ರಾಮನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳ ಸ್ಥಾಪನೆ ಕನಸು ಭಗ್ನ!

By Kannadaprabha News  |  First Published Jul 10, 2024, 12:43 PM IST

ಜಿಲ್ಲಾ ಕೇಂದ್ರ ರಾಮನಗರ ಮತ್ತು ಕನಕಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಸು ಸದ್ಯಕ್ಕೆ ಭಗ್ನಗೊಂಡಿದೆ.


  ಎಂ.ಅಫ್ರೋಜ್ ಖಾನ್

 ರಾಮನಗರ :  ಜಿಲ್ಲಾ ಕೇಂದ್ರ ರಾಮನಗರ ಮತ್ತು ಕನಕಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಸು ಸದ್ಯಕ್ಕೆ ಭಗ್ನಗೊಂಡಿದೆ.

Tap to resize

Latest Videos

ರಾಮನಗರ ಮತ್ತು ಕನಕಪುರದಲ್ಲಿ ಪ್ರತ್ಯೇಕ ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನ್ಯಾಷನಲ್ ಮೆಡಿಕಲ್ ಕಮಿಷನ್ ಗೆ ಅರ್ಜಿ ಸಲ್ಲಿಸಿತ್ತು. ಸಿಬ್ಬಂದಿ, ಮೂಲಸೌಕರ್ಯದ ಕೊರತೆ ಹಾಗೂ ಇತರೆ ತಾಂತ್ರಿಕ ಕಾರಣಗಳಿಂದಾಗಿ ಆ ಅರ್ಜಿಗಳು ತಿರಸ್ಕೃತಗೊಂಡಿವೆ.

ದ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿಯ ಕಟ್ಟಡ ನಿರ್ಮಾಣದ ಭೂಮಿಯ ವ್ಯಾಜ್ಯ ಇನ್ನೂ ನ್ಯಾಯಾಲಯದ ಅಂಗಳದಲ್ಲಿದೆ. ಇದು ಒಂದು ಕಡೆಯಾದರೆ ಜಿಲ್ಲಾ ಕೇಂದ್ರ ರಾಮನಗರ ಮತ್ತು ಕನಕಪುರದಲ್ಲಿ ಪ್ರತ್ಯೇಕ ಮೆಡಿಕಲ್ ಕಾಲೇಜು ಸ್ಥಾಪಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ದೇಶಿಸಿದ್ದರು. ಇದಕ್ಕೆ ಪೂರಕವಾದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ರಾಜ್ಯಸರ್ಕಾರದ ಮೂಲಕ ನ್ಯಾಷನಲ್ ಮೆಡಿಕಲ್ ಕಮಿಷನ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಸದ್ಯಕ್ಕೆ ಅರ್ಜಿ ತಿರಸ್ಕೃತಗೊಂಡಿದ್ದು, ಬಹುಶಃ ಮುಂದಿನ ವರ್ಷದಲ್ಲಿ ಎರಡೂ ಮೆಡಿಕಲ್ ಕಾಲೇಜುಗಳಿಗೆ ಅನುಮತಿ ದೊರೆಯಬಹುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಎರಡೂ ಮೆಡಿಕಲ್ ಕಾಲೇಜುಗಳ ಅರ್ಜಿ ತಿರಸ್ಕೃತ:  

2024-25ನೇ ಸಾಲಿನಲ್ಲಿ ದೇಶದಲ್ಲಿ ಹೊಸ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ನ್ಯಾಷನಲ್ ಮೆಡಿಕಲ್ ಕಮಿಷನ್ ಅರ್ಜಿಗಳನ್ನು ಆಹ್ವಾನಿಸಿತ್ತು. ದೇಶಾದ್ಯಂತ ಒಟ್ಟು 113 ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಕರ್ನಾಟಕದಲ್ಲಿ ರಾಮನಗರ ಮತ್ತು ಕನಕಪುರದಲ್ಲಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಉದ್ದೇಶಿಸಿ ರಾಜ್ಯ ಸರ್ಕಾರದಿಂದ ಎರಡು ಮತ್ತು ಖಾಸಗಿ ಮೂರು ಮೆಡಿಕಲ್ ಕಾಲೇಜುಗಳಿಗಾಗಿ ಅರ್ಜಿಗಳು ಸಲ್ಲಿಕೆಯಾಗಿತ್ತು.

