Kodagu: ಮತ್ತೆ ಭೂಕುಸಿತದ ಭೂತಕ್ಕೆ ಬೆಚ್ಚಿಬಿದ್ದ ಹಿಂದಿನ ಭೂಕುಸಿತಗಳಲ್ಲಿ ಸತ್ತು ಬದುಕಿ ಬಂದ ಜನ!

By Govindaraj S  |  First Published Aug 12, 2024, 8:57 PM IST

ಜಿಲ್ಲೆಯಲ್ಲಿ 2018 ರಿಂದಲೂ ಪ್ರತೀ ವರ್ಷ ಭೂಕುಸಿತ ನಡೆಯುತ್ತಲೇ ಇದೆ. ಆದರೆ ಭಾರತೀಯ ಭೂಗರ್ಭ ಶಾಸ್ತ್ರ ಇಲಾಖೆ ನೀಡಿರುವ ವರದಿಗೆ ಈ ಹಿಂದೆ ನಡೆದಿರುವ ಭೂಕುಸಿತ ಮತ್ತು ಪ್ರವಾಹದ ಸ್ಥಳಗಳ ಜನರು ಮತ್ತೆ ಬೆಚ್ಚಿ ಬೀಳುವಂತೆ ಮಾಡಿದೆ. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.12): ಜಿಲ್ಲೆಯಲ್ಲಿ 2018 ರಿಂದಲೂ ಪ್ರತೀ ವರ್ಷ ಭೂಕುಸಿತ ನಡೆಯುತ್ತಲೇ ಇದೆ. ಆದರೆ ಭಾರತೀಯ ಭೂಗರ್ಭ ಶಾಸ್ತ್ರ ಇಲಾಖೆ ನೀಡಿರುವ ವರದಿಗೆ ಈ ಹಿಂದೆ ನಡೆದಿರುವ ಭೂಕುಸಿತ ಮತ್ತು ಪ್ರವಾಹದ ಸ್ಥಳಗಳ ಜನರು ಮತ್ತೆ ಬೆಚ್ಚಿ ಬೀಳುವಂತೆ ಮಾಡಿದೆ. ಇದರಿಂದ ಸರ್ಕಾರದ ವಿರುದ್ಧ ಒಂದಷ್ಟು ಅಸಮಾಧಾನ ವ್ಯಕ್ತಪಡಿಸಿರುವ ಜನರು ನಮಗೆ ಶಾಶ್ವತ ಪರಿಹಾರ ಬೇಕು ಎಂದು ಆಗ್ರಹಿಸುತ್ತಿದಾರೆ. ಹೌದು ಕಳೆದ ಆರು ವರ್ಷಗಳಿಂದ ನಡೆದಿರುವ ಭೂಕುಸಿತ ಸ್ಥಳಗಳ ಪೈಕಿ 2019 ರಲ್ಲಿ ನಡೆದ ಭೂಕುಸಿತದಲ್ಲಿ ಸಿಲುಕಿ ಬದುಕಿರುವ ಜನರಂತು ಹೌಹಾರುತ್ತಿದ್ದಾರೆ. 

Latest Videos

undefined

ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ 2019 ರಲ್ಲಿ ಭೂಕುಸಿತವಾಗಿತ್ತು. ಇದರ ಪರಿಣಾಮವಾಗಿ ಐದು ಜನರು ಜೀವಂತ ಸಮಾಧಿಯಾಗಿದ್ದರು. ಇದೇ ಭೂಕುಸಿತದಲ್ಲಿ ಸಿಲುಕಿದ್ದ ಕೋರಂಗಾಲದ ಪ್ರಸಾದ್ ಅವರು ಸರ್ಕಾರ, ಜನ ಪ್ರತಿನಿಧಿಗಳು ಮತ್ತು ಜಿಲ್ಲಾಡಳಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಕೊಡಗು ಎಂದರೆ ಸಮೃದ್ಧಿಯಾದ ಜಿಲ್ಲೆ ಎಂಬ ಅಭಿಪ್ರಾಯವಿತ್ತು. ಆದರೆ 2018 ರಿಂದ ಜಿಲ್ಲೆಯಲ್ಲಿ ನಿರಂತರ ಭೂಕುಸಿತ ಆಗುತ್ತಿದೆ. ಅದರಲ್ಲೂ 2019 ರಲ್ಲಿ ನಮ್ಮ ಊರಿನಲ್ಲಿಯೇ ನಡೆದ ಭೂಕುಸಿತ ಐವರನ್ನು ಬಲಿ ಪಡೆಯಿತು. ಅದೇ ಭೂಕುಸಿತದಲ್ಲಿ ನಾನೂ ಸಿಲುಕಿದೆ. 

