ಹಲವಾರು ಕಾಂಗ್ರೆಸ್ಸಿಗರು ನನ್ನ ಬೆಂಬಲಕ್ಕೆ ಇದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಕಾಂಗ್ರೆಸ್ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ತಿಳಿಸಿದ್ದಾರೆ.
ಕುಣಿಗಲ್ : ಹಲವಾರು ಕಾಂಗ್ರೆಸ್ಸಿಗರು ನನ್ನ ಬೆಂಬಲಕ್ಕೆ ಇದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಕಾಂಗ್ರೆಸ್ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ತಿಳಿಸಿದ್ದಾರೆ.
ತಾಲೂಕಿನ ಕೆಂಕೆರೆಯ ವಸತಿ ಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಾಲ್ಕುವರೆ ದಶಕಗಳಿಂದ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟಿಬೆಳೆಸಿದ ಹೆಮ್ಮೆ ನನಗಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಸಮಕಾಲೀನವರಾದ ಕೊಡವತ್ತಿ ಹುಚ್ಚಪ್ಪ ಹಾಗೂ ವಿರೋಧ ಪಕ್ಷದಲ್ಲಿ ಮಾಜಿ ಸಚಿವ ಡಿ. ನಾಗರಾಜಯ್ಯ ಹೊರತುಪಡಿಸಿ ನನ್ನ ಸಮಕಾಲೀನವರು ತಾಲೂಕಿನಲ್ಲಿ ಇಂದು ಯಾರು ಉಳಿದಿಲ್ಲ. ಅವರೊಟ್ಟಿಗೆ ರಾಜಕೀಯ ಮಾಡಿದ ಅನುಭವ ನನಗಿದೆ ಎಂದರು.
ತಾಲೂಕಿನ ರಾಜಕೀಯದಲ್ಲಿ ಸಾಕಷ್ಟುಏರಿಳಿತಗಳನ್ನು ನೋಡಿರುವೆ, ಸಾಕಷ್ಟುಭಾರಿ ಪಕ್ಷಕ್ಕಾಗಿ ಹಲವಾರು ತ್ಯಾಗ ಮಾಡಿ ರಾಜಕಾರಣದಲ್ಲಿ ಬೆಳೆದು ಬಂದಿದ್ದೇನೆ. ಶಕ್ತಿಯುತವಾಗಿದ್ದ ಕಾಲದಲ್ಲಿ ನನಗೆ ಪಕ್ಷದಿಂದ ಟಿಕೆಟ್ ವಂಚಿತನಾಗಿದ್ದ ಸಮಯದಲ್ಲಿ ಪಕ್ಷದಿಂದ ಬೋರೆಗೌಡ, ಹುಚ್ಚಮಾಸ್ತಿಗೌಡರ ಮಗ ಪ್ರಸಾದ್, ವೈ.ಕೆ. ರಾಮಯ್ಯಗೆ ಟಿಕೆಟ್ ನೀಡಿದಾಗ ನಾನು ಯಾವ ವಿರೋಧ ಮಾಡಲಿಲ್ಲಿ, ಆದರೆ ನನಗೆ ಪಕ್ಷದಿಂದ ಟಿಕೆಟ್ ಸಿಕ್ಕಿ ಚುನಾವಣೆಗೆ ನಿಂತಂತಹ ಸಮಯದಲ್ಲಿ ಸ್ವ ಪಕ್ಷದವರಿಂದಲೇ ಸಾಕಷ್ಟುಸಮಸ್ಯೆ ಉಂಟು ಮಾಡಿದರು. ನನ್ನನ್ನು ಸೋಲಿಸಲು ಪ್ರಯತ್ನಗಳು ನಡೆದಿದ್ದವು. ಹಲವರು ಕಾಂಗ್ರೆಸ್ ನಾಯಕರು ನನ್ನನ್ನು ದುರುಪಯೋಗಪಡಿಸಿಕೊಂಡು ಅವರ ಅಧಿಕಾರ ಹಿಡಿಯುವಲ್ಲಿ ನನ್ನು ಮೂಲೆ ಗುಂಪು ಮಾಡಿದ್ದರು. ಆದರೆ ಈ ಬಾರಿ ಮೂಲ ಕಾಂಗ್ರೆಸಿಗರು ನಡುಕಾಲದಲ್ಲಿ ಬಂದವರನ್ನು ಯಾರು ಬೆಂಬಲಿಸುವುದಿಲ್ಲ. ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸಿ ಸ್ವಚ್ಛ ಪ್ರಾಮಾಣಿಕತೆಯಿಂದ ಬೆಂಬಲಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಬಿಆರ್ ಬೆಂಬಲಿಗರು ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡರು ಇದ್ದರು.
