ಮುಂಬರುವ ವಿಧಾನಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಮೂರು ಪಕ್ಷಗಳು ಸದ್ದಿಲ್ಲದೆ ಚುನಾವಣೆಗೆ ಸಜ್ಜಾಗುತ್ತಿದೆ. ಈಗಾಗಲೇ ಒಂದು ಸುತ್ತಿನ ವಲಸೆ ಪ್ರಕ್ರಿಯೆ ನಡೆದಿದ್ದು ಚುನಾವಣೆ ಘೋಷಣೆಯೊತ್ತಿಗೆ ಮತ್ತಷ್ಟು ಮಂದಿ ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗುವ ಸಾಧ್ಯತೆ ದಟ್ಟವಾಗಿ ಹಬ್ಬಿದೆ.
ಉಗಮ ಶ್ರೀನಿವಾಸ್
ತುಮಕೂರು : ಮುಂಬರುವ ವಿಧಾನಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಮೂರು ಪಕ್ಷಗಳು ಸದ್ದಿಲ್ಲದೆ ಚುನಾವಣೆಗೆ ಸಜ್ಜಾಗುತ್ತಿದೆ. ಈಗಾಗಲೇ ಒಂದು ಸುತ್ತಿನ ವಲಸೆ ಪ್ರಕ್ರಿಯೆ ನಡೆದಿದ್ದು ಚುನಾವಣೆ ಘೋಷಣೆಯೊತ್ತಿಗೆ ಮತ್ತಷ್ಟುಮಂದಿ ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗುವ ಸಾಧ್ಯತೆ ದಟ್ಟವಾಗಿ ಹಬ್ಬಿದೆ.
ಈಗಾಗಲೇ ನಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಬೆಮೆಲ್ ಕಾಂತರಾಜು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ತುರುವೇಕೆರೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹಾಗೆಯೇ ಕಾಂಗ್ರೆಸ್‌ನಲ್ಲಿದ್ದ ಮುದ್ದಹನುಮೇಗೌಡ ಕೂಡ ಪಕ್ಷ ತೊರೆದು ಸೇರ್ಪಡೆಯಾಗಿದ್ದಾರೆ. ಇನ್ನು ಕಿರಣ ಕುಮಾರ್ ಕೂಡ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋಗಿದ್ದಾರೆ. ಅಲ್ಲದೇ ಗುಬ್ಬಿಯ ಜೆಡಿಎಸ್ ಹಾಲಿ ಶಾಸಕ ಶ್ರೀನಿವಾಸ್ ಎಸ್.ಆರ್ ಕೂಡ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಅಲ್ಲದೇ ರಾಹುಲ್‌ಗಾಂಧಿ ಅವರ ಭಾರತ ಜೋಡೋ ಯಾತ್ರೆ ತುಮಕೂರು ಜಿಲ್ಲೆಗೆ ಬಂದ ವೇಳೆ ಖುದ್ದು ಯಾತ್ರೆಯಲ್ಲಿ ರಾಹುಲ್ ಗಾಂಧಿಯವರನ್ನು ಸ್ವಾಗತಿಸಿದ್ದರು.
ಇನ್ನು ಪಕ್ಷಾಂತರದಿಂದ ಆಂತರಿಕವಾಗಿ ಎಲ್ಲಾ ಪಕ್ಷದಲ್ಲೂ ಗೊಂದಲ ಮೂಡಿದೆ. ಮತ್ತಷ್ಟುಮಂದಿ ವಲಸೆ ಹೋಗುವ ಸಾಧ್ಯತೆ ಕೂಡ ಇದೆ. ಈಗಾಗಲೇ ಮೂರು ಪಕ್ಷಗಳಿಂದ ಒಂದೊಂದು ಸುತ್ತಿನ ಪ್ರಚಾರ ಕಾರ್ಯ ನಡೆದಿದೆ. ಜೆಡಿಎಸ್ ಪಕ್ಷದಿಂದ ಪಂಚರತ್ನ ಯಾತ್ರೆ ಮುಗಿದಿದೆ. ಈ ಪಂಚರತ್ನ ಯಾತ್ರೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚರಿಸಿದೆ. ಹಾಗೆಯೇ ಕಾಂಗ್ರೆಸ್ ಪ್ರಜಾದನಿ ಯಾತ್ರೆ ಕೂಡ ತುಮಕೂರಿನಲ್ಲಿ ಬಂದು ಹೋಗಿದೆ. ಉಳಿದಂತೆ ಬಿಜೆಪಿ ಸಮಾವೇಶಗಳನ್ನು ನಡೆಸಿವೆ. ಅಲ್ಲದೇ ಖುದ್ದು ಪ್ರಧಾನಿ ಮೋದಿ ಅವರೇ ಗುಬ್ಬಿಯ ಎಚ್‌ಎಎಲ್ ಉದ್ಘಾಟನೆಗೆ ಬಂದಿದ್ದರು.