ಅದೃಷ್ಟವಶಾತ್ ನಾನು ಮತ್ತೆ ಬದುಕಿ ಬಂದೆ. ಈ ಘಟನೆಗಳನ್ನು ನೆನಪಿಸಿಕೊಂಡರೆ ಎದೆಯಲ್ಲಿ ನಡುಕ ಹುಟ್ಟುತ್ತದೆ. ಅದರಲ್ಲೂ ಆಗಸ್ಟ್ ತಿಂಗಳು ಬಂತೆಂದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕು ದೂಡುವಂತೆ ಆಗಿದೆ ಎಂದು ಕೋರಂಗಾಲದ ಪ್ರಸಾದ್ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪ್ರತೀ ವರ್ಷ ಮಳೆಗಾಲ ಆರಂಭವಾಗಿ ತೀವ್ರ ಮಳೆ ಸುರಿಯಲಾರಂಭಿಸಿತು ಎಂದರೆ ಸಾಕಷ್ಟು ಕುಟುಂಬಗಳನ್ನು ಕಾಳಜಿ ಕೇಂದ್ರ ಅಥವಾ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುತ್ತಾರೆ. ಮಳೆ ಕಡಿಮೆ ಆಯಿತ್ತೆಂದರೆ ಪುನಃ ನಮ್ಮನ್ನು ಮರೆತು ಬಿಡುತ್ತಾರೆ. ಇದರಿಂದ ನಮ್ಮ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. 

ರಾಜು ತಾಳಿಕೋಟೆ ಸೇರಿದಂತೆ ರಾಜ್ಯದ 6 ರಂಗಾಯಣಗಳಿಗೆ ನಿರ್ದೇಶಕರ ನೇಮಕ ಘೋಷಣೆ ಮಾಡಿದ ಸಚಿವ ತಂಗಡಗಿ

ಈ ಸ್ಥಿತಿಯನ್ನು ಇನ್ನೆಷ್ಟು ಕಾಲ ನಾವು ಅನುಭವಿಸಬೇಕು. 2024 ರಲ್ಲೂ ಭೂಕುಸಿತ ಆಗುತ್ತದೆ ಎಂದು ವಿಜ್ಞಾನಿಗಳ ತಂಡ ಜಿಲ್ಲೆಗೆ ಆಗಮಿತ್ತಿರುವುದೋನೋ ಒಳ್ಳೆಯದ್ದೇ. ಆದರೆ ಶಾಶ್ವತ ಪರಿಹಾರ ಒದಗಿಸಬೇಕು. ಎಲ್ಲೆಲ್ಲಿ ಭೂಕುಸಿತ ಪ್ರವಾಹ ಎದುರಾಗುವ ಸಾಧ್ಯತೆ ಇದೆಯೋ ಅಲ್ಲಿ ತಡೆಗೋಡೆ ಸೇರಿದಂತೆ ವಿವಿಧ ಶಾಶ್ವತ ಪರಿಹಾರಗಳನ್ನು ಹುಡುಕಬೇಕು ಎಂದು ಜನರು ಆಗ್ರಹಿಸುತ್ತಿದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಮತ್ತು ಪ್ರವಾಹ ಅಧ್ಯಯನಕ್ಕೆ ಆಗಮಿಸುತ್ತಿರುವ ತಂಡಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಲು ಜನರು ನಿರ್ಧರಿಸಿದ್ದಾರೆ.

click me!