ಕೋವಿಡ್‌ ಅಲೆ ಎದುರಿಸಲು ಆರೋಗ್ಯ ಇಲಾಖೆ ಸಜ್ಜು

By Kannadaprabha News  |  First Published Dec 31, 2022, 6:25 AM IST

ತಾಲೂಕಿನಲ್ಲಿ ಈವರೆಗೆ ಕೋವಿಡ್‌ ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್‌ ನಾಲ್ಕನೇ ಅಲೆಯನ್ನು ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್‌ ತಿಳಿಸಿದರು.


 ಹುಣಸೂರು (ಡಿ. 31):  ತಾಲೂಕಿನಲ್ಲಿ ಈವರೆಗೆ ಕೋವಿಡ್‌ ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್‌ ನಾಲ್ಕನೇ ಅಲೆಯನ್ನು ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್‌ ತಿಳಿಸಿದರು.

ಹುಣಸೂರು ತಾಪಂ ಸಭಾಂಗಣದಲ್ಲಿ ತಾಪಂ ಆಡಳಿತಾಧಿಕಾರಿ ಎಚ್‌.ಇ. ನಂದ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಕೋವಿಡ್‌ (Covid)  ರೂಪಾಂತರಿ ತಳಿ(ಬಿಎಫ್‌.7)ಯ ಪ್ರಭಾವ ಆರಂಭಗೊಂಡಿದೆ. ಆದರೆ ಈವರೆಗೆ ಹುಣಸೂರಿನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದರು.

Latest Videos

undefined

ಜ್ವರ, ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವವರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೋಂಕು ಪತ್ತೆಯಾದಲ್ಲಿ ಅದಕ್ಕೆ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಡಿ. ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯಲ್ಲಿ 28 ಆಕ್ಸಿಜನೇಟೆಡ್‌ ಬೆಡ್‌, 5 ವೆಂಟಿಲೇಟರ್‌, 48 ಆಕ್ಸಿಜನ್‌ ಕಾನ್ಸೆಂಟ್ರೇಟರ್‌ ಹೊಂದಲಾಗಿದೆ. ಎರಡು ಆಕ್ಸಿಜನ್‌ ಉತ್ಪಾದನಾ ಘಟಕಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ. ವೆಂಕಟೇಶ್‌ ಮಾತನಾಡಿ, ತಾಲೂಕಿನಲ್ಲಿ 4142 ಮಂದಿ ರಾಗಿ ಬೆಳೆಯ ಬೆಂಬಲ ಬೆಲೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಭತ್ತಕ್ಕಾಗಿ 411 ಮಂದಿ ರೈತರು ನೋಂದಾಯಿಸಿಕೊಂಡಿದ್ದು, ನೋಂದಣಿ ಪ್ರಕ್ರಿಯೆ ಮುಂದುವರೆದಿದೆ ಎಂದರು.

ತಾಲೂಕಿನ ಬಿಳಿಕೆರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಸಂಪ್‌ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದ್ದು, ಸೆಂಟ್ರಿಂಗ್‌ ಕೂಡ ತೆರವುಗೊಳಿಸಿಲ್ಲ. ಅಲ್ಲದೇ ಸಂಪಿನೊಳಗೆ ನೀರಿನಲ್ಲಿ ಹುಳುಗಳು ಕಾಣಿಸಿಕೊಂಡಿವೆ. ತಿಂಗಳ ಹಿಂದೆ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರವಾಣಿ ಮೂಲಕ ನಿಮಗೆ ಮಾಹಿತಿ ಕೋರಿದ್ದೆ. ಇಂದಿಗೂ ಮಾಹಿತಿ ನೀಡಿಲ್ಲ ಯಾಕೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹರೀಶ್‌ ಅವರನ್ನು ಆಡಳಿತಾಧಿಕಾರಿ ತರಾಟೆಗೆ ತೆಗೆದುಕೊಂಡರು.

ಕಾಮಗಾರಿ ನಡಸಿದವರಾರ‍ಯರು ಎನ್ನುವುದು ತಿಳಿಯದು ಎಂದರೆ ಹೇಗೆ? ಸರ್ಕಾರದ ಹಣಕ್ಕೆ ಹೊಣೆಯಾರು? ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಸಭೆಯಲ್ಲಿದ್ದ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದಾಗಿ ತಿಳಿಸಿದರು.

ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾರ್ಥಿವೇತನ ಪಡೆಯುವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು.

ತಾಪಂ ಇಒ ಬಿ.ಕೆ. ಮನು, ಅಧಿಕಾರಿಗಳಾದ ಮೋಹನ್‌ಕುಮಾರ್‌, ಬಸವರಾಜು, ಸಿಡಿಪಿಒ ರಶ್ಮಿ, ಸೆಸ್‌್ಕ ಎಇಇ ಸಿದ್ದಪ್ಪ ಮೊದಲಾದವರು ಇದ್ದರು.