ಈ ಪೈಕಿ ನ್ಯಾಷನಲ್ ಮೆಡಿಕಲ್ ಕಮಿಷನ್ ರಾಮನಗರ ಮತ್ತು ಕನಕಪುರದ ಮೆಡಿಕಲ್ ಕಾಲೇಜುಗಳ ಅರ್ಜಿಗಳನ್ನು ತಾಂತ್ರಿಕ ಕಾರಣಗಳ ನೆಪವೊಡ್ಡಿ ತಿರಸ್ಕರಿಸಿದೆ. ಆ ತಾಂತ್ರಿಕ ಕಾರಣಗಳು ಸದ್ಯಕ್ಕೆ ಸ್ಪಷ್ಟವಾಗಿ ತಿಳಿದು ಬಂದಿಲ್ಲವಾದರೂ, ಸದ್ಯಕ್ಕೆ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಅಗತ್ಯ ಮೂಲ ಸೌಕರ್ಯಗಳು, ಬೋಧನಾ ಸಿಬ್ಬಂದಿ ವಿಚಾರದಲ್ಲಿ ಸ್ಥಾಪಿತ ನಿಯಮಗಳು ಮತ್ತು ನಿಬಂಧನೆಗಳನ್ನು ಪೂರೈಸಿಲ್ಲ ಎಂದು ಗೊತ್ತಾಗಿದೆ.

 ಮೂಲಸೌಕರ್ಯಗಳಿಗೆ ಕೊರತೆ ಇಲ್ಲ!: 

ಜಿಲ್ಲಾ ಕೇಂದ್ರ ರಾಮನಗರದಲ್ಲಿ ಆರಂಭವಾಗಿರುವ ಜಿಲ್ಲಾಸ್ಪತ್ರೆಯನ್ನೇ ನೂತನ ಮೆಡಿಕಲ್ ಕಾಲೇಜನ್ನಾಗಿ ಪರಿವರ್ತಿಸುವ ಬಗ್ಗೆ ಸರ್ಕಾರ ಅರ್ಜಿ ಸಲ್ಲಿಸಿತ್ತು. ಇದು 500 ಹಾಸಿಗೆಗಳ ಆಸ್ಪತ್ರೆಯಾಗಿದೆ. ಮೆಡಿಕಲ್ ಕಾಲೇಜು ಆರಂಭವಾಗಲು ಕನಿಷ್ಠ 350 ಹಾಸಿಗೆಗಳ ಹಾಲಿ ನಡೆಯುತ್ತಿರುವ ಆಸ್ಪತ್ರೆ ಇರಬೇಕು ಎಂಬ ಎನ್‌ಎಂಸಿ ನಿಯಮ ಪಾಲನೆಯಾಗಿದೆ.

ಇನ್ನು ಕನಕಪುರದಲ್ಲಿ ಸರ್ಕಾರದ ವತಿಯಿಂದ ಎರಡು ಬೃಹತ್ ಆಸ್ಪತ್ರೆಗಳು ಸ್ಥಾಪನೆಯಾಗಿವೆ. ಅಲ್ಲಿಯೂ ಮೂಲ ಸೌಕರ್ಯಗಳು ಕೊರತೆ ಇಲ್ಲ ಎಂದು ಗೊತ್ತಾಗಿದೆ. ಆದರೆ, ಎರಡೂ ಕಾಲೇಜುಗಳಿಗೆ ಅಗತ್ಯವಿರುವ ಬೋಧಕ ಸಿಬ್ಬಂದಿ, ಆಡಳಿತ ಮತ್ತು ಇತರೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಇನ್ನು ಆರಂಭಿಕ ಹಂತದಲ್ಲಿದೆ. ಹೀಗಾಗಿ ಸದ್ಯಕ್ಕೆ ಎರಡೂ ಅರ್ಜಿಗಳನ್ನು ಮಾನ್ಯ ಮಾಡಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಎಲ್ಲ ಕೊರತೆಗಳನ್ನು ನೀಗಿಸಿ ರಾಜ್ಯ ಸರ್ಕಾರ ಪುನಃ ಅರ್ಜಿ ಸಲ್ಲಿಸಿದರೆ ಮುಂದಿನ ವರ್ಷ ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಮತ್ತು ಕನಕಪುರ ನಗರದಲ್ಲಿ ಮೆಡಿಕಲ್ ಕಾಲೇಜುಗಳ ಆರಂಭಕ್ಕೆ ಅನುಮತಿ ದೊರೆಯಬಹುದು ಎನ್ನಲಾಗಿದೆ.

