitradurga: ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಮಾರ್ಗದರ್ಶನ ಸರ್ಕಾರಕ್ಕೆ ಬೇಕು: ಸಿಎಂ ಬೊಮ್ಮಾಯಿ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾವೇರಿಯ ಪುರವಂತಿಕೆ ಕಲಾವಿದ ಮಹೇಶ್ವರಗೌಡರನ್ನು ಶ್ರೀಗಳವರು ಸಾಂಪ್ರಾಯಿಕವಾಗಿ ಸನ್ಮಾನಿಸಿದರು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ತರಳಬಾಳು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎಸ್.ಬಿ. ರಂಗನಾಥ್ ವೇದಿಕೆಯಲ್ಲಿ ಇದ್ದರು. ವಿದ್ಯಾರ್ಥಿ ಬಿ. ಚೇತನ್ ಜನಪ್ರಿಯ ಕನ್ನಡ ಗೀತೆಗಳನ್ನು ಹಾಡಿದರು. ಕನ್ನಡ ಅಧ್ಯಾಪಕ ಎಸ್. ಆರ್. ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಅಧ್ಯಾಪಕ ಎಸ್.ಟಿ. ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು. ದಾವಣಗೆರೆಯ ಭರತಾಂಜಲಿ ಕಲಾ ಪ್ರದರ್ಶನ ಅಕಾಡೆಮಿ, ಚನ್ನರಾಯಪಟ್ಟಣ ನೃತ್ಯಾಂಜಲಿ ಕಲಾ ನಿಕೇತನ ತಂಡದವರು ಶಾಸ್ತಿ್ರಯ ನೃತ್ಯಗಳನ್ನು ಪ್ರದರ್ಶಿಸಿದರು.