ಪ್ರಸ್ತುತ ಮೀನುಗಾರಿಕೆ ಇಲಾಖೆಗೆ ಕಾಯಕಲ್ಪ ಮಾಡಿದ್ದು, ದೇಶದಲ್ಲೇ ರಾಜ್ಯದ ಮೀನುಗಾರಿಕೆ ಇಲಾಖೆ ಪ್ರಥಮ ಸ್ಥಾನ ಪಡೆದಿದೆ. ಕೇಂದ್ರ ಸರ್ಕಾರದಿಂದ .10 ಲಕ್ಷ ಬಹುಮಾನವನ್ನು ಗಳಿಸಿದೆ ಎಂದು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಜ್ ಹೇಳಿದರು.
ನರಸಿಂಹರಾಜಪುರ (ಜ.4) : ಪ್ರಸ್ತುತ ಮೀನುಗಾರಿಕೆ ಇಲಾಖೆಗೆ ಕಾಯಕಲ್ಪ ಮಾಡಿದ್ದು, ದೇಶದಲ್ಲೇ ರಾಜ್ಯದ ಮೀನುಗಾರಿಕೆ ಇಲಾಖೆ ಪ್ರಥಮ ಸ್ಥಾನ ಪಡೆದಿದೆ. ಕೇಂದ್ರ ಸರ್ಕಾರದಿಂದ .10 ಲಕ್ಷ ಬಹುಮಾನವನ್ನು ಗಳಿಸಿದೆ ಎಂದು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಜ್ ಹೇಳಿದರು.
ಮಂಗಳವಾರ ಮೀನುಗಾರಿಕೆ ಇಲಾಖೆ(Department of Fisheries) ಆಶ್ರಯದಲ್ಲಿ ಹಳೇ ಪೇಟೆಯಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಮೀನು ಮಾರುಕಟ್ಟೆ(Hi-Tech Fish Market)ಲೋಕಾರ್ಪಣೆಗೊಳಿಸಿ, ಮಾತನಾಡಿದ ಅವರು, ಮೀನುಗಾರರಿಗೆ ಕೇಂದ್ರ ಸರ್ಕಾರ ಎಲ್ಲಾ ಸೌಲಭ್ಯ ನೀಡುತ್ತಿದೆ. ಸ್ವಉದ್ಯೋಗ ಮಾಡಲು ಮೀನುಗಾರಿಕೆ ಇಲಾಖೆ ಮೂಲಕ ಕೆರೆಗಳನ್ನು ನಿರ್ಮಿಸಬಹುದು. ಶೇ.60ರಷ್ಟುಸಹಾಯಧನ ಸಿಗಲಿದೆ. ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇವೆ. ಶಿವಮೊಗ್ಗದಲ್ಲಿ ಮೀನು ಮಾರುಕಟ್ಟೆಇದೆ. ಚಿಕ್ಕಮಗಳೂರು, ಮೂಡಿಗೆರೆ, ನರಸಿಂಹರಾಜಪುರದಲ್ಲಿ ಮೀನು ಮಾರುಕಟ್ಟೆಮಳಿಗೆ ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ. ಇಲಾಖೆಯಿಂದ 300 ತ್ರಿಚಕ್ರ ವಾಹನÜವನ್ನು ಮೀನುಗಾರರಿಗೆ ನೀಡಲು ಉದ್ದೇಶಿಸಿದ್ದೇವೆ. ಬೆಂಗಳೂರಿನ ಕೆಲವು ಭಾಗದಲ್ಲಿ ಮೀನು ಊಟದ ಮನೆ ಮಾಡುವ ಚಿಂತನೆ ಇದೆ. ಮೀನಿನ ಮಾರುಕಟ್ಟೆ, ಮೀನುಗಾರರ ಹಿತಕಾಪಾಡುವುದೇ ಮೀನುಗಾರಿಕೆ ಇಲಾಖೆಯ ಮುಖ್ಯಉದ್ದೇಶ ಎಂದರು.