ಮಾಚ್‌ರ್ ಮಧ್ಯ ಭಾಗದಲ್ಲಿ ಚುನಾವಣೆಗಳು ಘೋಷಣೆಯಾಗುವ ಸಂಭವವಿದೆ ಎನ್ನಲಾಗಿದ್ದು, ಬಿರುಸಿನ ಚಟುವಟಿಕೆಗಳು ಮೂರು ಪಕ್ಷದಲ್ಲಿ ನಡೆಯುತ್ತಿದೆ. ಪ್ರತಿ ದಿನ ಒಂದಲ್ಲ ಒಂದು ಸಭೆಗಳು, ಯಾರನ್ನು ಪಕ್ಷಕ್ಕೆ ತೆಗೆದುಕೊಳ್ಳುವ ಚಿಂತನೆ ನಡೆಯುತ್ತಿದೆ. ಇನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ವಲಸೆ ಪರ್ವಗಳು ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ನಡೆದಿದೆ. ಒಟ್ಟಾರೆಯಾಗಿ ಎಲ್ಲಾ ಪಕ್ಷಗಳು ಚುನಾವಣೆಗೆ ತಯಾರಿ ನಡೆಸುತ್ತಿದೆ.
ಇನ್ನು ಪಾವಗಡಕ್ಕೆ ಈಗಾಗಲೇ ಜನಾರ್ದನ ರೆಡ್ಡಿ ಅವರು ಬಂದು ಒಂದು ಸುತ್ತಿನ ಪ್ರಚಾರ ಮಾಡಿ ಮುಗಿಸಿದ್ದಾರೆ. ಉಳಿದಂತೆ ಆಮ್ ಆದ್ಮಿ ಪಕ್ಷ ಕೂಡ ತುಮಕೂರು ಜಿಲ್ಲೆಯಲ್ಲಿ ಸಭೆಗಳ ಮೂಲಕ ಸದ್ದು ಮಾಡುತ್ತಿದೆ. ಬಹುಶಃ ಮಾಚ್‌ರ್ ಮೊದಲ ವಾರದಿಂದ ಸಾಲು ಸಾಲು ಕಾರ್ಯಕ್ರಮಗಳು ನಡೆಯಲಿದೆ. ತುಮಕೂರಿಗೆ ಬಿಜೆಪಿಯಿಂದ ರಾಷ್ಟ್ರ ನಾಯಕರು ಬರುವ ಸಾಧ್ಯತೆ ಇದೆ. ಕಳೆದ ಒಂದು ತಿಂಗಳಿನಿಂದ ರಾಜಕೀಯ ಚಟುವಟಿಕೆಗಳು ನಿಧಾನಕ್ಕೆ ಆರಂಭವಾಗಿದ್ದು ಮಾಚ್‌ರ್‍ನಲ್ಲಿ ಉತ್ತುಂಗಕ್ಕೆ ತೆರಳಲಿದೆ. ಇನ್ನು ಏನಿದ್ದರೂ ಚುನಾವಣೆಯತ್ತ ಕಾರ್ಯಕರ್ತರು ಹಾಗೂ ಮುಖಂಡರು ಮುಖ ಮಾಡಿದ್ದಾರೆ. ತುಮಕೂರು ಜಿಲ್ಲೆಯಲ್ಲೂ ಕೂಡ ಎಲ್ಲಾ ಪಕ್ಷದವರು ಸಕ್ರಿಯವಾಗಿದ್ದಾರೆ.
ಒಂದೇ ದಿನ ಜಿಲ್ಲೆಗೆ
ಖರ್ಗೆ, ಬೊಮ್ಮಾಯಿ
ಈಗಾಗಲೇ ಬಿಜೆಪಿ ಮಾಚ್‌ರ್ ತಿಂಗಳಿನಲ್ಲಿ ಸಾಲು ಸಾಲು ಸಮಾವೇಶಗಳನ್ನು ಹಮ್ಮಿಕೊಂಡಿದೆ. ಇದೇ ಮಾಚ್‌ರ್ 5ರಂದು ತುಮಕೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಖುದ್ದು ಸಿಎಂ ಬೊಮ್ಮಾಯಿ ಬರುತ್ತಿದ್ದಾರೆ. ಇನ್ನು ಇದೇ ದಿನ ಕೊರಟಗೆರೆಗೆ ಮಲ್ಲಿಕಾರ್ಜುನ ಖರ್ಗೆ ಬರುತ್ತಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಬಿಜೆಪಿ ನಾಯಕರು ಬರುತ್ತಿದ್ದಾರೆ. ಸದ್ದಿಲ್ಲದೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಯಾರೆಲ್ಲಾ ಪಕ್ಷಾಂತರ ಮಾಡಿದ್ದಾರೆ?
ಕಾಂಗ್ರೆಸ್‌ನಿಂದ ಬಿಜೆಪಿಗೆ ಮಾಜಿ ಸಂಸದ ಮುದ್ದಹನುಮೇಗೌಡ
ಬಿಜೆಪಿಯಿಂದ ಕಾಂಗ್ರೆಸ್‌ಗೆ ಮಾಜಿ ಶಾಸಕ ಕಿರಣಕುಮಾರ್
ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬೆಮೆಲ್ ಕಾಂತರಾಜು
ಜೆಡಿಎಸ್‌ನ ಗುಬ್ಬಿ ಹಾಲಿ ಶಾಸಕ ಶ್ರೀನಿವಾಸ ಶೀಘ್ರ ಕಾಂಗ್ರೆಸ್‌ಗೆ