ಬಗರ್‌ಹುಕುಂ ರೈತರ ರಕ್ಷಣೆ
ಸೊರಬ (ಏ.02): ತಾಳಗುಪ್ಪದಲ್ಲಿ ರೈತರಿಗಾದ ಅನ್ಯಾಯ ತಾಲೂಕು, ಜಿಲ್ಲೆಯಲ್ಲಿ ಇನ್ನೆಂದೂ ಮರುಕಳಿಸದಂತೆ ಕಾಂಗ್ರೆಸ್‌ವನ್ನು ಅಧಿಕಾರಕ್ಕೆ ತರುವ ಅಗತ್ಯವಿದೆ. ತಾವು ಅಧಿಕಾರಕ್ಕೆ ಬಂದಲ್ಲಿ ಜನರ ವಿಶ್ವಾಸ ಉಳಿಸಿಕೊಳ್ಳುವ ಜತೆಗೆ ಯಾವೊಬ್ಬ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಬಂಗಾರಧಾಮದಲ್ಲಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಕಾರ್ಯಕರ್ತರು, ಮುಖಂಡರನ್ನು ಅಭಿನಂದಿಸಿ ಮಾತನಾಡಿದ ಅವರು, ಜನತೆ ತಮ್ಮನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸಿದರೆ ರೈತರ ಧ್ವನಿಯಾಗಿ ಕೆಲಸ ಮಾಡುತ್ತೇನೆ.
ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಎಸ್.ಬಂಗಾರಪ್ಪ ಅವರಿಗೆ ಬಂಗಾರಪ್ಪ ಅವರೇ ಸಾಟಿ. ರಾಜ್ಯದಲ್ಲಿ ಮತ್ತೊಬ್ಬ ಎಸ್.ಬಂಗಾರಪ್ಪ ಜನಿಸಲು ಸಾಧ್ಯವಿಲ್ಲ. ಅವರ ಮಾರ್ಗದರ್ಶನ ಮುಂದಿಟ್ಟುಕೊಂಡು ಮುನ್ನೆಡೆದಾಗ ಮಾತ್ರ ಜನಸಾಮಾನ್ಯರ ಹಿತಕಾಯಲು ಸಾಧ್ಯ ಎಂದರು. ಕ್ಷೇತ್ರದಲ್ಲಿ ನನ್ನ ನಾಯಕತ್ವವನ್ನು ಬೆಂಬಲಿಸಿ ಅನೇಕರು ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಿರುವುದನ್ನು ಸ್ವಾಗತಿಸುವ ಜೊತೆಗೆ ತಮ್ಮ ಮೇಲೆ ಜವಾಬ್ದಾರಿಯೂ ಹೆಚ್ಚಾಗಿದೆ.
ನನ್ನ ಅಭಿವೃದ್ಧಿ ನೋಡಿ ಮತ್ತೊಮ್ಮೆ ನನಗೆ ಆಶೀರ್ವದಿಸಿ: ಶಾಸಕ ಹರ್ಷವರ್ಧನ್
ವೈಯುಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕಾಂಗ್ರೆಸ್ ಗೆಲ್ಲಿಸುವುದು ನಮ್ಮೆಲ್ಲರ ಹೊಣೆ ಎಂದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಜಿಪಂ ಮಾಜಿ ಸದಸ್ಯ ಸತೀಶ್ ಅರ್ಜುನಪ್ಪ ಮಾತನಾಡಿ, ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ದುಡಿದವರಿಗೆ ಗೌರವ ಮತ್ತು ಬೆಲೆ ಇಲ್ಲದಂತಾಗಿದೆ. ಕ್ಷೇತ್ರದ ಬಿಜೆಪಿಯಲ್ಲಿ ಆಮ್ಲಜನಕದ ಕೊರತೆ ಇದೆ. ಒಂದು ಸಿಲಿಂಡರ್ ಶಾಸಕರ ಬಳಿ ಇದ್ದರೆ, ಮತ್ತೊಂದು ಸಿಲಿಂಡರ್ ಶಿಕಾರಿಪುರದಲ್ಲಿದೆ. ಸಾಮಾನ್ಯರ ಸ್ಥಿತಿ ಆಮ್ಲಜನಕದ ಕೊರತೆಯಿಂದ ನರಳುವಂತಾಗಿರುವುದು ಇಲ್ಲಿನ ರಾಜಕೀಯ ಸ್ಥಿತಿಯಾಗಿದೆ. ಮಧು ಬಂಗಾರಪ್ಪ ಅವರಿಗೆ ಎಲ್ಲ ಪಕ್ಷದವರನ್ನು ವಿಶ್ವಾಸದಿಂದ ಕಾಣುವ ಗುಣ ಅವರಲ್ಲಿದೆ.