ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆ, ಬಲವರ್ಧನೆ ನೋಡಿಯೆ ವಿರೋಧ ಪಕ್ಷಗಳಿಗೆ ನಡುಕ ಉಂಟಾಗಿದೆ. ಪಕ್ಷ ಬಿಟ್ಟು ಹೋಗಿರುವ ಮುಖಂಡರುಗಳು ವಾಪಸ್ ಬರುವಂತೆ ವಿನಂತಿ ಮಾಡಿದ್ದೇನೆ. ಚುನಾವಣೆ ವೇಳೆಗೆ ಕೆ.ಬಿ.ಪಿಳ್ಳಪ್ಪ ಗರಡಿಯಲ್ಲಿ ಬೆಳೆದ ಪ್ರಮುಖರು ವಾಪಸ್ ಬರುವ ವಿಶ್ವಾಸವಿದೆಯೆಂದು ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಹೇಳಿದರು.
ಚಿಕ್ಕಬಳ್ಳಾಪುರ : ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆ, ಬಲವರ್ಧನೆ ನೋಡಿಯೆ ವಿರೋಧ ಪಕ್ಷಗಳಿಗೆ ನಡುಕ ಉಂಟಾಗಿದೆ. ಪಕ್ಷ ಬಿಟ್ಟು ಹೋಗಿರುವ ಮುಖಂಡರುಗಳು ವಾಪಸ್ ಬರುವಂತೆ ವಿನಂತಿ ಮಾಡಿದ್ದೇನೆ. ಚುನಾವಣೆ ವೇಳೆಗೆ ಕೆ.ಬಿ.ಪಿಳ್ಳಪ್ಪ ಗರಡಿಯಲ್ಲಿ ಬೆಳೆದ ಪ್ರಮುಖರು ವಾಪಸ್ ಬರುವ ವಿಶ್ವಾಸವಿದೆಯೆಂದು ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಹೇಳಿದರು.
ನಗರದ ವಾಪಸಂದ್ರದಲ್ಲಿರುವ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗುರುವಾರ ಮನೆ ಮನೆ ಭೇಟಿ ನೀಡಿ ಮತಯಾಚನೆ ನಡೆಸಿದ ಅವರು, ಕ್ಷೇತ್ರದಲ್ಲಿ ಅಭಿವೃದ್ದಿ ಶೂನ್ಯವಾಗಿದೆ. ಈ ಬಾರಿ ಜನರನ್ನು ಆಸೆ, ಅಮಿಷಗಳನ್ನೊಡ್ಡುವ ಮೂಲಕ ಮರಳು ಮಾಡಲು ಸಾಧ್ಯವಿಲ್ಲ ಎಂದರು.
ಚಿಕ್ಕಬಳ್ಳಾಪುರವನ್ನು ಸಿಂಗಾಪೂರ್ ಮಾಡುವುದು ಬೇಡ, ಕನಿಷ್ಠ ಒಂದು ನಗರಕ್ಕೆ ಬೇಕಾದ ಕನಿಷ್ಠ ಮೂಲ ಸೌಕರ್ಯ ಒದಗಿಸಿದರೆ ಸಾಕು ಎಂದು ಮಾಜಿ ಶಾಸಕರು ಆಗಿರುವ ಕೆ.ಪಿ.ಬಚ್ಚೇಗೌಡ ಸಿಂಗಪೂರ್ ಮಾಡುವ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದರು.
ಜೆಡಿಎಸ್ ಶಕ್ತಿ ತೋರಿಸುತ್ತೇವೆ
ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ನಮಗೆ ಕಾರ್ಯಕರ್ತರೇ ಆಸ್ತಿ, ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಶಕ್ತಿ ಏನು ಎಂಬುದನ್ನು ಮತದಾರರು ಚುನಾವಣೆ ಮೂಲಕ ತೋರಿಸಲಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು, ಉತ್ಸವಗಳ ಮೂಲಕ ಜನರನ್ನ ಮರಳು ಮಾಡಿ ರಾಜಕೀಯ ಲಾಭಕ್ಕೆ ಅನುವು ಮಾಡಿಕೊಳ್ಳುತ್ತಿದ್ದಾರೆಂದು ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಆರೋಪಿಸಿದರು.
ಮಂಡ್ಯದ ಮೂವರು ರೌಡಿಶೀಟರ್‌ಗಳು ಜೆಡಿಎಸ್ ಸೇರ್ಪಡೆ: ಶಾಲು ಹಾಕಿ ಸ್ವಾಗತಿಸಿದ ಶಾಸಕ ಡಿ.ಸಿ. ತಮ್ಮಣ್ಣ
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಜಿಪಂ ಮಾಜಿ ಸದಸ್ಯರಾದ ಕೆ.ಸಿ.ರಾಜಾಕಾಂತ…, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ.ಆರ್ ರೆಡ್ಡಿ, ಅಲ್ಪಸಂಖ್ಯಾತ ಸಮುದಾಯದ ಮುಖಂಡರಾದ ಸಯದ…, ಅಯುಬ…, ನಗರಸಭೆ ಉಪಾಧ್ಯಕ್ಷೆ ವೀಣಾರಾಮು, ಮಾಜಿ ನಗರಸಭಾ ಸದಸ್ಯ ಬಂಡ್ಲುಶ್ರೀನಿವಾಸ…, ಜೆಡಿಎಸ್ ಮಹಿಳಾ ಘಟಕದ ಅಣ್ಣಮ್ಮ, ಶಿಲ್ಪಾಗೌಡ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
JDSಗೆ ಮರಳಲು ನಾಯಕನ ತೀರ್ಮಾನ
ಬೆಂಗಳೂರು(ಫೆ.08): ಜೆಡಿಎಸ್ ತೊರೆದು ಬಿಜೆಪಿಗೆ ಹೋಗಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮತ್ತೆ ಜೆಡಿಎಸ್‌ಗೆ ಮರಳಲು ತೀರ್ಮಾನಿಸಿದ್ದು, ಈ ಸಂಬಂಧ ಬಿಡದಿಯ ತೋಟದ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಸಮಾಲೋಚನೆ ನಡೆಸಿದ್ದಾರೆ.
ಬಸವಕಲ್ಯಾಣ ಕ್ಷೇತ್ರದ ಮಾಜಿ ಶಾಸಕರಾಗಿರುವ ಮಲ್ಲಿಕಾರ್ಜುನ ಖೂಬಾ ಅವರು 2018ರ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ತೊರೆದು ಬಿಜೆಪಿಗೆ ಹೋಗಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸೋಲನುಭವಿಸಿದ್ದರು. ನಂತರ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಅವರಿಗೆ ಟಿಕೆಟ್ ನೀಡದೆ ಶರಣು ಸಲಗರಗೆ ಟಿಕೆಟ್ ನೀಡಲಾಗಿತ್ತು. ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಖೂಬಾ ಬೇಸರಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಮತ್ತೆ ಜೆಡಿಎಸ್‌ಗೆ ಬರಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸಾವರ್ಕರ್ ಬೇಕಾ?, ಟಿಪ್ಪು ಬೇಕಾ? ಜನರೇ ನಿರ್ಧರಿಸಲಿ: ಕಟೀಲ್
ಖೂಬಾ ಜೆಡಿಎಸ್‌ಗೆ ಮರಳಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹಮತ ಹೊಂದಿದ್ದಾರೆ ಎಂದು ಹೇಳಲಾಗಿದೆ. ಜೆಡಿಎಸ್ ಸೇರುವ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಖೂಬಾ ಹೇಳಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದಿದ್ದಾರೆ.