KODAGU: ಸ್ಥಳೀಯ ರೈತರಿಗೆ ಹಾರಂಗಿ ಹಿನ್ನೀರಿನಲ್ಲಿ ಮೀನುಗಾರಿಕೆ ಪರವಾನಗಿಗೆ ರೈತ ಸಂಘ ಆಗ್ರಹ
ಮುಖ್ಯ ಅತಿಥಿಗಳಾಗಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ,ಮೀನುಗಾರರ ರಕ್ಷಣೆ ಅತಿ ಮುಖ್ಯ.ಹೈಟೆಕ್ ಮೀನು ಮಾರುಕಟ್ಟೆಶಂಕುಸ್ಥಾಪನೆ ಆಗಿ 6 ವರ್ಷದ ನಂತರ ಉದ್ಘಾಟನೆಗೊಂಡಿದೆ.ತಾಲೂಕಿನ ಲಿಂಗಾಪುರ,ರಾವೂರು ಭಾಗದ ಮೀನುಗಾರರು ರಸ್ತೆ ಬದಿ ಮೀನು ಮಾರುತ್ತಿದ್ದರು. ಪುರುಷರು ಮೀನಿಗೆ ಬಲೆ ಬೀಸಿ ಮೀನು ಹಿಡಿದರೆ ಮಹಿಳೆಯರು ಮಾರಾಟ ಮಾಡುತ್ತಿದ್ದರು. ಈಗ ಮೀನುಗಾರಿಕೆ ಇಲಾಖೆಯಿಂದ ಹೈಟೆಕ್ ಮಾರುಕಟ್ಟೆಮಾಡಿರುವುದರಿಂದ ಇನ್ನು ಮುಂದೆ ಮೀನುಗಾರರು ನೆಮ್ಮದಿಯಿಂದ ಮೀನು ಮಾರಾಟ ಮಾಡಬಹುದು. ಕೆಎಫ್‌ಡಿಸಿಯಿಂದ ಸಮದ್ರ ಮೀನು ಶಿವಮೊಗ್ಗ ಮಾರುಕಟ್ಟೆಗೆ ಹೋಗುತ್ತಿದೆ. ಹೋಗುವಾಗ ನರಸಿಂಹರಾಜಪುರ ಮಾರ್ಗದಿಂದ ಹೋಗಿ ಇಲ್ಲಿಯೂ ಮಳಿಗೆ ಮೂಲಕ ಮಾರಾಟ ಮಾಡಿದರೆ ಹಸಿ ಮೀನು ಹಾಗೂ ಒಣ ಮೀನು ಎರಡು ಸಿಗಲಿದೆ.ನಾನು ಶಾಸಕನಾಗಿದ್ದಾಗ ಭದ್ರಾ ಡ್ಯಾಂಗೆ 50 ಲಕ್ಷ ಮೀನಿನ ಮರಿ ಬಿಡಿಸಿದ್ದೆ. ನಂತರ ಅಷ್ಟುದೊಡ್ಡ ಪ್ರಮಾಣದಲ್ಲಿ ಮೀನಿನ ಮರಿ ಬಿಡಲಿಲ್ಲ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಟಿ.ಡಿ.ರಾಜೇಗೌಡ ಮಾತನಾಡಿ,ಅಭಯ ಚಂದ್ರ ಜೈನ್ ಜಿಲ್ಲಾ ಉಸ್ತುವಾರಿ ಸಚಿವರಾದ ಸಂದರ್ಭದಲ್ಲಿ 3 ತಾಲೂಕುಗಳಿಗೆ ಮೀನು ಮಾರುಕಟ್ಟೆಬೇಕು ಎಂದು ನಿಯೋಗ ಹೋಗಿದ್ದೆವು. ಪ್ರತಿ ವರ್ಷ ಒಂದೊಂದು ತಾಲೂಕಿಗೆ ಮೀನು ಮಾರುಕಟ್ಟೆಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಪ್ರಾರಂಭದಲ್ಲಿ 6.50 ಲಕ್ಷ ರು. ಬಿಡುಗಡೆಯಾಗಿದೆ ಉದ್ಘಾಟನೆ ತಡವಾಗಿದೆ. ಮದ್ಯವರ್ತಿಗಳಿಂದ ಮೀನುಗಾಗರಿಗೆ ನಷ್ಟಉಂಟಾಗುತ್ತಿದೆ. ಮೀನುಗಾರರು ನೇರವಾಗಿ ಮಾರಾಟ ಮಾಡಿದರೆ ಲಾಭ ಹೆಚ್ಚ. ಮೀನು ಹಿಡಿಯಲು ಹೋದ ಹಲವಾರು ಮೀನುಗಾರರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕೊಪ್ಪ, ಶೃಂಗೇರಿ, ಬಾಳೆಹೊನ್ನೂರಿನಲ್ಲೂ ಮೀನು ಮಾರುಕಟ್ಟೆಮಾಡಿಸಿಕೊಡಲು ನಿಗಮದ ಅಧ್ಯಕ್ಷರು ಗಮನ ನೀಡಬೇಕು.