ವಿದ್ಯುತ್‌ ಕಂಬಗಳಲ್ಲಿದ್ದ ಅ​ಲ್ಯೂಮಿನಿಯಂ ಪಟ್ಟಿಗಳೇ ಕಳವು

By Kannadaprabha News  |  First Published Oct 10, 2022, 5:52 AM IST

 ಬೆಂಗಳೂರು - ಮೈಸೂರು ಹೆದ್ದಾರಿ ಪಕ್ಕದ ವಿದ್ಯುತ್‌ ಕಂಬಗಳಲ್ಲಿ ದುಷ್ಕರ್ಮಿಗಳು ಅ​ಲ್ಯೂಮಿನಿಯಂ ಪಟ್ಟಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.


  ಮಂಡ್ಯ (ಅ.10): ಬೆಂಗಳೂರು - ಮೈಸೂರು ಹೆದ್ದಾರಿ ಪಕ್ಕದ ವಿದ್ಯುತ್‌ ಕಂಬಗಳಲ್ಲಿ ದುಷ್ಕರ್ಮಿಗಳು ಅ​ಲ್ಯೂಮಿನಿಯಂ ಪಟ್ಟಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ತಾ​ಲೂ​ಕಿನ ಬೂ​ದ​ ನೂರು ಸ​ಮೀ​ಪದ ಹೆ​ದ್ದಾರಿ (Highway) ಬ​ದಿ​ಯಲ್ಲಿ ಅ​ಳ​ವ​ಡಿ​ಸಿ​ರುವ ವಿ​ದ್ಯುತ್‌ ಕಂಬ​ಗ​ಳಿಂದ(Power Poll) ಅ​ಲ್ಯೂ​ಮಿ​ನಿಯಂ ಪ​ಟ್ಟಿ​ಗ​ಳನ್ನು ಬಿ​ಚ್ಚಿ​ಕೊಂಡು ಹೋಗಿದ್ದಾರೆ. ಇದರಿಂದ ವಿದ್ಯುತ್‌ ಕಂಬದ ಅರ್ಧಭಾಗ ಪಟ್ಟಿಗಳಿಲ್ಲದೆ ಬೋಳು ಬೋಳಾಗಿ ಕಾಣುತ್ತಿದೆ.

Tap to resize

Latest Videos

ಕು​ಡಿ​ತದ (Drunkers) ಚ​ಟಕ್ಕೆ ಬ​ಲಿ​ಯಾ​ಗಿ​ರುವ ದು​ಷ್ಕರ್ಮಿಗಳು ಕು​ಡಿ​ತಕ್ಕೆ ಹಣ(Money) ಸಿ​ಗ​ದಿ​ದ್ದಾಗ ಇಂತಹ ಸಣ್ಣ ಪುಟ್ಟಕ​ಳ್ಳ​ತ​ನ​ಗ​ಳನ್ನು ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಮದ್ಯವ್ಯಸನಿಗಳೇ ಅಲ್ಯುಮಿನಿಯಂ ಪಟ್ಟಿಗಳನ್ನು ಕದ್ದು ಮಾ​ರಾಟ ಮಾ​ಡಿ​ರ​ಬ​ಹುದು ಎಂದು ಶಂಕಿಸಲಾಗಿದೆ.

ಹೆ​ದ್ದಾ​ರಿ ಬ​ದಿ​ಯಲ್ಲಿ ಅ​ಳ​ವ​ಡಿ​ಸಿ​ರುವ ಸಾ​ಕಷ್ಟುವಿ​ದ್ಯುತ್‌ ಕಂಬ​ಗ​ಳಲ್ಲಿ ಇಂತಹ ಕೃ​ತ್ಯ​ಗ​ಳನ್ನು ನ​ಡೆ​ಸ​ಲಾ​ಗಿದ್ದು, ಇ​ದ​ರಿಂದಾಗಿ ಕಂಬ​ಗಳು ಮು​ರಿದು ಬೀ​ಳುವ ಆ​ತಂಕ​ ವ್ಯಕ್ತವಾಗಿದೆ.

