Karnataka BJP: ಅಭ್ಯರ್ಥಿ ಆಯ್ಕೆ ಅಧಿಕಾರ ಸಚಿವರಿಗಿಲ್ಲ

By Kannadaprabha News  |  First Published Dec 29, 2022, 6:00 AM IST

ಶಿಸ್ತಿನ ಪಕ್ಷವಾಗಿರುವ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯನ್ನು ಕೇಂದ್ರ ಮಂಡಳಿ ರಾಜ್ಯ ಘಟಕ ಇರುವಾಗ ಇಲ್ಲಿ ಬಲವಂತವಾಗಿ ಉಸ್ತುವಾರಿ ಸಚಿವ ಮುನಿರತ್ನಂ ಅಭ್ಯರ್ಥಿ ಬಗ್ಗೆ ಮಾಡಿರುವ ಘೋಷಣೆಗೆ ಮನ್ನಣೆ ನೀಡುವ ಅಗತ್ಯ ಇಲ್ಲ. ಈ ಬಗ್ಗೆ ಕಾರ‍್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಬಿಜೆಪಿ ಪಲಾನುಭವಿಗಳ ಪ್ರಕೋಷ್ಠದ ಸದಸ್ಯ ಹೂಡಿ ವಿಜಯಕುಮಾರ್‌ ಹೇಳಿದರು.


 ಮಾಲೂರು :  ಶಿಸ್ತಿನ ಪಕ್ಷವಾಗಿರುವ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯನ್ನು ಕೇಂದ್ರ ಮಂಡಳಿ ರಾಜ್ಯ ಘಟಕ ಇರುವಾಗ ಇಲ್ಲಿ ಬಲವಂತವಾಗಿ ಉಸ್ತುವಾರಿ ಸಚಿವ ಮುನಿರತ್ನಂ ಅಭ್ಯರ್ಥಿ ಬಗ್ಗೆ ಮಾಡಿರುವ ಘೋಷಣೆಗೆ ಮನ್ನಣೆ ನೀಡುವ ಅಗತ್ಯ ಇಲ್ಲ. ಈ ಬಗ್ಗೆ ಕಾರ‍್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಬಿಜೆಪಿ ಪಲಾನುಭವಿಗಳ ಪ್ರಕೋಷ್ಠದ ಸದಸ್ಯ ಹೂಡಿ ವಿಜಯಕುಮಾರ್‌ ಹೇಳಿದರು.

ಅವರು ಇಲ್ಲಿನ ಮಡಿವಾಳ ಗೇಟ್‌ ಬಳಿಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ (bjp)  ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡುತ್ತ, (Election)  ವೇಳೆ ಬಂದಿರುವ ಮಾಜಿ ಶಾಸಕ ಮಂಜುನಾಥ್‌ ಗೌಡಗೆ ಪಕ್ಷದ ಟಿಕೆಟ್‌ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಘೋಷಣೆ ಮಾಡಿರುವುದು ಪ್ರಾಮಾಣಿಕ ಕಾರ‍್ಯಕರ್ತರಲ್ಲಿ ಗೊಂದಲ ಮೂಡಿಸಿದೆ ಎಂದರು.

Tap to resize

Latest Videos

ಪಕ್ಷ ಸಂಘಟನೆ ಮಾಡದೆ ಕೇವಲ ಅಧಿಕಾರಕ್ಕಾಗಿ ಬರುವವರಿಗೆ ಬಿಜೆಪಿ ಮಣೆ ಹಾಸುವುದಿಲ್ಲ. ಕಳೆದ ನಾಸ್ಕೈದು ವರ್ಷಗಳಿಂದ ತಾಲೂಕಿನಲ್ಲಿ ಪಕ್ಷವನ್ನು ಗಟ್ಟಿಯಾಗಿ ಸಂಘಟಿಸಿ ಬೆಳೆಸಿರುವ ಕಾರ‍್ಯಕರ್ತರು ನಮ್ಮ ಹಿರಿಯ ಮುಖಂಡರ ಈ ನಡೆಯಿಂದ ಬೇಸರಗೊಳುವುದು ಬೇಡ. ಏಕೆಂದರೆ ಬಿಜೆಪಿ ಕಾರ‍್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಪಕ್ಷವಾಗಿದ್ದು, ವಲಸೆ ನಾಯಕನಿಗೆ ಟಿಕೆಟ್‌ ನೀಡಿದರೆ ಪ್ರಯೋಜನವೇನು ಎಂದರು.

ಕೇವಲ ಉಸ್ತುವಾರಿ ಸಚಿವ ಅಥವಾ ಸಂಸದರೂಡನೆ ಜತೆ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ವಲಸೆ ನಾಯಕರಿಗೆ ತಮ್ಮ ಕ್ಷೇತ್ರದಲ್ಲಿ ಬೂತ್‌ ಮಟ್ಟದಲ್ಲೇ ಪಕ್ಷವನ್ನು ಸಂಘಟಿಸಲಾಗದ ಜಿಲ್ಲಾಧ್ಯಕ್ಷರು ಸಾಥ್‌ ನೀಡಿರುವುದು ಸರಿಯಲ್ಲಿ. ನಮ್ಮ ಹೋರಾಟವು ವಿರೋಧ ಪಕ್ಷದವರ ಜತೆ ಮಾತ್ರ ಇದ್ದು, ಅಭ್ಯರ್ಥಿ ಘೋಷಣೆ ಮಾಡಿರುವ ನಮ್ಮ ಸ್ವಪಕ್ಷದ ನಾಯಕರ ವಿರುದ್ಧ ಅಲ್ಲ ಎಂದರು.