ಚೀನಾ ವರದಿ ಲೀಕ್

ಬೀಜಿಂಗ್(ಡಿ.24): ಚೀನಾದಲ್ಲಿ ಕೊರೋನಾ ಭಯಾಕತೆಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಪ್ರತಿ ದಿನ ಕೋವಿಡ್ ಪ್ರಕರಣ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಸಾವಿನ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ. ಅಂತ್ಯಸಂಸ್ಕಾರಕ್ಕೆ ಕನಿಷ್ಠ 3 ರಿಂದ 4 ದಿನ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಇತ್ತ ಆಸ್ಪತ್ರೆ, ಬೆಡ್ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಆದರೂ ಚೀನಾ ಮಾತ್ರ ಕೋವಿಡ್ ಕುರಿತು ಯಾವುದೇ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಚೀನಾದಲ್ಲಿ ಕೋವಿಡ್ ಸೋಂಕು ಹರಡುತ್ತಿರುವ ವೇಗದ ಕುರಿತು ಚೀನಾ ಮೌನ ವಹಿಸಿದೆ. ಇದರ ನಡುವೆ ಚೀನಾದ ರಹಸ್ಯ ವರದಿ ಬಿಡುಗಡೆಯಾಗಿದೆ.  ಕಳೆದ 20 ದಿನದಲ್ಲಿ 250 ಮಿಲಿಯನ್ ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಅನ್ನೋ ಭಯಾನಕ ವರದಿ ಇದೀಗ ಲೀಕ್ ಆಗಿದೆ.

ರೇಡಿಯಾ ಫ್ರಿ ಏಷ್ಯಾ ಈ ಮಾಹಿತಿ ಬಹಿರಂಗ ಪಡಿಸಿದೆ. ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ 20 ನಿಮಿಷ ನಡೆಸಿದ ರಹಸ್ಯ ಸಭೆಯ ಮಾಹಿತಿ ಬಹಿರಂಗವಾಗಿದೆ. ಈ ಸಭೆಯಲ್ಲಿ ಚೀನಾದ ಪರಿಸ್ತಿತಿ ಕುರಿತ ವರದಿಯನ್ನು ಈ ಸಭೆಯಲ್ಲಿ ಮಂಡಿಸಲಾಗಿದೆ. ಇದೇ ವರದಿ ಇದೀಗ ಸಾಮಾಜಿಕ ಜಾಲತಾದಲ್ಲಿ ಹರಿದಾಡುತ್ತಿದೆ. ಈ ವರದಿಯಲ್ಲಿ ಡಿಸೆಂಬರ್ 1 ರಿಂದ 20 ಅವದಿಯಲ್ಲಿ ಅಂದರೆ ಕಳೆದ 20 ದಿನದಲ್ಲಿ 248 ಮಿಲಿಯನ್ ಚೀನಾ ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಅಂದರೆ ಚೀನಾದ 17.65 ರಷ್ಟು ಮಂದಿಗೆ ಸೋಂಕು ತಗುಲಿದೆ.

ಮತ್ತೆ ಕೋವಿಡ್? ಈ ಭಾರತೀಯ ಸಂಪ್ರದಾಯಗಳನ್ನು ರೂಢಿಸಿಕೊಳ್ಳಿ

ರಹಸ್ಯ ವರದಿ ಬಹಿರಂಗಗೊಂಡ ಬೆನ್ನಲ್ಲೇ ಭಾರಿ ಚರ್ಚೆಯಾಗುತ್ತಿದೆ. ಚೀನಾ ಅಧಿಕಾರಿಗಳು ಡಿಸೆಂಬರ್ 1 ರಿಂದ 20 ರ ಅವಧಿಯಲ್ಲಿ 37 ಮಿಲಿಯನ್ ಮಂದಿಗೆ ಕೋವಿಡ್ ಸೋಂಕು ಆವರಿಸಿಕೊಂಡಿದೆ ಎಂದು ವರದಿ ನೀಡಿದ್ದಾರೆ. ಇದು ಜಗತ್ತಿಗೆ ಚೀನಾ ತೋರಿಸಿದ ವರದಿಯಾಗಿದೆ. ಆದರೆ ಸರ್ಕಾರ ಸಲ್ಲಿಸಿರುವ ಅಸಲಿ ವರದಿಯಲ್ಲಿ 248 ಮಂದಿ ಕೋವಿಡ್ ತುತ್ತಾಗಿರುವುದಾಗಿ ದಾಖಲಾಗಿದೆ.

click me!