ಮೀನು ಮಾರುಕಟ್ಟೆಯಲ್ಲಿ ಸ್ವಚ್ಛತೆಗೆ ಗಮನ ನೀಡಬೇಕು. ಗುಣಮಟ್ಟದ ಮೀನು ಮಾರಾಟ ಮಾಡಬೇಕು. ಸಮದ್ರದ ಮೀನುಗಾರರಿಗೆ ಇರುವ ಸೌಲಭ್ಯವನ್ನು ಹೊಳೆಯಲ್ಲಿ ಮೀನು ಹಿಡಿಯುವ ಮೀನುಗಾರರಿಗೂ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪಪಂ ಅಧ್ಯಕ್ಷೆ ಜುಬೇದ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಶಿವಮೊಗ್ಗ ವಲಯ ಮೀನುಗಾರಿಕೆ ಜಂಟಿ ನಿರ್ದೇಶಕ ಜೆ.ಉಮೇಶ್,ಚಿಕ್ಕಮಗಳೂರು ಮೀನುಗಾರಿಕೆ ಉಪ ನಿರ್ದೇಶಕ ಗುರು ಚನ್ನಬಸವಣ್ಣ ಮಾತನಾಡಿದರು.
ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾ, ಚಿಕ್ಕಮಗಳೂರು ಕಾರ್ಯನಿರ್ವಾಹಕ ಅಭಿಯಂತರ ಅಶ್ವಿನಿ, ಇ.ಓ. ನಯನ, ಪಪಂ ಮುಖ್ಯಾಧಿಕಾರಿ ಚಂದ್ರಕಾಂತ್, ಸದಸ್ಯರಾದ ರೀನಾ ಮೋಹನ್, ಸುರೈಯಾ ಭಾನು, ಮುನೋಹರ್ ಪಾಶಾ, ಸೋಜ, ಕುಮಾರಸ್ವಾಮಿ, ನಾಮಿನಿ ಸದಸ್ಯರಾದ ಎಂ.ಪಿ.ಸನ್ನಿ, ಚಂದ್ರಪ್ಪ, ಅರುಣಕುಮಾರ ಜೈನ್ ಮತ್ತಿತರರು ಇದ್ದರು.
ಆಂಧ್ರದಲ್ಲಿ ಮೀನುಗಾರನ ಬಲೆಗೆ ಬಿತ್ತು 'ಚಿನ್ನದ' ಮೀನು, ಮಾರಿದಾತನಿಗೆ ಸಿಕ್ಕಿದ್ದು ಬರೋಬ್ಬರಿ 2.90 ಲಕ್ಷ!
6 ವರ್ಷಗಳ ಬಳಿಕ ಉದ್ಘಾಟನೆ!
2017ರ ಮಾಚ್‌ರ್ ತಿಂಗಳಲ್ಲಿ ಹೈಟೆಕ್ ಮೀನು ಮಾರುಕಟ್ಟೆಶಂಕುಸ್ಥಾಪನೆಗೊಂಡು ಸುದೀರ್ಘವಾಗಿ 6 ವರ್ಷಗಳÜ ನಂತರ ಕೊನೆಗೂ ಉದ್ಘಾಟನೆಗೆ ಮುಹೂರ್ತ ಕೂಡಿಬಂದಿದೆ. 5 ಬಾರಿ ಉದ್ಘಾಟನೆಗೆಂದು ಸಮಯ ನಿಗದಿಪಡಿಸಿದ್ದರೂ ಕಾರಣಾಂತರದಿಂದ ಉದ್ಘಾಟನೆಗೊಳ್ಳಲಿಲ್ಲ. ಕಳೆದ ತಿಂಗಳು ಉದ್ಘಾಟನೆ ನಿಗದಿಯಾಗಿದ್ದರೂ ಕೊನೆಗಳಿಗೆಯಲ್ಲಿ ರದ್ದಾಗಿದ್ದರಿಂದ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಹೈಟೆಕ್ ಮೀನು ಮಾರುಕಟ್ಟೆಎದುರು ಧರಣಿ ನಡೆಸಿದ್ದರು.