ಹಿರಿಯ ಬಿಜೆಪಿ ಮುಖಂಡ ಹನುಮಂತಪ್ಪ,ದೇವರಾಜ ರೆಡ್ಡಿ ,ರಾಜರಾಂ.ಜಿ.ಪಂ.ಮಾಜಿ ಉಪಾಧ್ಯಕ್ಷ ಪಿ.ನಾರಾಯಣಸ್ವಾಮಿ, ನೊಟವೆ ವೆಂಕಟೇಶ್‌ ಗೌಡ, ಹರೀಶ್‌ ಗೌಎಂ.ರಾಮಮೂರ್ತಿ ಮಾತನಾಡಿ ಸಂಸದರು ಹಾಗೂ ಉಸ್ತುವಾರಿ ಸಚಿವರು ಪಕ್ಷದ ಮುಖಂಡರು ಹಾಗೂ ಕಾರ‍್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.

 

ಹಲವು ಮುಖಂಡರು ಜೆಡಿಎಸ್ ಸೇರ್ಪಡೆ

ಪಿರಿಯಾಪಟ್ಟಣ (ಡಿ.23):  ಸಿದ್ದರಾಮಯ್ಯನವರ ನಾಮಬಲದ ಮೇಲೆ ಚುನಾವಣೆ ಗೆಲ್ಲುತ್ತಿದ್ದ ಮಾಜಿ ಶಾಸಕರು ಬಳಿಕ ಅಭಿವೃದ್ಧಿ ನಿರ್ಲಕ್ಷಿಸುತ್ತಿದ್ದರು ಎಂದು ಶಾಸಕ ಕೆ. ಮಹದೇವ್‌ ಆರೋಪಿಸಿದರು.

ತಾಲೂಕಿನ ಆರ್‌.ಡಿ. ಕೊಪ್ಪಲು ಗ್ರಾಮದ ಮುಖಂಡರನ್ನು ಜೆಡಿಎಸ್‌ಗೆ ಬರಮಾಡಿಕೊಂಡು ಅವರು ಮಾತನಾಡಿದರು.

ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸೋತರು ತಾಲೂಕಿನ ನಿಷ್ಠಾವಂತ ಜೆಡಿಎಸ್‌ ಕಾರ್ಯಕರ್ತರು ನನ್ನ ಕೈಬಿಡದೆ ಪಕ್ಷ ಸಂಘಟನೆಗೆ ಒತ್ತು ನೀಡಿ ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆಲ್ಲಿಸಿ ಶಾಸಕನಾಗಿ ಆಯ್ಕೆ ಮಾಡಿದರು, ಅವರ ಪರಿಶ್ರಮಕ್ಕೆ ಅಗೌರವ ಆಗದಂತೆ ತಾಲೂಕಿನ ಪ್ರತಿಯೊಂದು ಹಳ್ಳಿಗೂ ಪಕ್ಷಾತೀತ ಜಾತ್ಯತೀತವಾಗಿ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸಿದ್ದೇನೆ, ಕಾರ್ಯಕರ್ತರು ಪಕ್ಷದ ಆಸ್ತಿ ಅವರು ಚುನಾವಣೆ ವೇಳೆ ಮತದಾರರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದ್ದೇನೆ, ಚುನಾವಣೆ ಸಂದರ್ಭ ಕಾರ್ಯಕರ್ತರು ವೈಮನಸ್ಸು ಬಿಟ್ಟು ಸಂಘಟಿತರಾಗಿ ಮತ್ತೊಮ್ಮೆ ತಾಲೂಕಿನಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವಂತೆ ಕೋರಿ ಪಕ್ಷ ಸೇರ್ಪಡೆಯಾದವರನ್ನು ಸ್ವಾಗತಿಸಿದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರಿಗೆ ಸಾಲದಿಂದ ಮುಕ್ತಿ: ಸಿ.ಎಂ.ಇಬ್ರಾಹಿಂ

ಜೆಡಿಎಸ್‌ ಕಾರ್ಯಾಧ್ಯಕ್ಷ ಆರ್‌.ಎಲ್ ಮಣಿ ಮಾತನಾಡಿದರು. ಗ್ರಾಮದ ಚಂದ್ರೇಗೌಡ, ಜಯರಾಮ…, ಸ್ವಾಮಿ, ಗೌರೀಶ್‌, ಗಂಗಾಧರ್‌, ಪಾಪಣ್ಣ, ಸಂತೋಷ್‌, ಪ್ರಕಾಶ್‌ ಸೇರಿದಂತೆ ಹಲವರು ಶಾಸಕರ ಸಮ್ಮುಖ ಜೆಡಿಎಸ್‌ ಸೇರಿದರು.  ಜೆಡಿಎಸ್‌ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಗ್ರಾಪಂ ಸದಸ್ಯ ಕುಮಾರ್‌, ಮುಖಂಡರಾದ ರವಿ, ಕೆಂಡಗಣ್ಣ, ನಾಗಪ್ಪ, ಮಹದೇವ್‌, ಮಲ್ಲೇಶ್‌, ಹೊನ್ನಾಳಿಗೌಡ, ಗ್ರಾಮಸ್ಥರು ಇದ್ದರು.

click me!