ಕುಡಿತದ ಚಟಕ್ಕೆ ಬಿದ್ದ ಕೆಲ ಪುಂಡರು ನೂತನವಾಗಿ ಹೆದ್ದಾರಿ ಬದಿ ಅಳವಡಿಸಿದ್ದ ಅಲ್ಯೂಮಿನಿಯಂ ಪ್ಲೇಟ್‌ನ ತಡೆ ಗೋಡೆಗಳನ್ನು ಬಿಚ್ಚಿ ಕದ್ದೊಯ್ದಿದ್ದಾರೆ. ಇದು ಸಾಲದೆಂಬಂತೆ ಫೆä್ಲೕ-ಓವರ್‌ಗಳು ಹಾಗೂ ರಸ್ತೆ ಬದಿ ಅಳವಡಿಸಿದ್ದ ಎತ್ತರದ ವಿದ್ಯುತ್‌ ಕಂಬಗಳಿಗೆ ಅಳವಡಿಸಿರೋ ಅಡ್ಡ ಪಟ್ಟಿಯ ಅಲ್ಯೂಮಿನಿಯಂ ಪ್ಲೇಟ್‌ಗಳನ್ನು ಕೈಗೆ ಎಟಕುವಷ್ಟು ದೂರದವರೆಗೆ ನಟ್ಟು ಬೋಲ್ಟ್‌ ಬಿಚ್ಚಿ ಕದ್ದೊಯ್ದಿದ್ದಾರೆ.

