ಧ್ವಂಸವಾದ 3000 ವರ್ಷ ಹಳೆಯ ಹುಚ್ಚಗಣಿ ದೇಗುಲ ಪುರಾತತ್ವ ಇಲಾಖೆಗೆ ಸೇರಿಲ್ಲ

Kannadaprabha News   | Asianet News
Published : Sep 19, 2021, 12:53 PM IST
ಧ್ವಂಸವಾದ 3000 ವರ್ಷ ಹಳೆಯ ಹುಚ್ಚಗಣಿ ದೇಗುಲ ಪುರಾತತ್ವ ಇಲಾಖೆಗೆ ಸೇರಿಲ್ಲ

ಸಾರಾಂಶ

ನಂಜನಗೂಡು ತಾಲೂಕಿನ ಹುಚ್ಚಗಣಿ ಮಹದೇವಮ್ಮ ಪುರಾತನ ದೇಗುಲ ಅಲ್ಲ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತರ ಮಾಹಿತಿ

ಮೈಸೂರು (ಸೆ.19): ನಂಜನಗೂಡು ತಾಲೂಕಿನ ಹುಚ್ಚಗಣಿ ಮಹದೇವಮ್ಮ ಪುರಾತನ ದೇಗುಲ ಅಲ್ಲ ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ. 

ಗ್ರಾಮದ ದೇವಾಲಯವು ಪುರಾತತ್ವ ಇಲಾಖೆಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಸೇರಿಲ್ಲ ಎಂದು ಷರಾ ಬರೆದು ನಂಜನಗೂಡು ತಹಸೀಲ್ದಾರ್‌ಗೆ ತಿಳಿಸಿದ್ದಾರೆ. ದೇವಾಲಯ ನಿರ್ಮಾಣವಾಗಿದ್ದ ಸ್ಥಳದ ನಕ್ಷೆ ಲಭ್ಯವಾಗಿದೆ ಎಂದಿದ್ದಾರೆ. 

3000 ಸಾವಿರ ವರ್ಷದ ನಂಜನಗೂಡು ದೇಗುಲವು ಧ್ವಂಸ : ಬೃಹತ್ ಪ್ರತಿಭಟನೆ

ದೇವಾಲಯ ಹರದನಹಳ್ಳಿ ಸರ್ವೆ ನಂ 126ರ ಪಕ್ಕದಲ್ಲಿದೆ. ರಾಜ್ಯ ಹೆದ್ದಾರಿ 57ರ ಸರ್ಕಾರಿ ಜಾಗದಲ್ಲಿದೆ ಎಂದು ನಕ್ಷೆ ವರದಿ ತಿಳಿಸಿದೆ.

ಮೈಸೂರಿನಲ್ಲಿ 93 ದೇಗುಲಗಳ ಧ್ವಂಸಕ್ಕೆ ನೀಡಿದ ಆದೇಶದಂತೆ 3000 ವರ್ಷದಷ್ಟು ಹಳೆಯ ಹುಚ್ಚಗಣಿ ದೇಗುಲವನ್ನು ಧ್ವಂಸ ಮಾಡಲಾಗಿತ್ತು. ಇದನ್ನು ಅತ್ಯಂತ ಪುರಾತನ ಕಾಲದ ದೇಗುಲ ಎನ್ನುವುದಕ್ಕೆ ಅನೇಕ ಸಾಕ್ಷ್ಯಗಳು ಲಭ್ಯವಾಗಿದ್ದವು. 

PREV
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