 ನಿಯಮಗಳು ಏನು ಹೇಳುತ್ತವೆ? 

2020ರ ಅಕ್ಟೋಬರ್‌ನಲ್ಲಿ ನ್ಯಾಷನಲ್ ಮೆಡಿಕಲ್ ಕಮಿಷನ್ ಹೊರಡಿಸಿರುವ ಆದೇಶದಲ್ಲಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಹಲವಾರು ನಿಯಮಗಳಿಗೆ ತಿದ್ದುಪಡಿ ಮಾಡಿದೆ. ಮೆಡಿಕಲ್ ಕಾಲೇಜು ಸ್ಥಾಪಿಸಲು ಕನಿಷ್ಠ 2 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಕನಿಷ್ಠ 300 ಹಾಸಿಗೆಗಳ ಆಸ್ಪತ್ರೆ ಇರಬೇಕು. ವೈದ್ಯಕೀಯ ಶಾಸ್ತ್ರದ ಹಲವಾರು ವಿಭಾಗಗಳಲ್ಲಿ ಬೋಧನೆಗೆ ಅವಕಾಶವಾಗುವಂತೆ ಅವಶ್ಯಕ ಸಂಖ್ಯೆಯ ಕೊಠಡಿಗಳು ಲಭ್ಯವಿರಬೇಕು. ಗ್ರಂಥಾಲಯ, ಗಣಕ ಯಂತ್ರಗಳ ಕೊಠಡಿ ಹೀಗೆ ಹಲವಾರು ಮೂಲ ಸೌಕರ್ಯಗಳು ಸ್ಥಾಪಿತವಾಗಿರಬೇಕು. ವಿದ್ಯಾರ್ಥಿಗಳ ವಾಸಕ್ಕೆ ಅನುಕೂಲಗಳನ್ನು ಕಲ್ಪಿಸಬೇಕು. ಬೋಧನೆಗೆ ಅನುಕೂಲವಾಗುವಂತೆ ಬೋಧಕ ವರ್ಗ ಮತ್ತು ಆಡಳಿತ ಸಿಬ್ಬಂದಿಯ ಲಭ್ಯತೆಯನ್ನು ಅರ್ಜಿಯೊಂದಿಗೆ ತಿಳಿಸಬೇಕು.

ರಾಮನಗರ ಮತ್ತು ಕನಕಪುರ ಮೆಡಿಕಲ್ ಕಾಲೇಜುಗಳ ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಗೆ ನ್ಯಾಷನಲ್ ಮೆಡಿಕಲ್ ಕಮಿಷನ್ ಮಾನ್ಯ ಮಾಡಿಲ್ಲ. ಕೊರತೆಗಳನ್ನು ನೀಗಿಸಿ ಪುನಃ ಅರ್ಜಿ ಸಲ್ಲಿಸಿದರೆ ಬಹುಶಃ ಅನುಮತಿ ದೊರೆಯಬಹುದು. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಹೆಚ್ಚು ಗಮನಹರಿಸಬೇಕು.

 ಡಾ.ಸಿ.ಎನ್.ಮಂಜುನಾಥ್, ಸಂಸದರು 

ರಾಮನಗರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ತರಬೇಕು ಎಂಬುದು ನಮ್ಮೆಲ್ಲರ ಬೇಡಿಕೆಯಾಗಿತ್ತು. ಈ ವಿಚಾರವನ್ನು ಬಜೆಟ್ ನಲ್ಲೂ ಸೇರಿಸಲಾಗಿತ್ತು. ಸಿಬ್ಬಂದಿ ಕೊರತೆ ಎಂದು ಅನುಮತಿ ನೀಡಿಲ್ಲ ಎಂಬ ವಿಚಾರ ತಿಳಿಸಿದ್ದು, ಈ ಬಗ್ಗೆ ಗಮನಹರಿಸುತ್ತೇವೆ.

 ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ  

click me!