ಶಿಕ್ಷಕರ ಟಿಇಟಿ ಪರೀಕ್ಷೆ ತೊಡಕುಗಳ ಪರಿಹಾರಕ್ಕೆ ಚಿಂತನೆ

Suvarna News   | Asianet News
Published : Jan 25, 2020, 02:44 PM ISTUpdated : Jan 25, 2020, 03:06 PM IST
ಶಿಕ್ಷಕರ ಟಿಇಟಿ ಪರೀಕ್ಷೆ ತೊಡಕುಗಳ ಪರಿಹಾರಕ್ಕೆ ಚಿಂತನೆ

ಸಾರಾಂಶ

ಶಿಕ್ಷಕರ ಟಿಇಟಿ ಪರೀಕ್ಷೆಯಲ್ಲಿ ನೇಮಕಾತಿ ಹಾಗೂ ಪ್ರಮೋಷನ್‌ಗಿರುವ ತೊಡಕುಗಳನ್ನ ಪರಿಹಾರ ಮಾಡಲು ಚರ್ಚಿಸಲಾಗಿದೆ. ಅರ್ಹತಾ ಪರೀಕ್ಷೆಯಿಂದಾಗಿ ಶಿಕ್ಷಕರ ಆಯ್ಕೆ ಕಷ್ಟವಾಗುತ್ತಿದ್ದು ಈ ನಿಟ್ಟಿನಲ್ಲಿ ಕೆಲವು ಮಾನದಂಡಗಳನ್ನು ರದ್ದು ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ತುಮಕೂರು(ಜ.25): ಶಿಕ್ಷಕರ ಟಿಇಟಿ ಪರೀಕ್ಷೆ ನೇಮಕಾತಿ ಹಾಗೂ ಪ್ರಮೋಷನ್ ತೊಡಕುಗಳನ್ನ ಪರಿಹಾರ ಮಾಡಲು ಚರ್ಚಿಸಲಾಗಿದೆ. ಅರ್ಹತಾ ಪರೀಕ್ಷೆಯಿಂದಾಗಿ ಶಿಕ್ಷಕರ ಆಯ್ಕೆ ಕಷ್ಟವಾಗುತ್ತಿದ್ದು ಈ ನಿಟ್ಟಿನಲ್ಲಿ ಕೆಲವು ಮಾನದಂಡಗಳನ್ನು ರದ್ದು ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಶಿಕ್ಷಣ‌ ಸಚಿವ ಸುರೇಶ್ ಕುಮಾರ್, ಶಿಕ್ಷಕರ ಟಿಇಟಿ ಪರೀಕ್ಷೆ ತೊಡಕುಗಳನ್ನು ಪರಿಹಾರ ಮಾಡಲು ಚರ್ಚಿಸಲಾಗಿದೆ. ಸಿಇಟಿ ಪರೀಕ್ಷೆಯಲ್ಲಿ  C ಮತ್ತು R  ರೂಲ್ಸ್‌ನಲ್ಲಿ ಕೆಲವು ಅರ್ಹತಾ ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಇದರಿಂದ ಶಿಕ್ಷಕರ ಆಯ್ಕೆ ಕಠಿಣ ವಾಗಿದೆ. ಈ ಮಾನದಂಡಗಳು ಮಟ್ಟ ಬೇಕೋ ಬೇಡವೋ ಅನ್ನುವ ಚರ್ಚೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಡೀಸಿ ಕಚೇರಿಗಳಲ್ಲಿ ಪಿಯು ಪರೀಕ್ಷೆ ನಿಯಂತ್ರಣ: ಸುರೇಶ್‌

ಈ ವಿಚಾರದಲ್ಲಿ ಸದ್ಯದಲ್ಲೇ ಪರಿಹಾರ ದೊರೆಯಲಿದೆ. ಹಿಂದಿನ ಸರ್ಕಾರ ಹೊರಡಿಸಿದ ಆದೇಶದಂತೆ ಆರ್‌ಟಿಇ  ಪದ್ದತಿ ಮುಂದುವರೆದಿದೆ. ಅರ್ಜಿ ಹಾಕುವ ವಿದ್ಯಾರ್ಥಿಯ ನಿವಾಸದ 1 ಕಿ.ಮಿ.ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇರಬಾರದು. ಅದೇ ಆದೇಶ ಮುಂದುವರೆದಿದೆ. ಬದಲಾವಣೆ ಬಗ್ಗೆ ಸಿಎಂ ಬಳಿ ಚರ್ಚಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೇರಳದ ವಾಟರ್ ಬೆಲ್ ಪದ್ಧತೆ ಜಾರಿ:

ಸರ್ಕಾರಿ ಶಾಲೆಯೂ ಸದೃಢವಾಗಬೇಕು ಎಂಬ ಆಶಯ ನನ್ನದು. ಎರಡರ ನಡುವೆ ಬ್ಯಾಲೆನ್ಸ್ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲಾ ಶಾಲೆಗಳಲ್ಲಿ ಶುದ್ದವಾದ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆರ್.ಒ.ಪ್ಲಾಂಟ್ ಗಳನ್ನು ಕೊಡುತಿದ್ದೇವೆ. ವಿದ್ಯಾರ್ಥಿಗಳಿಗೆ ನೀರು ಕುಡಿಯುವ ಅಭ್ಯಾಸ ಆಗಬೇಕು. ಆ ನಿಟ್ಟಿನಲ್ಲಿ ಕೇರಳ ಮಾದರಿಯಲ್ಲಿ ವಾಟರ್ ಬೆಲ್ ಪದ್ದತಿ ಜಾರಿ ಮಾಡುತ್ತೇವೆ ಎಂದಿದ್ದಾರೆ.

ಸರ್ಕಾರಿ ಶಾಲೆಯ ಆಂಗ್ಲ ಮಾಧ್ಯಮ ತರಗತಿಗಳು ಚೆನ್ನಾಗಿ‌ ನಡೆಯುತ್ತಿದೆ. ಇನ್ನೂ ಹೆಚ್ಚಿನ ಪಬ್ಲಿಕ್ ಶಾಲೆಗಳು ಬೇಕೆಂದು ಶಾಸಕರು ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!