ಹಾಡ ಹಗಲೇ ಹೆದ್ದಾರಿಯಲ್ಲಿ ಎಣ್ಣೆ ಪಾರ್ಟಿ

ಮತ್ತೊಂದು ಕಡೆ ಹೆದ್ದಾರಿಯಲ್ಲಿ ಹಾಡ ಹಗಲೇ ರಾಜಾ ರೋಷವಾಗಿಯೇ ಯುವಕರ ಗುಂಪು ಎಣ್ಣೆ ಪಾರ್ಟಿ ಮಾಡುತ್ತಿದೆ. ಪಾರ್ಟಿ ಮುಗಿದ ಬಳಿಕ ಮದ್ಯದ ಬಾಟಲಿಗಳನ್ನು ಹೆದ್ದಾರಿಯ ರಸ್ತೆಯಲ್ಲಿ ಚೆಲ್ಲಾ ಪಿಲ್ಲಿಯಾಗಿ ಒಡೆದು ಹಾಕಿದ್ದಾರೆ. ಬಾಟಲಿಯ ಚೂರುಗಳು ರಸ್ತೆಯ ಪಕ್ಕದಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಅಲ್ಲದೆ ರೈತರ ಜಮೀನುಗಳಲ್ಲೂ ಬಾಟಲಿಗಳ ರಾಶಿ ಬಿದ್ದಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಮದ್ದೂರು ಪಟ್ಟಣ ಸೇರಿದಂತೆ ಹಲವು ಕಡೆ ನಡೆಯುತ್ತಿರುವುದರಿಂದ ಈ ರಸ್ತೆ ವಾಹನ ಸಂಚಾರವಿಲ್ಲದೆ ನಿರ್ಜನ ಪ್ರದೇಶದಂತೆ ಕಾಣುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಮದ್ಯವ್ಯಸನಿ ಯುವಕರು ನಿತ್ಯ ಹೆದ್ದಾರಿಯಲ್ಲಿ ಹಾಡಹಗಲೇ ರಾಜಾರೋಷವಾಗಿ ಪಾರ್ಟಿ ಮಾಡಿಕೊಂಡು ತಮ್ಮ ಅಡ್ಡೆಯನ್ನಾಗಿಸಿಕೊಂಡಿದ್ದಾರೆ. ಅಲ್ಲದೆ, ಹೆದ್ದಾರಿಯಲ್ಲೇ ಕುಡಿದು ಬಾಟಲಿಗಳನ್ನು ರಸ್ತೆಯಲ್ಲಿ ಒಡೆದು ಕೆಲವನ್ನು ಬದಿಗೆ ಬಿಸಾಡಿ ಹೋಗಿದ್ದಾರೆ. ಇದರಿಂದ ಜನರ ಓಡಾಟಕ್ಕೆ ತೊಂದರೆ ಆಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇದರ ಜೊತೆ ಅಕ್ಕ-ಪಕ್ಕದ ರೈತರ ಜಮೀನಿನಲ್ಲಿ ಕೂಡ ಎಳನೀರು ಹಾಗೂ ಕಾಯಿಗಳನ್ನು ಕದ್ದೊಯ್ಯುತ್ತಿದ್ದಾರೆ. ವಿದ್ಯುತ್‌ ಕಂಬಗಳ ಅಡ್ಡಪಟ್ಟಿ, ಅಲ್ಯೂಮಿನಿಯಂ ಫ್ಲೇಟ್‌ ಗಳು ಸಾವಿರಾರು ರು. ಮೌಲ್ಯದ ಬೆಲೆ ಬಾಳುವ ಕಾರಣದಿಂದ ಬಹುತೇಕ ಹೆದ್ದಾರಿ ಪಕ್ಕದ ಈ ವಿದ್ಯುತ್‌ ಕಂಬದ ಪ್ಲೇಟ್‌ಗಳ ಕಳವಾಗಿದ್ದು, ಇದೀಗ ಅವುಗಳು ಗಾಳಿ ಬೀಸಿದರೆ ಕೆಳಕ್ಕೆ ಬಿದ್ದು ಅಪಾಯ ಸಂಭವಿಸುವ ಆತಂಕ ಎದುರಾಗಿದೆ. ಈ ಕುರಿತಾಗಿ ಹಲವು ರೈತರು ಪೊಲೀಸರಿಗೂ ಮ ತ್ತು ಹೆದ್ದಾರಿ ಪ್ರಾಧಿಕಾರದವರು ಕ್ರಮ ಕೈಗೊಂಡು ಮುಂದಾಗುವ ಅನಾಹುತ ತಪ್ಪಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

  •  ವಿದ್ಯುತ್‌ ಕಂಬಗಳಲ್ಲಿದ್ದ ಅ​ಲ್ಯೂಮಿನಿಯಂ ಪಟ್ಟಿಗಳೇ ಕಳವು
  • - ಹೆದ್ದಾರಿಯಲ್ಲೇ ಎಣ್ಣೆ ಪಾರ್ಟಿ, ಜಮೀನುಗಳಲ್ಲಿ ಬಾಟಲಿಗಳ ರಾಶಿ
  • ಕಂಬದ ಅರ್ಧಭಾಗ ಪಟ್ಟಿಗಳಿಲ್ಲದೆ ಬೋಳು ಬೋಳಾಗಿ ಕಾಣುತ್ತಿದೆ.
  • ಕಂಬ​ಗಳು ಮು​ರಿದು ಬೀ​ಳುವ ಆ​ತಂಕ​ ವ್ಯಕ್ತವಾಗಿದೆ.
  • ಬಹುತೇಕ ಹೆದ್ದಾರಿ ಪಕ್ಕದ ಈ ವಿದ್ಯುತ್‌ ಕಂಬದ ಪ್ಲೇಟ್‌ಗಳ ಕಳವಾಗಿದೆ
  • - ಕುಡುಕ ಕಳ್ಳರಿಂದಲೇ ಕದ್ದು ಮಾರಾಟ ಮಾಡಿರುವ ಶಂಕೆ
  • ಹೆದ್ದಾರಿ ಬದಿಯ ವಿದ್ಯುತ್‌ ಕಂಬಗಳಿಂದ ಅಲ್ಯುಮಿನಿಯಂ ಪಟ್ಟಿ 
click me!