‘ಆಕ್ಸಿಜನ್‌ ಸಿಲೆಂಡರ್‌ ಹೊತ್ತು ತಿರುಗುವ ದಿನ ದೂರವಿಲ್ಲ’

By Kannadaprabha News  |  First Published Jul 12, 2023, 6:08 AM IST

ಪರಿಸರ ನಾಶ ಮಾಡುವ ಹುನ್ನಾರ ಇದೇ ಪ್ರವೃತ್ತಿಯಲ್ಲಿ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ಆಕ್ಸಿಜನ್‌ ಸಿಲೆಂಡರ್‌ಗಳನ್ನು ಹೊತ್ತು ತಿರುಗುವ ದಿನಗಳು ದೂರವಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.


  ತುರುವೇಕೆರೆ :ಪರಿಸರ ನಾಶ ಮಾಡುವ ಹುನ್ನಾರ ಇದೇ ಪ್ರವೃತ್ತಿಯಲ್ಲಿ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ಆಕ್ಸಿಜನ್‌ ಸಿಲೆಂಡರ್‌ಗಳನ್ನು ಹೊತ್ತು ತಿರುಗುವ ದಿನಗಳು ದೂರವಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಗುಡ್ಡೇನಹಳ್ಳಿಯ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಅರಣ್ಯ ಇಲಾಖೆಯ ಚಿಕ್ಕನಾಯಕನಹಳ್ಳಿ ಪ್ರಾದೇಶಿಕ ವಲಯ, ತುರುವೇಕೆರೆಯ ಸಾಮಾಜಿಕ ವಲಯ ಹಾಗೂ ಸರ್ಕಾರಿ ಪದವಿ ಕಾಲೇಜಿನ ಆಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿ ವರ್ಷ ಸರ್ಕಾರದಿಂದ ಕೋಟಿ ಕೋಟಿ ಲೆಕ್ಕದಲ್ಲಿ ಸಸಿಗಳನ್ನು ನಡೆಸುವ ಕಾರ್ಯ ನಡೆಯುತ್ತಲೇ ಇದೆ. ಸಸಿಗಳನ್ನು ನೆಟ್ಟಕೆಲವೇ ದಿನಗಳಲ್ಲಿ ಅವುಗಳು ಹಾಳಾಗುತ್ತಿವೆ. ಜನರು ಇದೊಂದು ಸರ್ಕಾರಿ ಕಾರ್ಯಕ್ರಮ ಎಂತಲೇ ಭಾವಿಸಿದ್ದಾರೆ. ನೆಟ್ಟಸಸಿಗೆ ನೀರೆರುವ ಪ್ರಯತ್ನವನ್ನೂ ಮಾಡದಿರುವುದು ದುಃಖದ ಸಂಗತಿ. ಎಲ್ಲವನ್ನೂ ಸರ್ಕಾರದಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೆಟ್ಟು, ಪೋಷಿಸಿ ಬೆಳೆಸಿದರೆ ಅದರ ಫಲವನ್ನು ಮುಂದೊಂದು ದಿನ ನಾವೇ ಉಣ್ಣುತ್ತೇವೆ ಎಂದು ಹೇಳಿದರು.

Tap to resize

Latest Videos

ಹಸಿರಿಲ್ಲದೇ ಉಸಿರಿಲ್ಲ ಎಂಬ ಧ್ಯೇಯ ವಾಕ್ಯ ನಮ್ಮೆಲ್ಲರ ಉಸಿರಾಗಬೇಕು. ಗಿಡ ಮರಗಳು ಇದ್ದರಷ್ಟೇ ನಾವು ಉಸಿರಾಡಲು ಸಾಧ್ಯ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ದಿನೇ ದಿನೇ ನಾಡು ಕಾಂಕ್ರೀಟ್‌ ನಾಡಾಗುತ್ತಿದೆ. ಮನೆಗಳು ಬೆಳೆದಷ್ಟುಮರಗಳು ಬೆಳೆಯಬೇಕು. ನಾಡು ಮರಗಳಿಲ್ಲದೇ ಬರಡಾದರೆ, ಮುಂಬರುವ ದಿನಗಳೂ ನಮ್ಮ ಪಾಲಿಗೆ ಬರಡಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಶಾಸಕ ಕೃಷ್ಣಪ್ಪ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಅಧಿಕಾರಿಗಳಿಗೆ ಸಸಿ ನೆಟ್ಟು ಪೋಷಿಸುವ ಬಗ್ಗೆ ಪ್ರಮಾಣ ವಚನ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಈಶ್ವರಯ್ಯ, ಚಿಕ್ಕನಾಯಕನಹಳ್ಳಿ ಪ್ರಾದೇಶಿಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್‌, ಸಾಮಾಜಿಕ ವಲಯ ಸಂರಕ್ಷಣಾಧಿಕಾರಿ ಲಿಂಗರಾಜು, ಅರಣ್ಯ ಇಲಾಖಾ ನೌಕರರಾದ ಭೀಮೇಗೌಡ, ಗೌರಿಶಂಕರ್‌, ನಂದೀಶ್‌, ರೂಪೇಶ್‌, ಉಪನ್ಯಾಸಕರಾದ ವಿಜಯಕುಮಾರ್‌, ರಂಗನಾಥ್‌, ಜೆಡಿಎಸ್‌ನ ವಕ್ತಾರ ವೆಂಕಟಾಪುರ ಯೋಗೀಶ್‌, ಆನೇಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪುನೀತ್‌, ಜಕ್ಕನಹಳ್ಳಿ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪರಿಸರ ಉಳಿಸಿ

ಕೋಲಾರ (ಜು.03): ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್‌ ಮಹತ್ವವನ್ನು ನಮಗೆಲ್ಲ ತೋರಿಸಿ ಕೊಟ್ಟಿದೆ. ಅದರಿಂದಾಗಿ ಗಿಡ, ಮರಗಳ ಮಹತ್ವವನ್ನು ಅರಿತು ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡವನ್ನು ನೆಟ್ಟು ಪೋಷಿಸುವ ಕಾರ್ಯ ಮಾಡಬೇಕು ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು. ತಾಲೂಕಿನ ವಕ್ಕಲೇರಿ ಅಂಬೇಡ್ಕರ್‌ ಬಾಲಕಿಯರ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ, ಪೋಲಿಸ್‌ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ 2023ರ ವನಮಹೋತ್ಸವದಲ್ಲಿ ಮಾತನಾಡಿ, ಮನುಷ್ಯ ಜೀವಿಸಲು ಪ್ರಮುಖವಾಗಿ ಆಮ್ಲಜನಕ ಬೇಕು. ಮರಗಿಡಗಳನ್ನು ಬೆಳೆಸುವುದು ಕಷ್ಟ, ಆದರೆ ಅವುಗಳನ್ನು ನಾಶ ಮಾಡುವುದು ಸುಲಭ. ಯಾವುದೇ ಮರಗಳನ್ನು ನಾಶ ಮಾಡಬಾರದು ಎಂದರು.

ಶಾಲೆ, ಹಾಸ್ಟೆಲ್‌ ಆವರಣದಲ್ಲಿ ಕೈತೋಟ: ಪ್ರತಿಯೊಂದು ಶಾಲಾ ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಜೊತೆಯಾಗಿ ಕೈತೋಟಗಳನ್ನು ಮಾಡಬೇಕಾಗಿದೆ, ತರಕಾರಿಗಳನ್ನು ತಾವೇ ಬೆಳೆಯುವುದು ಹೇಗೆ ಅದರ ಮಹತ್ವ ಗೊತ್ತಾಗುತ್ತದೆ ಜೊತೆಗೆ ಆಸಕ್ತಿ ಬರುತ್ತದೆ. ನೀವು ಎಲ್ಲರೂ ಒಂದು ಗುರುತುಗಳನ್ನು ಬಿಟ್ಟು ಹೋಗುವ ರೀತಿಯಲ್ಲಿ ತಂದೆ ತಾಯಿಗಳಿಗೆ ಒಳ್ಳೆಯ ಪ್ರಜೆಗಳಾಗುವಂತೆ ನಡೆದುಕೊಳ್ಳಬೇಕು ಎಂದರು. ವಿಧಾನಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌ ಕುಮಾರ್‌ ಮಾತನಾಡಿ, ನಮ್ಮ ಉಳಿವಿಗಾಗಿ ಮರಗಿಡಗಳನ್ನು ಬೆಳೆಸಿ ರಕ್ಷಿಸಬೇಕು. ಸರ್ಕಾರದ ಜನಪ್ರಿಯ ಯೋಜನೆಯನ್ನು ಜವಾಬ್ದಾರಿಯಿಂದ ನಾವು ಎಲ್ಲರೂ ಒಗ್ಗಟ್ಟಿನಿಂದ ನಿರ್ವಹಿಸಬೇಕು, ಜನಸಂಖ್ಯೆಗೆ ಅನುಗುಣವಾಗಿ ಅವಶ್ಯಕತೆ ಇರುವ ಆಮ್ಲಜನಕವನ್ನು ಉತ್ಪಾದಿಸಲು ವರ್ಷಕ್ಕೆ ಐದು ಕೋಟಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕಾಗಿದೆ ಎಂದರು.

click me!